Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gold Buying: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಶಾಕ್! ಹೊಸ ನಿಯಮ ಜಾರಿ
ಕರ್ನಾಟಕದೇಶಪ್ರಮುಖ

Gold Buying: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಶಾಕ್! ಹೊಸ ನಿಯಮ ಜಾರಿ

Share
2 Min Read
SHARE

newsics.com/ನ್ಯೂಸಿಕ್ಸ್

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಪ್ರಮುಖವಾದ ಸ್ಥಾನವಿದೆ. ಆದರೆ ಇಂದು ಚಿನ್ನವನ್ನು ಕೇವಲ ಲಾಕರ್‌ನಲ್ಲಿಡುವ ಆಭರಣವಾಗಿ ಮಾತ್ರವಲ್ಲದೆ, ಲಾಭದಾಯಕ ಹೂಡಿಕೆಯನ್ನಾಗಿಯೂ ನೋಡಲಾಗುತ್ತಿದೆ.

ಜುವೆಲ್ಲರಿ, ಗೋಲ್ಡ್ ಇಟಿಎಫ್ (ETF), ಸಾವರಿನ್ ಗೋಲ್ಡ್ ಬಾಂಡ್ (SGB) ಅಥವಾ ಪಿತ್ರಾರ್ಜಿತವಾಗಿ ಬಂದ ಚಿನ್ನ—ಹೀಗೆ ಪ್ರತಿಯೊಂದು ಹೂಡಿಕೆಯ ಮೇಲೂ ಸರ್ಕಾರದ ತೆರಿಗೆ ನಿಯಮಗಳು ಭಿನ್ನವಾಗಿವೆ.

ಆದ್ರೆ ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಸಾಮಾನ್ಯ ಜನರಿಗೆ ಖರೀದಿ ಮಾಡೋದೇ ಕಷ್ಟ ಆಗ್ತಿದೆ. ಈಗ ಮತ್ತೆ ಚಿನ್ನದ ಮೇಲಿನ ಹೂಡಿಕೆ ಸಂಬಂಧಿತ ಹೊಸ ನಿಯಮಗಳಿಂದ ಚಿನ್ನ ಖರೀದಿದಾರರಿಗೆ ಮತ್ತೊಂದು ಅತಿ ದೊಡ್ಡ ಶಾಕ್ ಸಿಕ್ಕಿದೆ. ಈಗಾಗಲೇ ಹೆಚ್ಚಾಗಿರುವ ಬೆಲೆಗೆ ಇದು ಸೇರಿದ್ರೆ, ಮದುವೆ ಮನೆಗೆ ಚಿನ್ನ ತಗೊಳ್ಳೋವರಿಂದ ಹಿಡಿದು SIP ಮೂಲಕ ಹೂಡಿಕೆ ಮಾಡೋವರವರೆಗೆ ಎಲ್ಲರಿಗೂ ಜೇಬಿಗೆ ಕತ್ತರಿ ಬೀಳೋದು ಪಕ್ಕಾ.

ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆ ಏರಿಕೆ ಮತ್ತು ಜಾಗತಿಕ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಗೋಲ್ಡ್ ಇಟಿಎಫ್ ಮತ್ತು ಗೋಲ್ಡ್ ಫಂಡ್ ಆಫ್ ಫಂಡ್ಗಳತ್ತ ಹೆಚ್ಚು ಆಕರ್ಷಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಆಕ್ಸಿಸ್ ಮ್ಯೂಚುವಲ್ ಫಂಡ್ ಮತ್ತು ಟಾಟಾ ಮ್ಯೂಚುವಲ್ ಫಂಡ್ ತಮ್ಮ ಚಿನ್ನದ ಯೋಜನೆಗಳಲ್ಲಿ ಹೊಸ ಸಬ್ಸ್ಕ್ರಿಪ್ಷನ್ಗಳಿಗೆ ತಾತ್ಕಾಲಿಕ ನಿರ್ಬಂಧಗಳನ್ನು ಪ್ರಕಟಿಸಿವೆ.

ಈಗಾಗಲೇ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ, ನಿಪ್ಪಾನ್ ಇಂಡಿಯಾ ಎಂಎಫ್ ಮತ್ತು ಹೆಚ್ಡಿಎಫ್ಸಿ ಎಎಂಸಿ ಇದೇ ರೀತಿಯ ಕ್ರಮ ಕೈಗೊಂಡಿದ್ದವು. ಮನಿಕಂಟ್ರೋಲ್ ವರದಿ ಪ್ರಕಾರ ಕೋಟಕ್ ಎಎಂಸಿ ಮತ್ತು ಆದಿತ್ಯ ಬಿರ್ಲಾ ಸನ್ ಲೈಫ್ ಎಬಿಎಸ್ಎಲ್ ಎಎಂಸಿ ಕೂಡ ಇದೇ ಹಾದಿ ಹಿಡಿಯಲು ಸಿದ್ಧತೆ ನಡೆಸಿವೆ.

ಆಕ್ಸಿಸ್ ಗೋಲ್ಡ್ ಯೋಜನೆಗಳಲ್ಲಿ ಹೊಸ ನಿಯಮ: ಆಕ್ಸಿಸ್ ಮ್ಯೂಚುವಲ್ ಫಂಡ್ ತನ್ನ ಆಕ್ಸಿಸ್ ಗೋಲ್ಡ್ ಇಟಿಎಫ್ ಮತ್ತು ಆಕ್ಸಿಸ್ ಗೋಲ್ಡ್ ಫಂಡ್ ಮೇಲೆ ಮಿತಿ ಹೇರಿದೆ. ಹೊಸ ನಿಯಮದ ಪ್ರಕಾರ ಆಕ್ಸಿಸ್ ಗೋಲ್ಡ್ ಇಟಿಎಫ್ನಲ್ಲಿ ದೊಡ್ಡ ಹೂಡಿಕೆದಾರರು ನೇರವಾಗಿ ಒಂದೇ ಬಾರಿಗೆ 25 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವಂತಿಲ್ಲ. ಆದರೆ ಮಾರ್ಕೆಟ್ ಮೇಕರ್ಗಳು ಮತ್ತು ಅಥರೈಸ್ಡ್ ಪಾರ್ಟಿಸಿಪೆಂಟ್ಗಳ ವಹಿವಾಟುಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಆಕ್ಸಿಸ್ ಗೋಲ್ಡ್ ಫಂಡ್ನಲ್ಲಿ ಲಂಪ್ಸಮ್ ಖರೀದಿ ಮತ್ತು ಸ್ವಿಚ್-ಇನ್ ವಹಿವಾಟುಗಳನ್ನು ಪ್ರತಿ ಪ್ಯಾನ್ ಕಾರ್ಡ್ಗೆ ತಿಂಗಳಿಗೆ 10 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತಕ್ಕೆ ಮಾತ್ರ ಅನುಮತಿಸಲಾಗುತ್ತದೆ.

ಟಾಟಾ ಮ್ಯೂಚುವಲ್ ಫಂಡ್ ಕೂಡ ಟಾಟಾ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ನಲ್ಲಿ 25 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ನೇರ ಸಬ್ಸ್ಕ್ರಿಪ್ಷನ್ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಮಾರ್ಕೆಟ್ ಮೇಕರ್ಗಳಿಗೆ ವಿನಾಯಿತಿ ಇದೆ. ಟಾಟಾ ಗೋಲ್ಡ್ ಇಟಿಎಫ್ ಫಂಡ್ ಆಫ್ ಫಂಡ್ನಲ್ಲಿ ಪ್ರತಿ ಪ್ಯಾನ್ಗೆ ಕ್ಯಾಲೆಂಡರ್ ತಿಂಗಳಿಗೆ 10 ಲಕ್ಷ ರೂಪಾಯಿ ವರೆಗೆ ಮಾತ್ರ ಲಂಪ್ಸಮ್ ಮತ್ತು ಸ್ವಿಚ್-ಇನ್ ಅನುಮತಿಸಲಾಗಿದೆ. ಜೂನ್ 8 ರ ಕಟ್-ಆಫ್ ನಂತರ ಬರುವ ಹೆಚ್ಚುವರಿ ಮೊತ್ತದ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ ಎಂದು ಫಂಡ್ ಹೌಸ್ ಸ್ಪಷ್ಟಪಡಿಸಿದೆ.

ಉದ್ಯಮ ಮೂಲಗಳ ಪ್ರಕಾರ ಸೆಬಿಯೊಂದಿಗೆ ನಡೆದ ಚರ್ಚೆಯ ನಂತರ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೊಡ್ಡ ಪ್ರಮಾಣದ ಲಂಪ್ಸಮ್ ಹಣ ಒಂದೇ ಬಾರಿಗೆ ಚಿನ್ನದ ಇಟಿಎಫ್ಗಳಿಗೆ ಹರಿದು ಬಂದರೆ ಆಮದು ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಇದು ರೂಪಾಯಿ ಮೇಲೆ ಒತ್ತಡ ಹೇರುತ್ತದೆ ಮತ್ತು ವಿದೇಶಿ ವಿನಿಮಯ ನಿಕ್ಷೇಪಗಳ ಮೇಲೆ ಪರಿಣಾಮ ಬೀರುತ್ತದೆ.

ಹಣೆ ಮೇಲೆ ಟ್ಯಾಟೂ ಹಾಕಿಸಿಕೊಂಡ್ರೆ ಸಿಗುತ್ತೆ ಲಕ್ಷ ಲಕ್ಷ!

TAGGED:Shock for those investing in gold! New rules implemented
Share This Article
Facebook Twitter Copy Link Print
Previous Article ಹಣೆ ಮೇಲೆ ಟ್ಯಾಟೂ ಹಾಕಿಸಿಕೊಂಡ್ರೆ ಸಿಗುತ್ತೆ ಲಕ್ಷ ಲಕ್ಷ!
Next Article ಆಹಾರ ಪಾರ್ಸೆಲ್, ಬಜ್ಜಿ-ಬೋಂಡಾ ಕಟ್ಟಲು ನ್ಯೂಸ್ ಪೇಪರ್ ಬಳಸದಂತೆ ವ್ಯಾಪಾರಿಗಳಿಗೆ FSSAI ವಾರ್ನಿಂಗ್

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?