newsics.com/ನ್ಯೂಸಿಕ್ಸ್
ಅಣ್ಣಾಮಲೈ ಅವರನ್ನು ಸೈಡ್‌ಲೈನ್ ಮಾಡಿ, ತಮಿಳುನಾಡು ಚುನಾವಣೆ ನಡೆಸಿದ ಬಳಿಕ ಬೇಸರಗೊಂಡ ಅಣ್ಣಾಮಲೈ ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು.
ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ದೆಹಲಿಗೆ ಭೇಟಿ ನೀಡಿರುವ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ನಿತಿನ್ ನಬೀನ್ ಅವರನ್ನ ಭೇಟಿಯಾಗಿ ಕೆಲ ಘಂಟೆಕಾಲ ಮಾತುಕತೆ ನಡೆಸಿದ್ದರು. ಈ ವೇಳೆ, ಅಣ್ಣಾಮಲೈ ಅವರು ನಿತಿನ್ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದ್ದವು. ಆದ್ರೆ, ಇದಾದ ಬೆನ್ನಲ್ಲೇ ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಶಾ ಅವರನ್ನ ಭೇಟಿಯಾದರು.
ಕೇಂದ್ರ ಬಿಜೆಪಿ ಘಟಕವು ತಮಿಳುನಾಡಿನ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್‌ಗೆ ತುರ್ತು ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಅದರಂತೆ, ಸಮನ್ಸ್ನಲ್ಲಿ ನೇರವಾಗಿ ದೆಹಲಿಗೆ ಬಂದು ಅಧ್ಯಕ್ಷ ನಿತಿನ್ ನಬಿನ್ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ. ಈ ಹಠಾತ್ ಸಭೆ ದ್ರಾವಿಡ ನಾಡಿನ ಕಮಲದ ರಣತಂತ್ರವನ್ನೇ ಬದಲಾಯಿಸಬಹುದಾ ಅನ್ನೋ ಚರ್ಚೆ ಶುರುವಾಗಿದೆ.