newsics.com/ನ್ಯೂಸಿಕ್ಸ್
ಚೀನೀ ಬ್ಯೂಟಿ ಇನ್ಫ್ಲುಯೆನ್ಸರ್ ಜಿಯಾಂಗ್ ಚೆಂಗ್ಲಾನ್ 3 ವರ್ಷಗಳ ನಂತರ ಮತ್ತೆ ಸೋಷಿಯಲ್ ಮೀಡಿಯಾಗೆ ಕಂಬ್ಯಾಕ್ ಮಾಡಿದ್ದು, ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ.
ಚೀನಾದಲ್ಲಿ ಅತ್ಯಂತ ಜನಪ್ರಿಯ ಬ್ಯೂಟಿ ಇನ್ಫ್ಲುಯೆನ್ಸರ್ ಆಗಿರುವ ಜಿಯಾಂಗ್ ಚೆಂಗ್ಲಾನ್ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿ ಹರಿದಾಡುತ್ತಿದೆ.
ಚೀನಾದ ಟಿಕ್‌ಟಾಕ್ ಆವೃತ್ತಿಯಾದ ಡೋಯಿನ್ ಪ್ಲಾಟ್‌ಫಾರ್ಮ್‌ನಲ್ಲಿ ಜಿಯಾಂಗ್ ಚೆಂಗ್ಲಾನ್ 2023 ರವರೆಗೆ 3 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ಯಾವುದೇ ಅಪ್‌ಡೇಟ್ ನೀಡದೆ ಸೋಷಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ನಾಪತ್ತೆಯಾಗಿದ್ದಳು. ಇದು ಆಕೆಯ ಅಭಿಮಾನಿಗಳಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಮೂಡಿಸಿತ್ತು.
ಇತ್ತೀಚೆಗೆ ಮೇ 13 ರಂದು ಜಿಯಾಂಗ್ ತಮ್ಮ ನಿಜವಾದ ಹೆಸರಿನಲ್ಲಿ ಹೊಸ ಖಾತೆ ತೆರೆಯುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾಳೆ. ತಾನು ನಾಪತ್ತೆಯಾಗಲು ತಮ್ಮ ಹಳೆಯ ಪ್ರೊಡಕ್ಷನ್ ಏಜೆನ್ಸಿಯೊಂದಿಗೆ ನಡೆದ ಕಾನೂನು ಹೋರಾಟ ಮತ್ತು ವಿವಾದವೇ ಕಾರಣ ಎಂದು ಆಕೆ ಭಾವುಕರಾಗಿ ವೀಡಿಯೋದಲ್ಲಿ ಬಹಿರಂಗಪಡಿಸಿದ್ದಾಳೆ. ನನ್ನ ಹಳೆಯ ಸೋಷಿಯಲ್ ಮೀಡಿಯಾ ಖಾತೆ ಮತ್ತು ಆನ್‌ಲೈನ್ ಶಾಪ್‌ಗಳನ್ನು ಏಜೆನ್ಸಿಯೇ ತನ್ನ ಹೆಸರಿಗೆ ಟ್ರೇಡ್‌ಮಾರ್ಕ್ ಮಾಡಿಕೊಂಡಿದೆ. ದಯವಿಟ್ಟು ನನ್ನ ಹಳೆಯ ಹೆಸರನ್ನು ನಂಬಿ ಯಾರೂ ಆ ಶಾಪ್‌ಗಳಲ್ಲಿ ವಸ್ತುಗಳನ್ನು ಖರೀದಿಸಬೇಡಿ ಎಂದು ಜಿಯಾಂಗ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾಳೆ.
ಜಿಯಾಂಗ್ ಮರಳಿ ಬರುತ್ತಿದ್ದಂತೆ ಆಕೆಯ ಮೊದಲ ಮೇಕಪ್ ಟ್ಯುಟೋರಿಯಲ್ ವೀಡಿಯೋ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ. ಕೇವಲ ಒಂದೇ ದಿನದಲ್ಲಿ 10 ಮಿಲಿಯನ್ ಜನರು ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದು, ಆಕೆಯ ವೀಡಿಯೋಗೆ ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದುಬಂದಿವೆ.
Rukmini Vasanth ವೈರಲ್ ಆದ ರುಕ್ಮಿಣಿ ವಸಂತ್ ಬಿಕಿನಿ ಶೂಟ್ ವಿಡಿಯೋಗೆ ಸಿಕ್ತು ಸ್ಪಷ್ಟನೆ