Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Totally confusion ಅಂತ್ಯಕ್ರಿಯೆಯಲ್ಲಿ ದಹನವಾದ ವ್ಯಕ್ತಿ ಮೂರನೇ ದಿನವೇ ಪ್ರತ್ಯಕ್ಷ: ಗ್ರಾಮಸ್ಥರು ಕಂಗಾಲು, ಪೊಲೀಸರ ಪೇಚಾಟ!
ದೇಶಪ್ರಮುಖ

Totally confusion ಅಂತ್ಯಕ್ರಿಯೆಯಲ್ಲಿ ದಹನವಾದ ವ್ಯಕ್ತಿ ಮೂರನೇ ದಿನವೇ ಪ್ರತ್ಯಕ್ಷ: ಗ್ರಾಮಸ್ಥರು ಕಂಗಾಲು, ಪೊಲೀಸರ ಪೇಚಾಟ!

Share
2 Min Read
SHARE

newsics.com | ನ್ಯೂಸಿಕ್ಸ್

ಮೃತಪಟ್ಟವನನ್ನು ಕುಟುಂಬಸ್ಥರೆಲ್ಲ ಸೇರಿ ಚಿತೆಗೆ ಬೆಂಕಿ ಹಚ್ಚಿ ಅಂತ್ಯಕ್ರಿಯೆ ಪೂರೈಸಿದ ವ್ಯಕ್ತಿಯೊಬ್ಬ, ಕೇವಲ ಮೂರೇ ದಿನಗಳಲ್ಲಿ ಜೀವಂತವಾಗಿ ಮನೆಗೆ ಹಿಂತಿರುಗಿದರೆ ಹೇಗಿರುತ್ತದೆ? ಕೇಳುವುದಕ್ಕೇ ಕಲ್ಪನೆಯಂತೆ ಅನಿಸಿದರೂ, ಇಂತಹದ್ದೊಂದು ನಂಬಲಾಗದ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಅಜಿತ್ಮಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಗ್ರಾಮವೇ ದಂಗಾಗಿದೆ.

ಉತ್ತರ ಪ್ರದೇಶದ ಭಿಖೇಪುರ್ ಗ್ರಾಮದ ಬಳಿ ಹೆದ್ದಾರಿ ಪಕ್ಕದಲ್ಲಿದ್ದ ಶಿಥಿಲಗೊಂಡ ಹೋಟೆಲ್ ಒಂದರ ಅವಶೇಷಗಳಲ್ಲಿ ತೀವ್ರ ದುರ್ವಾಸನೆ ಬರುತ್ತಿತ್ತು. ಜುಲೈ 18ರಂದು ಅಲ್ಲಿಗೆ ತೆರಳಿದ ಪೊಲೀಸರಿಗೆ ಮುಖ ನಜ್ಜುಗುಜ್ಜಾಗಿದ್ದ, ಕೊಳೆತ ಸ್ಥಿತಿಯಲ್ಲಿದ್ದ ಯುವಕನ ಶವವೊಂದು ಪತ್ತೆಯಾಗಿತ್ತು. ಮೃತನ ಮೆರೂನ್ ಶರ್ಟ್, ನೀಲಿ ಪ್ಯಾಂಟ್ ಹಾಗೂ ಮಣಿಕಟ್ಟಿನ ಬಳೆಯನ್ನು ಆಧರಿಸಿ ಯಾರಾದರೂ ಕೊಲೆ ಮಾಡಿರಬಹುದು ಎಂದು ಶಂಕಿಸಿದ ಪೊಲೀಸರು, ಶವವನ್ನು 72 ಗಂಟೆಗಳ ಕಾಲ ಶವಾಗಾರದಲ್ಲಿರಿಸಿದ್ದರು.

ತಪ್ಪು ಗುರುತಿಸುವಿಕೆಯಿಂದ ನಡೆದ ಅಂತ್ಯಕ್ರಿಯೆ!

ಸೈದ್‌ಪುರ ಗ್ರಾಮದ ನಿವಾಸಿ ದಶರಥ್ ಸಿಂಗ್ ಎಂಬುವರ ಸಹೋದರ ಕಮಲ್ ಸಿಂಗ್ ಜೂನ್ 25 ರಿಂದ ಕೌಟುಂಬಿಕ ಕಲಹದ ಕಾರಣದಿಂದ ಮನೆಯಿಂದ ಕಾಣೆಯಾಗಿದ್ದರು. ಜುಲೈ 21 ರಂದು ಶವಾಗಾರದಲ್ಲಿದ್ದ ದೇಹವನ್ನು ನೋಡಿದ ದಶರಥ್, ಬಟ್ಟೆ ಮತ್ತು ದೇಹದ ವಿನ್ಯಾಸವನ್ನು ನೋಡಿ ಅದು ತನ್ನ ಸಹೋದರ ಕಮಲ್ ಸಿಂಗ್ ಎಂದೇ ನಂಬಿದರು. ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಕುಟುಂಬಸ್ಥರು ಹಿಂದೂ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರವನ್ನೂ ನೆರವೇರಿಸಿದರು.

ಮೂರನೇ ದಿನಕ್ಕೇ ‘ಸತ್ತ’ ವ್ಯಕ್ತಿ ಪ್ರತ್ಯಕ್ಷ!

ಮನೆಯಲ್ಲಿ ಅಂತಿಮ ಕಾರ್ಯಗಳ ಭಾಗವಾಗಿ ಶುದ್ಧೀಕರಣ ಸಮಾರಂಭದ ಸಿದ್ಧತೆಗಳು ನಡೆಯುತ್ತಿದ್ದವು. ಅಷ್ಟರಲ್ಲಿ, ಸತ್ತಿದ್ದಾನೆ ಎನ್ನಲಾದ ಕಮಲ್ ಸಿಂಗ್ ನಡೆದುಕೊಂಡು ಮನೆಗೆ ಬಂದೇ ಬಿಟ್ಟ! ಕಣ್ಣೆದುರೇ ‘ಸತ್ತ’ ವ್ಯಕ್ತಿ ಪ್ರತ್ಯಕ್ಷವಾದದ್ದನ್ನು ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಘಾತ ಮತ್ತು ಸಂತೋಷದ ನಡುವೆ ತತ್ತರಿಸಿಹೋದರು. ತಮ್ಮದೇ ತಿಥಿ ಸಿದ್ಧತೆಯನ್ನು ನೋಡಿ ಕಮಲ್ ಸಿಂಗ್ ಕೂಡ ಆಶ್ಚರ್ಯಚಕಿತರಾದರು. ನಾನು ಹರಿಯಾಣದ ಪಾಣಿಪತ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಅಪಘಾತ ಸಂಭವಿಸಿ ಕಾಲು ಮುರಿದಿತ್ತು. ಮೊಬೈಲ್ ಕೂಡ ಇರದ ಕಾರಣ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಪೋಲೀಸರಿಗೆ ಎದುರಾದ ದೊಡ್ಡ ಸವಾಲು!

ಕಮಲ್ ಸಿಂಗ್ ಜೀವಂತವಾಗಿ ಬಂದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಈಗ ಪೋಲೀಸರಿಗೆ ಅತಿ ದೊಡ್ಡ ಪ್ರಶ್ನೆ ಎದುರಾಗಿದೆ. ಹಾಗಾದರೆ ಕುಟುಂಬಸ್ಥರು ದಹನ ಮಾಡಿದ್ದು ಯಾರ ಮೃತದೇಹವನ್ನು? ಎನ್ನುವುದು. ಅಜಿತ್ಮಲ್ ಪೊಲೀಸ್ ಅಧಿಕಾರಿ (ಸಿಒ) ಮನೋಜ್ ಗಂಗ್ವಾರ್ ಮಾತನಾಡಿ, ಕಮಲ್ ಸಿಂಗ್ ಜೀವಂತವಾಗಿ ಹಿಂತಿರುಗಿದ್ದು ಸತ್ಯ. ಈಗ ದಹನಗೊಂಡ ಆ ಗುರುತು ಸಿಗದ ಶವ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಮರುತನಿಖೆ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ. ಆದರೆ, ‘ಸತ್ತವ’ ಬದುಕಿ ಬಂದ ಈ ವಿಸ್ಮಯಕಾರಿ ಘಟನೆ ಔರೈಯಾದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

6 Best Vegetables to Help Control High Blood Pressure Naturally ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಈ 6 ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ

Lucky Crystals for Every Zodiac Sign ನಿಮ್ಮ ರಾಶಿಗೆ ಸೂಕ್ತ ಕ್ರಿಸ್ಟಲ್ ಯಾವುದು? ಅದೃಷ್ಟ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿಗೆ ಅತ್ಯುತ್ತಮ ಆಯ್ಕೆಗಳು

TAGGED:#uttarpradesh #crime #police#reappear#crematedperson #news #newsics #kannadanews
Share This Article
Facebook Twitter Copy Link Print
Previous Article Energy Drinks Can No Longer Be Labeled as ‘Energy Drinks’ ಇನ್ನುಮುಂದೆ ಪಾನೀಯಗಳಿಗೆ ‘ಎನರ್ಜಿ ಡ್ರಿಂಕ್’ ಲೇಬಲ್‌ ಹಾಕುವಂತಿಲ್ಲ! ಯಾಕೆ ನಿಷೇಧ?
Next Article Bengaluru Hotels Consider Swiggy Boycott ಬೆಂಗಳೂರಲ್ಲಿ ಸ್ವಿಗ್ಗಿ ಬ್ಯಾನ್‌ಗೆ ಚಿಂತನೆ; ಇಂದು ಹೋಟೆಲ್ ಮಾಲೀಕರ ಸಂಘದ ತುರ್ತು ಸಭೆ

Popular Posts

Today Gold Rate ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದಿನ ನಿಖರ ದರ ಎಷ್ಟು?*

2 Min Read

Change Of Currency ₹10 ಮತ್ತು ₹20ರ ಹೊಸ ನೋಟುಗಳು ಬರಲಿವೆಯೇ? ಹಳೆಯ ನೋಟುಗಳನ್ನು ಬದಲಾಯಿಸಬೇಕೇ? RBI ಮಹತ್ವದ ಸ್ಪಷ್ಟನೆ

3 Min Read

Bengaluru Hotels Consider Swiggy Boycott ಬೆಂಗಳೂರಲ್ಲಿ ಸ್ವಿಗ್ಗಿ ಬ್ಯಾನ್‌ಗೆ ಚಿಂತನೆ; ಇಂದು ಹೋಟೆಲ್ ಮಾಲೀಕರ ಸಂಘದ ತುರ್ತು ಸಭೆ

1 Min Read

Totally confusion ಅಂತ್ಯಕ್ರಿಯೆಯಲ್ಲಿ ದಹನವಾದ ವ್ಯಕ್ತಿ ಮೂರನೇ ದಿನವೇ ಪ್ರತ್ಯಕ್ಷ: ಗ್ರಾಮಸ್ಥರು ಕಂಗಾಲು, ಪೊಲೀಸರ ಪೇಚಾಟ!

2 Min Read

You Might Also Like

Crimeಪ್ರಮುಖಮನರಂಜನೆ

Renukaswamy Case|ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Astrology ಮಿಥುನ ರಾಶಿಗೆ ಮಂಗಳನ ಪ್ರವೇಶ: ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ

3 Min Read
ದೇಶಪ್ರಮುಖ

Kapil Sibal ಸಿಜೆಪಿಯ ಕಾನೂನು ನೆರವು ನಿಧಿಗೆ ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್!

2 Min Read
ದೇಶಆರೋಗ್ಯಟೇಸ್ಟ್ಪ್ರಮುಖವೈರಲ್

Soya chop ಸೋಯಾ ಚಾಪ್ ಹಿಟ್ಟಿನ ಮೇಲೆ ಅರೆಬೆತ್ತಲೆ ಉರುಳುಸೇವೆ!? ತಿನ್ನುವ ಮುನ್ನ ಈ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?