Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್‌; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು
ದೇಶಪ್ರಮುಖವಿದೇಶ

ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್‌; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು

Share
1 Min Read
SHARE

newsics.com/ನ್ಯೂಸಿಕ್ಸ್

ಜೋಹಾನ್ಸ್‌ಬರ್ಗ್: ಅನಾರೋಗ್ಯದ ಕಾರಣ ಪದೇ ಪದೇ ರಜೆ ಕೇಳಿದರೂ ಮ್ಯಾನೇಜರ್‌ ನಿರಾಕರಿಸಿದ ಪರಿಣಾಮ, ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಜಿಸಿನಾ ಧ್ಲಾಧ್ಲಾ ಎಂಬ ಯುವತಿ ಕಚೇರಿಯ ಶೌಚಾಲಯದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ರೋಸ್‌ಬ್ಯಾಂಕ್‌ನಲ್ಲಿ ನಡೆದಿದೆ.

 

ರೋಸ್‌ಬ್ಯಾಂಕ್‌ನಲ್ಲಿರುವ ಕಂಪನಿಯೊಂದರಲ್ಲಿ ಜಿಸಿನಾ ಕಾಲ್ ಸೆಂಟರ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯ ಮತ್ತು ಆಯಾಸದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಎರಡು ಬಾರಿ ವೈದ್ಯರ ಪ್ರಮಾಣಪತ್ರದೊಂದಿಗೆ ರಜೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಂಪನಿಯ ಮ್ಯಾನೇಜರ್‌ಗಳು ಇವರ ಮನವಿಯನ್ನು ಕಸದ ಬುಟ್ಟಿಗೆ ಎಸೆದು, ಕೆಲಸಕ್ಕೆ ಬರುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.

 

ಜಿಸಿನಾ ಅವರ ಸಹೋದ್ಯೋಗಿಯೊಬ್ಬರು ಮಾಧ್ಯಮಗಳ ಮುಂದೆ ಕಂಪನಿಯ ಕ್ರೌರ್ಯವನ್ನು ಬಿಚ್ಚಿಟ್ಟಿದ್ದು, ಕಳೆದ ಶುಕ್ರವಾರ ಜಿಸಿನಾ ಮಂಡಿಯೂರಿ ಅಳುತ್ತಾ ತನಗೆ ಹುಷಾರಿಲ್ಲ, ಆದರೂ ಶನಿವಾರ ಕೆಲಸಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಳು. ಬುಧವಾರ ಸಂಜೆ ಟೀಮ್ ಲೀಡರ್ ಅವಳನ್ನು ಕ್ಯಾಬಿನ್‌ಗೆ ಕರೆದು ಮಾತನಾಡುತ್ತಿದ್ದಾಗ ಅವಳು ಕಣ್ಣೀರು ಹಾಕುತ್ತಿರುವುದು ನಮಗೆ ಕಂಡಿತ್ತು. ಸಾವು ಸಾಮಾನ್ಯ ಇರಬಹುದು, ಆದರೆ ಜಿಸಿನಾ ಸಾವು ಆಫೀಸ್ ಶೌಚಾಲಯದಲ್ಲಿ ಈ ರೀತಿ ಒಂಟಿಯಾಗಿ ಆಗಬಾರದಿತ್ತು. ಕಂಪನಿಯ ನಡೆ ಅವಳ ಸಾವಿಗೆ ನೇರ ಕಾರಣ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಘಟನೆ ನಡೆದ ದಿನ ಜಿಸಿನಾ ಕಚೇರಿಯಲ್ಲೇ ತೀವ್ರ ಅಸ್ವಸ್ಥಗೊಂಡು ಶೌಚಾಲಯದಲ್ಲಿ ಕುಸಿದು ಬಿದ್ದಿದ್ದಾರೆ. ಆಫೀಸಿಗೆ ಹತ್ತಿರದಲ್ಲೇ ಖಾಸಗಿ ಆಸ್ಪತ್ರೆ ಇದ್ದರೂ, ಮ್ಯಾನೇಜರ್‌ಗಳು ಅವಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಬದಲು, ಆಸ್ಪತ್ರೆಗೆ ತಗಲುವ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬ ಚರ್ಚೆಯಲ್ಲಿ ಮುಳುಗಿದ್ದರು ಎಂದು ಜಿಸಿನಾ ಅವರ ಅತ್ತೆ ನೋಮುಸಾ ಆರೋಪಿಸಿದ್ದಾರೆ. ಮ್ಯಾನೇಜರ್‌ಗಳು ಆಸ್ಪತ್ರೆಗೆ ಹೋಗಿ ಹಣದ ವಿಚಾರ ವಿಚಾರಿಸುತ್ತಾ ಕುಳಿತಿದ್ದರಿಂದ ಜಿಸಿನಾ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪ್ರಾಣ ಹೋಗಿದೆ.

ಜಿಸಿನಾ ಅಸ್ವಸ್ಥರಾದ ತಕ್ಷಣ ಕಚೇರಿಯಲ್ಲಿದ್ದ ಪ್ರಥಮ ಚಿಕಿತ್ಸಕರು ತುರ್ತು ವೈದ್ಯಕೀಯ ಉಪಕರಣಗಳೊಂದಿಗೆ  ಧಾವಿಸಿದ್ದರು ಮತ್ತು ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

Strait Of Hormuz ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ : 3 ಭಾರತೀಯ ನಾವಿಕರು ಸಾವು

 

TAGGED:Manager refuses to give leave despite being sick; young woman dies after collapsing in office toilet
Share This Article
Facebook Twitter Copy Link Print
Previous Article Strait Of Hormuz ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ : 3 ಭಾರತೀಯ ನಾವಿಕರು ಸಾವು
Next Article ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

Popular Posts

3ನೇ ಮದುವೆ ರೆಡಿಯಾದ ಅಮೀರ್ ಖಾನ್ : ಯಾವಾಗ, ಎಲ್ಲಿ?

1 Min Read

ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

0 Min Read

ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್‌; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು

1 Min Read

Strait Of Hormuz ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ : 3 ಭಾರತೀಯ ನಾವಿಕರು ಸಾವು

1 Min Read

You Might Also Like

ಕರ್ನಾಟಕದೇಶಪ್ರಮುಖ

Gold Rate ಬಂಗಾರದ ಬೆಲೆ ಇಳಿಕೆ : ಬೆಳ್ಳಿ ಬೆಲೆ ತಟಸ್ಥ

1 Min Read
ಕರ್ನಾಟಕಪ್ರಮುಖಮನರಂಜನೆ

ಪುಸ್ತಕ ಓದುತ್ತಾ ಮೌನಕ್ಕೆ ಶರಣಾದ ದಾಸ:ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ

1 Min Read
ಕರ್ನಾಟಕಪ್ರಮುಖ

ಒಂದೂವರೆ ವರ್ಷದ ಮಗುವಿನ ಮೇಲೆ ತೆಂಗಿನಕಾಯಿ ಬಿದ್ದು ಸಾವು.!

1 Min Read
ಕರ್ನಾಟಕಪ್ರಮುಖ

ತಿಪಟೂರು ಶಾಸಕ ಕೆ. ಷಡಕ್ಷರಿ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು; ಆರೋಗ್ಯ ‌ಸ್ಥಿತಿ ಗಂಭೀರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?