Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Road Mishap ಲಾರಿಗೆ ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ; ಆರು ಯುವಕರು ಸ್ಥಳದಲ್ಲೇ ಸಾ*ವು
ಪ್ರಮುಖಕರ್ನಾಟಕ

Road Mishap ಲಾರಿಗೆ ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ; ಆರು ಯುವಕರು ಸ್ಥಳದಲ್ಲೇ ಸಾ*ವು

Share
1 Min Read
SHARE

newsics.com | ನ್ಯೂಸಿಕ್ಸ್

Contents
ಚಿಕ್ಕಮಗಳೂರು ಪ್ರವಾಸಕ್ಕೆ ಹೊರಟಿದ್ದಾಗ ಕಾದಿತ್ತು ಗಂಡಾಂತರಮೃತರ ಮತ್ತು ಗಾಯಗೊಂಡವರ ವಿವರ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಅರಬೈಲ್ ಘಾಟ್‌ನ ಬಳಗಾರ್ ಎಂಬಲ್ಲಿ (ಇಂದು) ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆರು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ಚಿಕ್ಕಮಗಳೂರು ಪ್ರವಾಸಕ್ಕೆ ಹೊರಟಿದ್ದಾಗ ಕಾದಿತ್ತು ಗಂಡಾಂತರ

ಅಪಘಾತಕ್ಕೀಡಾದ ಕ್ರೂಸರ್ ವಾಹನದಲ್ಲಿದ್ದವರೆಲ್ಲರೂ (KA 19 AA 5920) ಧಾರವಾಡ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ದುಡಿಯುತ್ತಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸದ ಖುಷಿಯಲ್ಲಿದ್ದ ಈ ಯುವಕರಿಗೆ ಅರಬೈಲ್ ಘಟ್ಟದ ಬಳಿ ಎದುರಿನಿಂದ ಬಂದ ಲಾರಿ (KA 22 AA 1008) ಕಾಳಸರ್ಪದಂತೆ ಅಪ್ಪಳಿಸಿದೆ. ಡಿಕ್ಕಿಯ ರಭಸ ಎಷ್ಟು ಭೀಕರವಾಗಿತ್ತೆಂದರೆ ಕ್ರೂಸರ್ ಗಾಡಿ ಕಬ್ಬಿಣದ ಮುದ್ದೆಯಂತಾಗಿದೆ.

ಮೃತರ ಮತ್ತು ಗಾಯಗೊಂಡವರ ವಿವರ

ಅಪಘಾತದ ಸ್ಥಳದಲ್ಲೇ ಐದು ಜನ ಕೊನೆಯುಸಿರೆಳೆದರೆ, ಮತ್ತೊಬ್ಬರು ಆಸ್ಪತ್ರೆಯ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ (26), ಅಭಿಷೇಕ್ (26) ಹಾಗೂ ಸಂಜೀವ (ಸಂಜಯ ಅಂಗಡಿ) ಎಂದು ಗುರುತಿಸಲಾಗಿದೆ.

ಪ್ರಾಣಾಪಾಯದಿಂದ ಪಾರಾಗಿ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಶಿವರಾಜ್ ದುರ್ಗಪ್ಪ ಮಡಿವಾಳ್ (22), ಮಂಜುನಾಥ್ ಅಶೋಕ್ ಚುಲಕಿ (32), ಸಚಿನ್ ಹಾಗೂ ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28) ಅವರಿಗೆ ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು, ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಯಲ್ಲಾಪುರ ಪೊಲೀಸರು ಕ್ರೂಸರ್ ಒಳಗಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಭೀಕರ ಅಪಘಾತದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Rain Alert ಮುಂದಿನ 24 ಗಂಟೆ ಭೀಕರ ಮಳೆ: ಯಾವೆಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಹೈ ಅಲರ್ಟ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

TAGGED:#uttar kannada #road mishap #crime #swiggy delivery #youths
Share This Article
Facebook Twitter Copy Link Print
Previous Article Rain Alert ಮುಂದಿನ 24 ಗಂಟೆ ಭೀಕರ ಮಳೆ: ಯಾವೆಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಹೈ ಅಲರ್ಟ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Next Article Alcohol ಆಲ್ಕೋಹಾಲ್ ಪ್ರಿಯರೇ ಎಚ್ಚರ: ನಿಮ್ಮ ಹಾರ್ಟ್ ಸುರಕ್ಷಿತವಾಗಿರಬೇಕಾದ್ರೆ ಇಂದೇ ಈ ಕೆಲಸ ಮಾಡಿ

Popular Posts

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

1 Min Read

E85 fuel ಶೀಘ್ರದಲ್ಲೇ ಫ್ಲೆಕ್ಸ್-ಫ್ಯುಯೆಲ್ ಕಾರುಗಳಿಗಾಗಿ ಸಿಗಲಿದೆ ಇ85 ಎಥೆನಾಲ್ ಇಂಧನ

3 Min Read

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

1 Min Read

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

2 Min Read

You Might Also Like

ಕರ್ನಾಟಕಪ್ರಮುಖ

Government Bus ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಧೂಮಪಾನ ಮಾಡಿದರೆ, ಗುಟ್ಕಾ ಜಗಿದರೆ, ಉಗುಳಿದರೆ ಭಾರೀ ದಂಡ!

1 Min Read
ಕರ್ನಾಟಕದೇಶಪ್ರಮುಖ

Medical seat fraud ಮೆಡಿಕಲ್ ಸೀಟ್ ವಂಚನೆ: ಮಾಜಿ ಸಚಿವ ಆರ್‌.ಎಲ್.ಜಾಲಪ್ಪ ಸೊಸೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ

1 Min Read
ದೇಶಪ್ರಮುಖ

TCS ಲೈಂಗಿಕ ಕಿರುಕುಳ ಕೇಸ್: ಗರ್ಭಿಣಿ ನಿಧಾ ಖಾನ್‌ಗೆ ಜಾಮೀನು

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?