newsics.com/ನ್ಯೂಸಿಕ್ಸ್
ಬಾಲಿವುಡ್ ನ ಮಾಧುರಿ ದೀಕ್ಷಿತ್ ಅವರ ನೃತ್ಯದ ಶೈಲಿ ಹಾಗೂ ಕಣ್ಣಿನ ಹಾವ-ಭಾವ ನಟನೆಯನ್ನು ಮಾಡುವ ಬಾಲಕಿ ಬರ್ಕತ್ ಅರೋರಾ ಅವರ ನೃತ್ಯದ ವಿಡಿಯೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಣ್ಣ ವಯಸ್ಸಿನಲ್ಕೇ ನೂರಾರು ಜನರ ಎದುರು ಬಾಲಕಿ ನೃತ್ಯ ಮಾಡಿದ್ದು ಇದಕ್ಕಿಂತ ಉತ್ತಮ ನೃತ್ಯ ತೋರಿಸಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವೊಂದನ್ನು ಶೇರ್ ಮಾಡಲಾಗಿದೆ. ಬರ್ಕತ್ ಅವರ ಪ್ರತಿಭೆಯನ್ನು ಲಕ್ಷಾಂತರ ಜನರು ಮೆಚ್ಚಿಕೊಂಡಿದ್ದು ಕೆಲವರು ಆಧುನಿಕ ನೃತ್ಯ ಕ್ಲಬ್ ಗಳಲ್ಲಿ ಮಕ್ಕಳಿಗೆ ಕಲಿಸುವ ನೃತ್ಯಗಳು ಅವರ ವಯಸ್ಸನ್ನು ಮೀರಿ ಹೋಗಿವೆ ಎಂದು ಕಿಡಿಕಾರಿದ್ದಾರೆ.
ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ದೊಡ್ಡವರಂತೆ ಬಿಂಬಿಸುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಯಸ್ಕರನ್ನು ಅನುಕರಿಸುವ ರೀತಿಯಲ್ಲಿ ನೃತ್ಯ ಮಾಡುವ ಮಗು ಅದರ ವಯಸ್ಸಿಗೆ ಸೂಕ್ತ ವಲ್ಲದಂತೆ ಕಾಣುತ್ತದೆ. ಬಾಲ್ಯವು ಗುಣ ಮೌಲ್ಯಗಳನ್ನು ಕಲಿಯುವ ಮತ್ತು ಮುಗ್ಧತೆಯನ್ನು ಆನಂದಿಸುವ ಸಮಯ ವಯಸ್ಸಿಗೆ ಮೀರಿದ ಪ್ರೌಢ ಹಾವಭಾವಗಳು ಮಿತಿ ಮೀರುತ್ತಿವೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಕ್ವಾಟ್ರಸ್ ಮನೆಯಲ್ಲೇ ಪೊಲೀಸಪ್ಪನ ಹೆಂಡ್ತಿ ಆತ್ಮ*ಹತ್ಯೆ : ಕಾನ್ಸ್‌ಟೇಬಲ್ ಮೇಲೆ FIR ದಾಖಲು