newsics.com/ನ್ಯೂಸಿಕ್ಸ್
ಡಿ.ಕೆ.ಶಿವಕುಮಾರ್. ಕನಕಪುರದ ಬಂಡೆ ಎಂದೇ ರಾಜ್ಯ ರಾಜಕಾರಣದಲ್ಲಿ ಹವಾ ಸೃಷ್ಟಿಸಿರುವ ಅವರು ಸದ್ಯ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗೆಲ್ಲ ರಾಜಕಾರಣಿಗಳು ಅಂದರೆ ತುಂಬಾ ಶ್ರೀಮಂತರು, ಭಾರೀ ಆಸ್ತಿ ಹೊಂದಿರುತ್ತಾರೆ ಎನ್ನುವ ಮಾತಿದೆ. ಡಿಕೆ ಶಿವಕುಮಾರ್ ಅವರು ರಾಜಕಾರಣದ ಜೊತೆಗೆ ಬಿಸಿನೆಸ್‌ನಲ್ಲೂ ಇದ್ದಾರೆ. ಹೀಗಾಗಿ ಶ್ರೀಮಂತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಡಿ.ಕೆ.ಶಿವಕುಮಾರ್ ಅವರ ಒಟ್ಟು ಆಸ್ತಿ ಎಷ್ಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಪ್ರಕಾರ, ಡಿಕೆ ಶಿವಕುಮಾರ್ ದೇಶದ ಅತಿ ಶ್ರೀಮಂತ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಕೆ ಮಾಡಿರುವ ಅಫಿಡವಿಟ್ ಪ್ರಕಾರ, ಡಿಕೆಶಿ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 1,413 ಕೋಟಿ ರೂಪಾಯಿ. ಇವರ ಈ ಅಗಾಧ ಆಸ್ತಿಯೇ ಈಗ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಸುದ್ದಿಯಾಗಿದೆ.
ಡಿಕೆ ಶಿವಕುಮಾರ್ ಅವರ ಆಸ್ತಿಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಅವರ ಆರ್ಥಿಕ ಸಾಮರ್ಥ್ಯ ಅರಿವಾಗುತ್ತದೆ. ಅವರ ಒಟ್ಟು ಆಸ್ತಿಯಲ್ಲಿ ಸುಮಾರು 1,140 ಕೋಟಿ ರೂಪಾಯಿ ಚರಾಸ್ತಿ ಇದ್ದರೆ, ಉಳಿದ 273 ಕೋಟಿ ರೂಪಾಯಿ ಸ್ಥಿರಾಸ್ತಿ ಆಗಿದೆ. ಇಷ್ಟೊಂದು ಆಸ್ತಿ ಇದ್ದರೂ, ಅವರ ಮೇಲೆ 265 ಕೋಟಿ ರೂಪಾಯಿಯಷ್ಟು ಸಾಲ ಅಥವಾ ಹೊಣೆಗಾರಿಕೆಗಳು ಇವೆ ಎಂಬುದು ಅಫಿಡವಿಟ್‌ನಲ್ಲಿ ದಾಖಲಾಗಿದೆ.
ಅಚ್ಚರಿಯ ವಿಷಯವೆಂದರೆ, ದೇಶದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಕೇವಲ ಡಿಕೆಶಿ ಮಾತ್ರವಲ್ಲ, ಮೊದಲ 20 ಶಾಸಕರ ಪಟ್ಟಿಯಲ್ಲಿ ಕರ್ನಾಟಕದ 12 ಮಂದಿ ಶಾಸಕರು ಸ್ಥಾನ ಪಡೆದಿದ್ದಾರೆ. ಇದರಿಂದ ರಾಜ್ಯದ ರಾಜಕಾರಣಿಗಳು ಆರ್ಥಿಕವಾಗಿ ಎಷ್ಟೊಂದು ಪ್ರಬಲರಾಗಿದ್ದಾರೆ ಎಂಬುದು ಸಾಬೀತಾಗುತ್ತದೆ. ಡಿಕೆ ಶಿವಕುಮಾರ್ ಅವರೇ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ‘ಜನತಾ ಕಾ ಸೇವಕ್’ ಎಂದು ಕರೆಸಿಕೊಳ್ಳುವ ಅವರು, ಆಸ್ತಿಯ ವಿಷಯದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.
CM resignation ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಸಿದ್ದರಾಮಯ್ಯ