newsics.com/ನ್ಯೂಸಿಕ್ಸ್
ಕಾಕ್ರೋಚ್ ಜನತಾ ಪಾರ್ಟಿ’ಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಹ್ಯಾಕ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದುಕೊಂಡು ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿದ್ದ ಈ ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದು, ಸದ್ಯ ಪೇಜ್ ನಿಯಂತ್ರಣ ತಪ್ಪಿರುವುದು ಆತಂಕ ಮೂಡಿಸಿದೆ.
https://www.instagram.com/reel/DYrMG5SRxIn/?igsh=dWRpYmFkaXh6Yndo
ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖರಾದ ಅಭಿಜೀತ್ ಅವರು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಇದರಿಂದಾಗಿ ನಮಗೆ ಅಕೌಂಟ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಮತ್ತು ಯಾವುದೇ ಹೊಸ ಪೋಸ್ಟ್‌ಗಳನ್ನು ಹಾಕಲು ತೊಂದರೆಯಾಗುತ್ತಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಖಾತೆಯನ್ನು ಮರಳಿ ಪಡೆಯಲು ತಾಂತ್ರಿಕ ತಂಡದೊಂದಿಗೆ ಈಗಾಗಲೇ ಪ್ರಯತ್ನಗಳನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದ್ದ ಈ ಪೇಜ್ ಹ್ಯಾಕ್ ಆಗಿರುವುದು ಅದರ ಬೆಂಬಲಿಗರು ಮತ್ತು ಫಾಲೋವರ್ಸ್‌ಗೆ ತೀವ್ರ ನಿರಾಶೆ ಉಂಟುಮಾಡಿದೆ. ಸೈಬರ್ ವಂಚಕರ ಈ ಕೃತ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಖಾತೆ ಹ್ಯಾಕ್ ಆದ ಬೆನ್ನಲ್ಲೇ ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿರುವ ಅಭಿಜೀತ್, ಇಂತಹ ಸಣ್ಣಪುಟ್ಟ ಅಡೆತಡೆಗಳಿಗೆ ನಾವು ಕೃತಕವಾಗಿ ಸೃಷ್ಟಿಸಿದ ಸವಾಲುಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದರೂ, ನಮ್ಮ ಸಿದ್ದಾಂತ ಮತ್ತು ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಅದು ನಿರಂತರವಾಗಿ ಮುಂದುವರೆಯುತ್ತದೆ,” ಎಂದು ಅವರು ದೃಢವಾಗಿ ಹೇಳಿದ್ದಾರೆ.
ಮುಂದಿನ ಒಂದು ವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಎಚ್ಚರಿಕೆ: ಅಲರ್ಟ್ ಘೋಷಣೆ