Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕರ್ನಾಟಕದಲ್ಲೂ ಲಾಂಚ್ ಆಯ್ತು ರಣ್ವೀರ್ ಸಿಂಗ್ ಒಡೆತನದ ವೋಡ್ಕಾ: ಬೆಲೆ ಎಷ್ಟು?
ಪ್ರಮುಖಮನರಂಜನೆ

ಕರ್ನಾಟಕದಲ್ಲೂ ಲಾಂಚ್ ಆಯ್ತು ರಣ್ವೀರ್ ಸಿಂಗ್ ಒಡೆತನದ ವೋಡ್ಕಾ: ಬೆಲೆ ಎಷ್ಟು?

Share
1 Min Read
SHARE

newsics.com/ನ್ಯೂಸಿಕ್ಸ್

ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್ ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಮರು ಜೀವವನ್ನೇ ನೀಡಿವೆ.

ರಣ್ವೀರ್ ಸಿಂಗ್ ಸ್ಟಾರ್ ನಟ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಹೌದು. ಅವರು ಹಲವಾರು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಅವರು ಹೊಸ ಮದ್ಯದ ಉದ್ಯಮವನ್ನು ಸಹ ಪ್ರಾರಂಭಿಸಿದ್ದು, ಕೆಲ ತಿಂಗಳ ಹಿಂದೆಯಷ್ಟೆ ಕರ್ನಾಟಕದಲ್ಲೂ ತಮ್ಮ ಉದ್ಯಮ ಲಾಂಚ್ ಮಾಡಿದ್ದಾರೆ.

ರಣ್ವೀರ್ ಸಿಂಗ್ ಈಗಾಗಲೇ ‘ಬೋಲ್ಡ್ ಕೇರ್’ ಮತ್ತು ‘ಸೂಪರ್ ಯೂ’ ಉದ್ಯಮಗಳನ್ನು ಹೊಂದಿದ್ದು, ಎರಡೂ ಸಹ ಲಾಭದಾಯಕವಾಗಿವೆ. ‘ಬೋಲ್ಡ್ ಕೇರ್’ ಮೂಲಕ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ರಣ್ವೀರ್ ಸಿಂಗ್ ಮಾರಾಟ ಮಾಡುತ್ತಿದ್ದಾರೆ. ಸೂಪರ್ ಯೂ ಮೂಲಕ ದೇಹಾರೋಗ್ಯಕ್ಕೆ ಸಂಬಂಧಿಸಿದ ಪ್ರೋಟೀನ್, ಕ್ರಿಯೇಟೀನ್, ಪ್ರೋಟೀನ್ ಬಾರ್ ಇನ್ನೂ ಕೆಲವು ಸಪ್ಲಿಮೆಂಟ್​​ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದೀಗ ರಣ್ವೀರ್ ಸಿಂಗ್ ಅವರು ಮದ್ಯದ ಉದ್ಯಮಕ್ಕೆ ಕಾಲಿರಿಸಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಣ್ವೀರ್ ಸಿಂಗ್ ಅವರು ‘ರಂಗೀಲಾ’ ಹೆಸರಿನ ವೋಡ್ಕಾ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದಾರೆ. ಎಬಿಡಿ ಪ್ರೈವೇಟ್ ಲಿಮಿಟೆಡ್ ಜೊತೆ ಕೈಜೋಡಿಸಿದ ‘ರಂಗೀಲಾ’ ವೋಡ್ಕಾ ಲಾಂಚ್ ಮಾಡಿದ್ದಾರೆ. ಈ ವೋಡ್ಕಾವನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಕರ್ನಾಟಕದಲ್ಲೂ ಲಾಂಚ್ ಮಾಡಲಾಗಿದ್ದು, ರಂಗೀಲಾ ವೋಡ್ಕಾ ಪ್ರಸ್ತುತ ಭಾರತದಾದ್ಯಂತ ಚೆನ್ನಾಗಿ ಮಾರಾಟ ಆಗುತ್ತಿದೆ. ಕರ್ನಾಟಕದಲ್ಲಿ ಈ ರಂಗೀಲಾ ವೋಡ್ಕಾದ 750 ಎಂಎಲ್ ಬಾಟಲಿ ಬೆಲೆ 2400 ರೂಪಾಯಿಗಳು ಇವೆಯಂತೆ.

ಇನ್ನುಳಿದಂತೆ ರಣ್ವೀರ್ ಸಿಂಗ್ ಮೇಲೆ, ಬಾಲಿವುಡ್​ನ ನೌಕರರ ಸಂಘ ನಿಷೇಧ ಹೇರಿದೆ. ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದು, ನಷ್ಟ ಪರಿಹಾರ ತುಂಬಿಕೊಡಲು ನಿರಾಕರಿಸಿರುವ ಕಾರಣಕ್ಕೆ ನಿರ್ಮಾಪಕ ಫರ್ಹಾನ್ ಅಖ್ತರ್, ರಣ್ವೀರ್ ವಿರುದ್ಧ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಹಿಂದಿ ಸಿನಿಮಾ ನೌಕರರ ಸಂಘ ರಣ್ವೀರ್ ವಿರುದ್ಧ ಅನಧಿಕೃತ ನಿಷೇಧ ಹೇರಿದೆ. ಪ್ರಸ್ತುತ ರಣ್ವೀರ್ ಸಿಂಗ್ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ ಆದರೆ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ಮುಂದಿನ ಸಿನಿಮಾನಲ್ಲಿ ರಣ್ವೀರ್ ಅವರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

TAGGED:Ranveer Singh's vodka launched in Karnataka: How much is it?
Share This Article
Facebook Twitter Copy Link Print
Previous Article ಪ್ರಮಾಣವಚನ ದಿನವೇ ಕಾಂಗ್ರೆಸ್ ನೂತನ ಭವನ ಶಂಕುಸ್ಥಾಪನೆಗೆ ಡಿಕೆ ಶಿವಕುಮಾರ್ ಪ್ಲ್ಯಾನ್​
Next Article ಇತಿಹಾಸ ನಿರ್ಮಿಸಿದ ಆರ್ ಸಿಬಿ; ಸತತ 2ನೇ ಬಾರಿ ಕಪ್

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?