newsics.com/ನ್ಯೂಸಿಕ್ಸ್
ಇಂದು ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಯನತಾರಾ ಆರಂಭದಲ್ಲಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು. ಸೌತ್ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸ ಗಳಿಸಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರು ನಯನತಾರಾ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.
ಸಾಮಾನ್ಯವಾಗಿ ತಮ್ಮ ಕೆರಿಯರ್‌ನ ಕೆಟ್ಟ ಸಿನಿಮಾ ಯಾವುದು ಎಂದು ಕೇಳಿದರೆ ಎಲ್ಲರೂ ಫ್ಲಾಪ್ ಸಿನಿಮಾದ ಹೆಸರು ಹೇಳುತ್ತಾರೆ. ಆದರೆ ನಯನತಾರಾ ಒಂದು ಬ್ಲಾಕ್‌ಬಸ್ಟರ್ ಚಿತ್ರವನ್ನೇ ತಮ್ಮ ಕೆರಿಯರ್‌ನ ಅತ್ಯಂತ ಕೆಟ್ಟ ಸಿನಿಮಾ ಎಂದಿದ್ದಾರೆ.
ಸೂರ್ಯ ಜೊತೆ ನಟಿಸಿದ್ದ ‘ಗಜಿನಿ’ ಚಿತ್ರ. ಹಳೆಯ ರೇಡಿಯೋ ಶೋ ಒಂದರಲ್ಲಿ ಮಾತನಾಡಿದ್ದ ನಯನತಾರಾ, ನಿರ್ದೇಶಕ ಮುರುಗದಾಸ್ ತನಗೆ ಹೇಳಿದ ಪಾತ್ರಕ್ಕೂ, ಚಿತ್ರೀಕರಿಸಿದ ರೀತಿಗೂ ವ್ಯತ್ಯಾಸವಿತ್ತು ಎಂದಿದ್ದರು.
ಆ ಚಿತ್ರದಲ್ಲಿ ಮೊದಲು ತನ್ನದೇ ಮುಖ್ಯ ಪಾತ್ರ, ಅಸಿನ್ ಸೆಕೆಂಡ್ ಹೀರೋಯಿನ್ ಅಂದುಕೊಂಡಿದ್ದರಂತೆ. ಆದರೆ ಕೊನೆಗೆ ‘ಗಜಿನಿ’ಯಲ್ಲಿ ಸೆಕೆಂಡ್ ಹೀರೋಯಿನ್ ಆಗಬೇಕಾಯ್ತು ಎಂದು ನಯನತಾರಾ ಬೇಸರ ವ್ಯಕ್ತಪಡಿಸಿದ್ದರು. ಇದು ತಮ್ಮ ಕೆರಿಯರ್‌ನಲ್ಲೇ ಕೆಟ್ಟ ಅನುಭವ ಎಂದಿದ್ದಾರೆ ನಯನತಾರಾ.
ಚಂದ್ರಮುಖಿ’, ‘ವಲ್ಲಭ’, ‘ಸಿಂಹ’, ‘ಜವಾನ್’ ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳು ಅವರ ಕೆರಿಯರ್ ನಿಲ್ಲಿಸಿವೆ. ಸದ್ಯ ನಯನತಾರಾ ಕೆಲವು ತಮಿಳು, ಮಲಯಾಳಂ ಸಿನಿಮಾಗಳ ಜೊತೆಗೆ ಬಾಲಯ್ಯ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.
ಯುಜುವೇಂದ್ರ ಚಾಹಲ್ ಜೊತೆಗಿನ ವದಂತಿಗಳ ಬಗ್ಗೆ ಮೌನ ಮುರಿದ ಆರ್‌ಜೆ ಮಹ್ವಶ್