Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > 10 ದಿನಗಳಿಂದ ತಲೆಮರೆಸಿಕೊಂಡಿದ್ದ ಟ್ವಿಶಾ ಶರ್ಮಾ ಪತಿ ಮಾಸ್ಕ್ ಧರಿಸಿ ಕೋರ್ಟ್‌ಗೆ ಶರಣು; ವೈರಲ್ ವಿಡಿಯೋ ನೋಡಿ
ಪ್ರಮುಖ

10 ದಿನಗಳಿಂದ ತಲೆಮರೆಸಿಕೊಂಡಿದ್ದ ಟ್ವಿಶಾ ಶರ್ಮಾ ಪತಿ ಮಾಸ್ಕ್ ಧರಿಸಿ ಕೋರ್ಟ್‌ಗೆ ಶರಣು; ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com/ನ್ಯೂಸಿಕ್ಸ್

ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮಾಡೆಲ್ ಕಂ ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಆಕೆಯ ಪತಿ, ವಕೀಲ ಸಮರ್ಥ್ ಸಿಂಗ್ ಶುಕ್ರವಾರ ಸಂಜೆ ಜಬಲ್‌ಪುರ ಜಿಲ್ಲಾ ನ್ಯಾಯಾಲಯಕ್ಕೆ ಬಂದು ದಿಢೀರ್ ಶರಣಾಗಿದ್ದಾನೆ.

​ಪೊಲೀಸ್ ಬಂಧನದ ಭೀತಿಯಲ್ಲಿದ್ದ ಸಮರ್ಥ್ ಸಿಂಗ್, ಯಾರಿಗೂ ಗುರುತು ಸಿಗದಂತೆ ತಲೆಗೆ ಕ್ಯಾಪ್ (ಟೋಪಿ), ಮುಖಕ್ಕೆ ಮಾಸ್ಕ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಗೂ ಹೆಗಲಿಗೆ ಗಮ್ಚಾ (ಸರಳು ವಸ್ತ್ರ) ಧರಿಸಿ ಕೋರ್ಟ್‌ ಆವರಣಕ್ಕೆ ಪ್ರವೇಶಿಸಿದ್ದಾನೆ. ಈ ಹೈಡ್ರಾಮಾ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

​ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ತಾನು ಸಲ್ಲಿಸಿದ್ದ ಮುಂಗಡ ಜಾಮೀನು ಅರ್ಜಿಯನ್ನು ಹಿಂಪಡೆದ ಕೇವಲ ಒಂದು ಗಂಟೆಯಲ್ಲೇ ಸಮರ್ಥ್ ಸಿಂಗ್ ಈ ನಿರ್ಧಾರ ಕೈಗೊಂಡಿದ್ದಾನೆ. ಹೈಕೋರ್ಟ್ ಪೀಠವು ಆತನಿಗೆ ಜಾಮೀನು ನೀಡಲು ನಿರಾಕರಿಸಿ, ತಕ್ಷಣವೇ ವಿಚಾರಣಾ ನ್ಯಾಯಾಲಯ ಅಥವಾ ಭೋಪಾಲ್‌ನ ಕಟಾರಾ ಪೊಲೀಸ್ ಠಾಣೆಯ ಮುಂದೆ ಶರಣಾಗುವಂತೆ ಸೂಚಿಸಿತ್ತು. ಜಾಮೀನು ಸಿಗುವುದು ಅಸಾಧ್ಯ ಎಂದು ಮನಗಂಡ ಆರೋಪಿ ಬೇರೆ ದಾರಿಯಿಲ್ಲದೆ ಜಬಲ್‌ಪುರ ಕೋರ್ಟ್‌ಗೆ ಶರಣಾಗಿದ್ದಾನೆ.

​33 ವರ್ಷದ ಟ್ವಿಶಾ ಶರ್ಮಾ ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮದುವೆಯಾಗಿ ಕೇವಲ ಐದೇ ತಿಂಗಳಲ್ಲಿ ನಡೆದ ಈ ಘಟನೆಗೆ ವರದಕ್ಷಿಣೆ ಕಿರುಕುಳ ಮತ್ತು ಪತಿಯ ದೈಹಿಕ ದೌರ್ಜನ್ಯವೇ ಕಾರಣ ಎಂದು ಟ್ವಿಶಾ ಪೋಷಕರು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಸಮರ್ಥ್ ಸಿಂಗ್ ಹಾಗೂ ಆತನ ತಾಯಿ (ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್) ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಸಮರ್ಥ್ ಪತ್ತೆಗೆ ಪೊಲೀಸರು 30,000 ರೂ. ಬಹುಮಾನವನ್ನೂ ಘೋಷಿಸಿದ್ದರು.

https://x.com/ANI/status/2057810060592783402?ref_src=twsrc%5Etfw%7Ctwcamp%5Etweetembed%7Ctwterm%5E2057810060592783402%7Ctwgr%5E2572efa21fd07ba4f40a444762112caf70d79765%7Ctwcon%5Es1_c10&ref_url=https%3A%2F%2Fapi-news.dailyhunt.in%2F

 

ಮದುವೆಯನ್ನು ರೊಮ್ಯಾಂಟಿಕ್ ಮಾಡ್ಕೋಬೇಡಿ; ನಟಿ ರಿಧಿ ಡೋಗ್ರಾ

TAGGED:surrenders to court wearing a mask; watch viral videoTwisha Sharma's husbandwho was absconding for 10 days
Share This Article
Facebook Twitter Copy Link Print
Previous Article ಮದುವೆಯನ್ನು ರೊಮ್ಯಾಂಟಿಕ್ ಮಾಡ್ಕೋಬೇಡಿ; ನಟಿ ರಿಧಿ ಡೋಗ್ರಾ
Next Article ಕರ್ನಾಟಕದಲ್ಲಿ ಎಬೋಲಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ದೇಶಪ್ರಮುಖವಿದೇಶ

India Lost at lords | ಲಾರ್ಡ್ಸ್‌ನಲ್ಲಿ ಹೋರಾಡಿದರೂ ಸೋತ ಭಾರತ

3 Min Read
Sportsಪ್ರಮುಖವಿದೇಶ

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read
ದೇಶಪ್ರಮುಖ

Protest at Delhi | ಉಪವಾಸ ಸತ್ಯಾಗ್ರಹದಿಂದ ಸೋನಂ ವಾಂಗ್‌ಚುಕ್ ಆರೋಗ್ಯ ಹದಗೆಟ್ಟಿದೆ: ವೈದ್ಯರ ಆತಂಕ, ದೇಶಾದ್ಯಂತ ಬೆಂಬಲ ಹೆಚ್ಚಳ

2 Min Read
ವಿದೇಶSportsಪ್ರಮುಖ

Fifa World Cup Semifinal|ಫಿಫಾ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾದ ರೋಚಕ ಕಮ್‌ಬ್ಯಾಕ್, ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಮೆಸ್ಸಿ ಪಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?