newsics.com/ನ್ಯೂಸಿಕ್ಸ್
ರಾಮ್ ಚರಣ್ ಸದ್ಯ ದೇಶಾದ್ಯಂತ ಬಹು ಚರ್ಚೆಯಲ್ಲಿದ್ದಾರೆ. ಪೆದ್ದಿ ಚಿತ್ರದ ಪ್ರಚಾರದಲ್ಲಿ ರಾಮ್ ಚರಣ್ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ರಾಮ್ ಚರಣ್ ಅವರ ಕುರಿತಾದ ಸುದ್ದಿಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ರಾಮ್ ಚರಣ್ ಅವರ ಬಾಡಿಗಾರ್ಡ್ ಬಗ್ಗೆ ಹಲವಾರು ವಿಚಾರಗಳು ಸುದ್ದಿಯಾಗುತ್ತಿವೆ.
ರಾಮ್ ಚರಣ್ ಬಾಡಿ ಗಾರ್ಡ್ ಕೆವಿನ್ ಕುಂಟಾ ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ. ಕೆವಿನ್ ಆಫ್ರಿಕಾ ಮೂಲದವರು. ಕೆವಿನ್ ಇಟಲಿಯ MMA ಚಾಂಪಿಯನ್ ಆಗಿದ್ದಾರೆ. ರಾಮ್ ಚರಣ್ ಸುರಕ್ಷತೆಗಾಗಿ ದಿನಕ್ಕೆ 2 ಲಕ್ಷ ರೂ. ವರೆಗೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅವರ ವೃತ್ತಿಪರ ಭದ್ರತಾ ವೈಖರಿ ಮತ್ತು ಬೃಹತ್ ಮೈಕಟ್ಟು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಹಾಗೂ ವಿವಿಐಪಿಗಳಿಗೆ ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಭದ್ರತೆ ಒದಗಿಸುವಲ್ಲಿ ಇವರು ವಿಶ್ವದಾದ್ಯಂತ ಭಾರಿ ಬೇಡಿಕೆ ಹೊಂದಿದ್ದಾರೆ. ಮುಂಬೈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಮಾಧ್ಯಮಗಳು ಮುಗಿಬಿದ್ದಾಗ, ಕೆವಿನ್ ಜನರ ಗುಂಪನ್ನು ನಿಯಂತ್ರಿಸಿದ ರೀತಿ ಸಿನಿರಂಗದಲ್ಲಿ ದೊಡ್ಡ ಪ್ರಶಂಸೆ ಗಳಿಸಿದೆ.
ಅಂತರರಾಷ್ಟ್ರೀಯ ಮಟ್ಟದ ಈ ಸ್ಟಾರ್ ಫೈಟರ್‌ನ ಕಟ್ಟುಮಸ್ತಾದ ದೇಹ ಮತ್ತು ಎತ್ತರವನ್ನು ಕಂಡ ಸಿನಿರಸಿಕರು, ಇವರು ರಾಮ್ ಚರಣ್ ಪಕ್ಕದಲ್ಲಿ ನಡೆದು ಬರುತ್ತಿದ್ದರೆ ಯಾವುದೋ ಹಾಲಿವುಡ್ ಆಕ್ಷನ್ ಸಿನಿಮಾದ ದೃಶ್ಯದಂತೆ ಕಾಣುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಹೈ-ಪ್ರೊಫೈಲ್ ಅಂಗರಕ್ಷಕನ ಸಂಬಳ ಕೂಡ ಅಷ್ಟೇ ಭಾರಿ ಪ್ರಮಾಣದಲ್ಲಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಸುರಕ್ಷತೆಗಾಗಿ ಕೆವಿನ್ ಕುಂಟಾಗೆ ದಿನಕ್ಕೆ ಬರೋಬ್ಬರಿ 2 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ.
Husband Wife Divorce ಹೆಂಡತಿ ಮನೆ ಕೆಲಸ ಮಾಡಲ್ಲ ಎಂದು ಡಿವೋರ್ಸ್ ಅಪ್ಲೈ ಮಾಡಿದ್ದ ಪತಿಗೆ ಶಾಕ್ ನೀಡಿದ ಕೋರ್ಟ್