newsics.com/ನ್ಯೂಸಿಕ್ಸ್
ಸಿಕ್ಕಿಂನ ಶಾಲೆಯೊಂದರಲ್ಲಿ ಬೀದಿ ನಾಯಿಯೊಂದು ಶಾಲಾ ಪ್ರಾರ್ಥನ ಸಮಯದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ಮಕ್ಕಳ ಸಾಲಿನಲ್ಲಿ ಅದು ಕೂಡ ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತುಕೊಂಡಿದೆ. ಸದ್ಯ ಈ ಕ್ಯೂಟ್ ವಿಡಿಯೊ ಭಾರಿ ಗಮನ ಸೆಳೆದಿದೆ.
ಪ್ರಾಣಿಗಳು ಕೂಡ ಬುದ್ದಿವಂತಿಕೆಯಲ್ಲಿ ಎತ್ತಿದ ಕೈ ಅನ್ನೋದಕ್ಕೆ ಈ ವಿಡಿಯೊ ಸಾಕ್ಷಿ ಎಂಬಂತಿದೆ. ಸಿಕ್ಕಿಂನಲ್ಲಿ ಶಾಲಾ ಪ್ರಾರ್ಥನೆಗೆ ಬಂದ ಬೀದಿ ನಾಯಿ ಮುದ್ದಾಗಿರುವ ʼಪ್ರಾರ್ಥನಾ ಭಂಗಿʼಯೊಂದಿಗೆ ನಿಂತು ಎಲ್ಲರ ಹೃದಯ ಗೆದ್ದಿದೆ. ಶಾಲಾ ಪ್ರಾರ್ಥನೆಯ ಸರಿಯಾದ ಸಮಯಕ್ಕೆ ಬಂದು ಸರತಿ ಸಾಲಿನಲ್ಲೇ ನಿಂತು ಅಸೆಂಬ್ಲಿಯಲ್ಲಿ ಪಾಲ್ಗೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ವಿಡಿಯೊದಲ್ಲಿ ಏನಿದೆ?
ಶಾಲಾ ಮಕ್ಕಳು ಮೈದಾನದಲ್ಲಿ ಸಾಲಾಗಿ ನಿಂತು ಶಿಸ್ತಿನಿಂದ ಬೆಳಗಿನ ಪ್ರಾರ್ಥನೆ ಗೀತೆಯನ್ನು ಹಾಡಿದ್ದಾರೆ. ಆಗ ಬಿಳಿ ಬೀದಿ ನಾಯಿಯೊಂದು ತನ್ನ ಹಿಂಗಾಲುಗಳ ಮೇಲೆ ನೇರವಾಗಿ ನಿಂತು, ಅದರ ಮುಂಭಾಗದ ಪಂಜಗಳನ್ನು ಎತ್ತಿ ಪಾರ್ಥನೆಯಲ್ಲಿ ಪಾಲ್ಗೊಂಡಿದೆ. ಪ್ರಾರ್ಥನೆ ಮುಗಿಯುತ್ತಿದ್ದಂತೆ ಅತ್ಯಂತ ಸಹಜವಾಗಿ ಮಕ್ಕಳ ಪಕ್ಕದಲ್ಲೇ ಅದು ಆರಾಮವಾಗಿ ಕುಳಿತುಕೊಂಡಿದೆ.
https://www.instagram.com/reel/DYpHJYOpJxi/?igsh=YWFkd2t5ZnZqeHU=