Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತಮಿಳುನಾಡು ಪಾಲಿಟಿಕ್ಸ್​​ನಲ್ಲಿ ಬಿಗ್ ಟ್ವಿಸ್ಟ್​​; ಶಾಸಕರು ರೆಸಾರ್ಟ್​​​ಗೆ ಶಿಫ್ಟ್
ಪ್ರಮುಖಮನರಂಜನೆ

ತಮಿಳುನಾಡು ಪಾಲಿಟಿಕ್ಸ್​​ನಲ್ಲಿ ಬಿಗ್ ಟ್ವಿಸ್ಟ್​​; ಶಾಸಕರು ರೆಸಾರ್ಟ್​​​ಗೆ ಶಿಫ್ಟ್

Share
2 Min Read
SHARE

newsics.com/ನ್ಯೂ ಸಿಕ್ಸ್

ಹೊಸ ಪಕ್ಷ ಕಟ್ಟಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ದಳಪತಿ​ ವಿಜಯ್​​ಗೆ  ಸರ್ಕಾರ ರಚನೆಯೇ ಕಷ್ಟ ಕಷ್ಟ ವಾಗ್ತಿದೆ. ಕಾಂಗ್ರೆಸ್​​ನ ಬೆಂಬಲದಿಂದ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು.

ಆದ್ರೆ, ತಮಿಳುನಾಡಿನ  ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ರಾಜಕೀಯದಲ್ಲಿ ಹೊಸ ಟ್ವಿಸ್ಟ್​ ಎನ್ನುವಂತೆ ಶಾಸಕರನ್ನ  ರೆಸಾರ್ಟ್​​ಗೆ ಶಿಫ್ಟ್ ಮಾಡಲಾಗಿದ್ದು, ದಳಪತಿಗೆ ಇದೀಗ ದೊಡ್ಡ ಟೆನ್ಷನ್ ಆಗಿದೆ.

ವಿಜಯ್​​ ಸರ್ಕಾರ ರಚನೆ ಸರ್ಕಸ್​

ನಟ-ರಾಜಕಾರಣಿ ವಿಜಯ್ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರೊಂದಿಗಿನ ಸಭೆಯಲ್ಲಿ ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ರು. ಆದ್ರೆ, ಸರ್ಕಾರ ರಚಿಸಲು ಟಿವಿಕೆ ಇನ್ನೂ ಹೆಚ್ಚಿನ ಸಂಖ್ಯೆ ಅವಶ್ಯಕತೆ ಇದೆ ಎಂದು ರಾಜ್ಯಪಾಲರು ಹೇಳ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಲೇ ಕಾಂಗ್ರೆಸ್ ಬೆಂಬಲ ನೀಡಿದ್ದು, ಇತರರು ಸಹ ಟಿವಿಕೆ ಸೇರುವ ನಿರೀಕ್ಷೆ ಇದೆ.

ನಂಬರ್​​​ ಮೇಲೆ ನಿಂತಿದೆ ‘ದಳಪತಿ’ ಆಟ

234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಬಹುಮತಕ್ಕೆ 118 ಸ್ಥಾನಗಳ ಕೊರತೆ ಎದುರಿಸಿತು. 5 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಈಗ ವಿಜಯ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ, ಇದರಿಂದಾಗಿ ಸ್ಥಾನಗಳ ಸಂಖ್ಯೆ 113 ಕ್ಕೆ ತಲುಪಿದೆ. ಡಿಎಂಕೆಯ ಇತರ ಪ್ರಮುಖ ಮಿತ್ರಪಕ್ಷಗಳಾದ ಸಿಪಿಐ (ಎರಡು ಸ್ಥಾನಗಳು), ಸಿಪಿಎಂ (ಎರಡು ಸ್ಥಾನಗಳು) ಮತ್ತು ವಿಸಿಕೆ (ಎರಡು ಸ್ಥಾನಗಳು) ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ಟಿವಿಕೆ ಮೂಲಗಳು ಹೇಳ್ತಿವೆ.

ಡಿಎಂಕೆ ಕೇವಲ 59 ಸ್ಥಾನಗಳನ್ನು ಗೆದ್ದರೆ, ಎಂಕೆ ಸ್ಟಾಲಿನ್ ಕೂಡ ತಮ್ಮ ಭದ್ರಕೋಟೆಯಾಗಿದ್ದ ಕೊಳತ್ತೂರ್ ಅನ್ನು ಕಳೆದುಕೊಂಡರು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇದೀಗ ಹೊಸ ಗೇಮ್ ಪ್ಲಾನ್​ ಮಾಡಿದೆ ಎಂದು ವರದಿ ಆಗಿದೆ.

ಡಿಎಂಕೆ-ಎಐಎಡಿಎಂಕೆ ಸೀಕ್ರೆಟ್ ಮೀಟಿಂಗ್​

ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಲು ಮಾತುಕತೆ ಆರಂಭಿಸಿವೆ ಎಂದು ವರದಿಯಾಗಿದೆ. ಎರಡೂ ಪಕ್ಷಗಳ ಪ್ರಮುಖ ಕಾರ್ಯನಿರ್ವಾಹಕರು ಈ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎಐಎಡಿಎಂಕೆ ಶಾಸಕರು ರೆಸಾರ್ಟ್​​ಗೆ ಶಿಫ್ಟ್​

ಟಿವಿಕೆ ಪಕ್ಷ ಎಐಎಡಿಎಂಕೆ ಶಾಸಕರನ್ನ ಸೆಳೆಯುವ ಭೀತಿಯಿಂದ ತಮಿಳುನಾಡಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಎಐಎಡಿಎಂಕೆ ಶಾಸಕರನ್ನ ಪುದುಚೇರಿಯ ರೆಸಾರ್ಟ್‌ಗೆ ಸ್ಥಳಾಂತರಿಸಿ, ಅಲ್ಲಿ ಎರಡು ದಿನಗಳ ಕಾಲ ಉಳಿದುಕೊಳ್ಳಲು ಸೂಚಿಸಲಾಗಿದೆ.

ಇತ್ತ ವಿಜಯ್​ ಕಾನೂನು ತಜ್ಞರ ಸಲಹೆ ಮೇರೆಗೆ ಸರ್ಕಾರ ರಚಿಸಲು ರಣತಂತ್ರ ರೂಪಿಸಿದ್ದಾರೆ. ಅಡೆಚಣೆಗಳನ್ನ ಮೀರಿ ದಳಪತಿ ಸರ್ಕಾರ ರಚಿಸ್ತಾರಾ ಕಾದು ನೋಡಬೇಕಿದೆ.

ತಮಿಳುನಾಡಿನ ಪ್ರಬಲ ಶಕ್ತಿ ಟಿವಿಕೆ

ದಶಕಗಳಿಂದ ಎರಡು ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನಡೆಯುತ್ತಿರುವ ತಮಿಳು ರಾಜಕೀಯ ಯುದ್ಧದಲ್ಲಿ, ವಿಜಯ್ ಈಗ ಟಿವಿಕೆ ರೂಪದಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಅವರ ಉದಯವು ತಮಿಳುನಾಡಿನ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.​

TVK Vijay ಮತ್ತೆ ರಾಜ್ಯಪಾಲರನ್ನು ಭೇಟಿಯಾದ ಟಿವಿಕೆ ಮುಖ್ಯಸ್ಥ ವಿಜಯ್ : 42 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸುವಂತೆ ಗವರ್ನರ್ ಸೂಚನೆ

 

TAGGED:Big twist in Tamil Nadu politics; MLAs shift to resort
Share This Article
Facebook Twitter Copy Link Print
Previous Article ವರಸೆಯಲ್ಲಿ ಅಕ್ಕ ತಮ್ಮ : ಓಡಿ ಹೋಗಿ ಮದುವೆ!
Next Article ಮದುವೆಯಾದ 8 ತಿಂಗಳಲ್ಲೇ ಗೃಹಿಣಿ ಆತ್ಮ*ಹತ್ಯೆ : ಸಾವಿಗೂ ಮುನ್ನ ಪತಿಗೆ ವಿಡಿಯೋ ಕಾಲ್ ಮಾಡಿದ್ದ ಪತ್ನಿ ​

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?