Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಯುರೋಪಿಯನ್ನರು ಭಾರತೀಯರಿಂದ ಈ ಐದು ವಿಷಯಗಳನ್ನು ಕಲಿಯಲೇಬೇಕು ಎಂದ ವಿದೇಶಿ ಮಹಿಳೆ
ದೇಶಪ್ರಮುಖವಿದೇಶವೈರಲ್

ಯುರೋಪಿಯನ್ನರು ಭಾರತೀಯರಿಂದ ಈ ಐದು ವಿಷಯಗಳನ್ನು ಕಲಿಯಲೇಬೇಕು ಎಂದ ವಿದೇಶಿ ಮಹಿಳೆ

Share
2 Min Read
SHARE

newsics.com/ನ್ಯೂಸಿಕ್ಸ್

ಭಾರತ ಅಂದ್ರೆ ವಿದೇಶಿಗರಿಗೆ ಅದೇನೋ ಸೆಳೆತ. ಹೀಗಾಗಿ ವಿದೇಶಿಗರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇಲ್ಲಿನ ವಿವಿಧ ಖಾದ್ಯಗಳ ರುಚಿಯನ್ನು ಸವಿಯುತ್ತಾರೆ. ಇನ್ನು ಕೆಲ ವಿದೇಶಿಗರು ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿಯೇ ನೆಲೆಸುತ್ತಾರೆ.

ಇದೀಗ ವಿದೇಶಿ ಮಹಿಳೆ ಯುರೋಪಿಯನ್ನರು ಭಾರತೀಯರಿಂದ (Indians) ಈ ಐದು ವಿಷಯಗಳನ್ನು ಕಲಿಯಲೇಬೇಕು ಎಂದಿದ್ದಾರೆ. ಇದೇ ವೇಳೆ ಭಾರತೀಯ ಆತಿಥ್ಯ, ಸಮುದಾಯ ಜೀವನವನ್ನು ಈ ಮಹಿಳೆ ಶ್ಲಾಘಿಸಿದ್ದಾರೆ. ವಿದೇಶಿ ಮಹಿಳೆಯ ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

 

ಮೋನಿಕಾ ಕುಂಜೇಶ್ವರಿ ದಾಸಿ (monika_kunjeswari) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದಲ್ಲಿದ್ದಾಗ ಗಮನಿಸಿದ ವಿಷಯಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಕ್ಲಿಪ್‌ನ ಶೀರ್ಷಿಕೆಯಲ್ಲಿ, ಯುರೋಪಿಯನ್ನರು ಭಾರತೀಯರಿಂದ ಕಲಿಯಬೇಕಾದ ವಿಷಯಗಳು. ಇದು ವಿವಾದಾತ್ಮಕವಾಗಿರಬಹುದು ಎಂದು ನನಗೆ ತಿಳಿದಿದೆ.

ಆದರೆ ಭಾರತದಲ್ಲಿ ವರ್ಷಗಳ ಕಾಲ ನೆಲೆಸಿದ ಬಳಿಕ ಈ ಪಾಶ್ಚಿಮಾತ್ಯ ದೇಶಗಳು ಭಾರತೀಯ ಸಂಸ್ಕೃತಿಯಿಂದ ಕಲಿಯಬಹುದಾದ ಕೆಲವು ವಿಷಯಗಳಿವೆ ಎಂದು ನಾನು ಗಮನಿಸಿದೆ. ಯುರೋಪಿನ ಅನೇಕ ಜನರು ಭಾರತದ ಹಳ್ಳಿಗಳಿಗೆ ಅಥವಾ ಸಣ್ಣ ಪಟ್ಟಣಗಳಿಗೆ ಭೇಟಿ ನೀಡುತ್ತಾರೆ. ಹಾಗೂ ಇಲ್ಲಿನ ಜನರು ‘ಸರಳ’ ಎಂದು ಭಾವಿಸುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇಲ್ಲಿ ಕಂಡುಕೊಂಡ ಕೆಲವು ಮೌಲ್ಯಗಳು ನಾವು ವಿದೇಶದಲ್ಲಿ ನಿಧಾನವಾಗಿ ಕಳೆದುಕೊಳ್ಳುತ್ತಿರುವ ವಿಷಯಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಅತಿಥಿಗಳನ್ನು ನಡೆಸಿಕೊಳ್ಳುವ ರೀತಿ ಅದ್ಭುತವಾಗಿದೆ. ಯಾರಾದರೂ ನಿಮ್ಮ ಮನೆಗೆ ಬಂದರೆ, ನೀವು ಅವರಿಗೆ ಆಹಾರ, ಚಹಾ ನೀಡುತ್ತೀರಿ. ಹಾಗೂ ಅವರಿಗೆ ಆರಾಮದಾಯಕವಾಗಿಸುತ್ತೀರಿ. ಇದನ್ನು ಮೂಲಭೂತ ನಡವಳಿಕೆ ಎಂದು ಪರಿಗಣಿಸಲಾಗುತ್ತದೆ. ಲಿಥುವೇನಿಯಾದಲ್ಲಿಯೂ ನಮಗೆ ಇದೇ ರೀತಿಯದ್ದೇನೋ ಇದೆ, ಆದರೆ ಭಾರತದಲ್ಲಿ ಅದು ನಿಜವಾಗಿಯೂ ಬೇರೆಯದೇ ಮಟ್ಟದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.

 

ಸ್ನೇಹಿತರು ಸ್ನೇಹಿತರಿಗೆ ಸಹಾಯ ಮಾಡುತ್ತಾರೆ. ನೆರೆಹೊರೆಯವರು ಪರಸ್ಪರ ಈ ಬಗ್ಗೆ ತಿಳಿದಿದ್ದಾರೆ. ಯಾರಿಗಾದರೂ ಏನಾದರೂ ಅಗತ್ಯವಿದ್ದರೆ, ಸಹಾಯ ಮಾಡಲು ಸಿದ್ಧರಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ಈ ಸಮುದಾಯದ ಪ್ರಜ್ಞೆಯನ್ನು ಕಳೆದುಕೊಳ್ಳುವುದು ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತೀಯ ಮನೆಗಳಲ್ಲಿ ಆಹಾರವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯವನ್ನು ಉಳಿಸಿಕೊಂಡಿದೆ. ಮನೆಯಲ್ಲಿ ಅಡುಗೆ ಮಾಡುವುದು. ಒಟ್ಟಿಗೆ ಕುಳಿತು ತಿನ್ನುವುದು ಸಾಮಾನ್ಯ. ಇದು ಎಲ್ಲವೂ ಅನುಕೂಲಕ್ಕಾಗಿ ಅಲ್ಲ. ಆಹಾರವನ್ನು ವೇಗವಾಗಿ ಸೇವಿಸುವುದನ್ನು ಒಳಗೊಂಡಿಲ್ಲ ಎಂದಿದ್ದಾರೆ.

ಭಾರತೀಯರು ಸ್ವಚ್ಛತೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ಗಮನಿಸಿದ್ದೇನೆ. ಸ್ನಾನ ಮಾಡುವುದು, ಬಟ್ಟೆ ಬದಲಾಯಿಸುವುದು, ನಿಮ್ಮನ್ನು ತಾಜಾವಾಗಿರಿಸಿಕೊಳ್ಳುವುದು. ಈ ಅಭ್ಯಾಸವನ್ನು ತುಂಬಾ ಹತ್ತಿರದಿಂದ ನಾನು ನೋಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ತುಂಬಾ ಒಳ್ಳೆಯ ಅಭ್ಯಾಸ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇನ್ನು ಹಬ್ಬಗಳು, ನೃತ್ಯ, ಹಾಡುಗಾರಿಕೆ, ಒಟ್ಟಿಗೆ ಆಚರಿಸುತ್ತಾರೆ. ಜೀವನವನ್ನು ಆನಂದಿಸಲು ಜನರಿಗೆ ವಿಶೇಷ ಕಾರಣ ಬೇಕಾಗಿಲ್ಲ. ಕೆಲವೊಮ್ಮೆ ಯುರೋಪಿನಲ್ಲಿ ನಾವು ತುಂಬಾ ಗಂಭೀರವಾಗಿರುತ್ತೇವೆ, ವಿಷಯಗಳನ್ನು ಸರಳವಾಗಿ ಆನಂದಿಸುವುದು ಹೇಗೆ ಎಂಬುದನ್ನು ನಾವು ಮರೆತುಬಿಡುತ್ತೇವೆ ಎಂದು ನನಗೆ ಅನಿಸುತ್ತದೆ. ಖಂಡಿತವಾಗಿ ಪ್ರತಿಯೊಂದು ದೇಶವೂ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಹೊಂದಿರುತ್ತದೆ. ಆದರೆ ಇವು ನಾನು ಭಾರತದಿಂದ ವೈಯಕ್ತಿಕವಾಗಿ ಕಲಿತ ಕೆಲವು ವಿಷಯಗಳು ಎಂದಿದ್ದಾರೆ.

https://www.instagram.com/reel/DYlxlEwsOp9/?igsh=MWZhbmcxZzZ3amV4bQ==

ತಜ್ಞರಿಗೆ ವರ್ಷಕ್ಕೆ ₹3.7 ಕೋಟಿ ಸಂಬಳದ ಬಂಪರ್ ಆಫರ್ ನೀಡಿದ ಓಪನ್‌ಏಐ

TAGGED:A foreign woman says Europeans should learn these five things from Indians
Share This Article
Facebook Twitter Copy Link Print
Previous Article ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ಬುಲಾವ್​​; ದೆಹಲಿಯತ್ತ ಸಿಎಂ
Next Article ಸಿಎಂ ಬೆನ್ನಲ್ಲೆ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲು ಪ್ಲಾನ್!

Popular Posts

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read

Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ

1 Min Read

You Might Also Like

ಪ್ರಮುಖಕರ್ನಾಟಕ

Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

1 Min Read
ಪ್ರಮುಖCrimeಕರ್ನಾಟಕ

Crime Case ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶ*ವ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು

0 Min Read
ದೇಶಪ್ರಮುಖ

Strange marriage ಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು! ಯಾಕೆ ಹೀಗೆ? ವಿಡಿಯೋ ನೋಡಿ

1 Min Read
ಪ್ರಮುಖCrimeದೇಶ

Tragedy ಭೀಕರ ದುರಂತ; ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಕುಸಿದು 13 ಪ್ರಯಾಣಿಕರು ದುರ್ಮರಣ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?