Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಬಹುಮತಕ್ಕೆ 10 ಸ್ಥಾನಗಳ ಕೊರತೆ ನಡುವೆಯೂ ಆಡಳಿತಕ್ಕೆ ವಿಜಯ್ ಸಜ್ಜು , ಟಿವಿಕೆ ಮುಂದಿದೆ 3 ಆಯ್ಕೆ
ಪ್ರಮುಖ

ಬಹುಮತಕ್ಕೆ 10 ಸ್ಥಾನಗಳ ಕೊರತೆ ನಡುವೆಯೂ ಆಡಳಿತಕ್ಕೆ ವಿಜಯ್ ಸಜ್ಜು , ಟಿವಿಕೆ ಮುಂದಿದೆ 3 ಆಯ್ಕೆ

Share
2 Min Read
SHARE

ತಮಿಳುನಾಡು ಚುನಾವಣೆಯಲ್ಲಿ ಅನಿರೀಕ್ಷಿತ ಗೆಲುವಿನ ಮೂಲಕ ಹೊಸ ರಾಜಕೀಯ ಬಿರುಗಾಳಿ ಎಬ್ಬಿಸಿರುವ ‘ಟಿವಿಕೆ’ ಪಕ್ಷದ ಮುಖ್ಯಸ್ಥ, ನಟ ವಿಜಯ ಅವರು ಮೇ 7ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೇ 6 ರಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರನ್ನು ಭೇಟಿಯಾಗಲಿರುವ ವಿಜಯ್‌ ಅವರು ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮೇ 7ರಂದು ಚೆನ್ನೈನ ಜವಾಹರ್‌ಲಾಲ್‌ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಟಿವಿಕೆ ಪಕ್ಷದ ಮೂಲಗಳು ತಿಳಿಸಿವೆ.

ಆದರೆ, ಪೂರ್ಣ ಬಹುಮತಕ್ಕೆ (118) ಇನ್ನೂ 10 ಸ್ಥಾನಗಳ ಕೊರತೆ ನಡುವೆ ವಿಜಯ್‌ ಹೇಗೆ ಸರಕಾರ ರಚನೆ ರಚಿಸಲಿದ್ದಾರೆ, ಯಾವ ಪಕ್ಷದ ಬೆಂಬಲ ಪಡೆಯಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಟಿವಿಕೆ 108 ಸ್ಥಾನ ಗಳಿಸಿದೆ. ಬಹುಮತಕ್ಕೆ 10 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಆದರೆ, ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್‌ ಪೆರಂಬೂರ್‌ ಕ್ಷೇತ್ರವನ್ನು ಉಳಿಸಿಕೊಂಡು, ತಿರುಚುನಾಪಳ್ಳಿ ಪೂರ್ವ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಹೀಗಾದಲ್ಲಿ ಟಿವಿಕೆ ಬಲಾಬಲ 107ಕ್ಕೆ ಕುಸಿದು 11 ಸ್ಥಾನ ಕೊರತೆ ಎದುರಾಗಲಿದೆ. ಇದರ ನಡುವೆ ಕಾಂಗ್ರೆಸ್‌, ಎಐಡಿಎಂಕೆ ಅಥವಾ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಪೈಕಿ ಯಾರ ಬೆಂಬಲವನ್ನು ಅವರು ಪಡೆಯಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಶಾಸಕರ ಜತೆ ಸಭೆ:

ಈ ಮಧ್ಯೆ, ಸರಕಾರ ರಚನೆ ಸಂಬಂಧ ಚರ್ಚಿಸಲು ಮಂಗಳವಾರ ಶಾಸಕರ ಸಭೆ ನಡೆಸಿದ ವಿಜಯ್‌, ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ಹೊಂದಿಸಲು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ವಿಜಯ್‌ ಶಾಸಕಾಂಗ ನಾಯಕ:

ಚೆನ್ನೈನಲ್ಲಿ ಮಂಗಳವಾರ ನಡೆದ ಟಿವಿಕೆ ಶಾಸಕರ ಸಭೆಯಲ್ಲಿ ವಿಜಯ್‌ ಅವರನ್ನು ಪಕ್ಷದ ಶಾಸಕಾಂಗ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದಕ್ಕೂ ಮೊದಲು ಪಕ್ಷದ ಕಚೇರಿಗೆ ಆಗಮಿಸಿದ ವಿಜಯ್‌ ಅವರನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.

ಒಂದು ಗುರಿ 3 ಆಯ್ಕೆ

ಆಯ್ಕೆ 1: ಸರಕಾರ ರಚನೆಗೆ ವಿಜಯ್‌ ಅವರ ಟಿವಿಕೆಗೆ 10 ಸದಸ್ಯರ ಬೆಂಬಲ ಬೇಕಿದೆ. ಡಿಎಂಕೆ, ಎಡಿಎಂಕೆ, ಕಾಂಗ್ರೆಸ್‌, ಬಿಜೆಪಿ, ಎಡಪಕ್ಷಗಳನ್ನು ಹೊರತುಪಡಿಸಿ ತಮಿಳು ಪ್ರಾದೇಶಿಕ ಪಕ್ಷಗಳ 10 ಶಾಸಕರ ಬೆಂಬಲ ಪಡೆದುಕೊಂಡು ಸರಕಾರ ರಚನೆ ಮಾಡಬಹುದು.

ಆಯ್ಕೆ 2: ತಮಿಳು ಪ್ರಾದೇಶಿಕ ಪಕ್ಷಗಳ 10 ಶಾಸಕರ ಜತೆ ಕಾಂಗ್ರೆಸ್‌ನ 5, ಎಡಪಕ್ಷಗಳ 4 ಶಾಸಕರ ಬೆಂಬಲ ಪಡೆದು 127 ಶಾಸಕರ ಬಲದೊಂದಿಗೆ ಸಮ್ಮಿಶ್ರ ಸರಕಾರ ರಚನೆಗೂ ಪ್ರಯತ್ನಿಸಬಹುದು.

ಆಯ್ಕೆ 3: ಬಿಜೆಪಿ ಹೊರತುಪಡಿಸಿ 52 ಸದಸ್ಯ ಬಲ ಹೊಂದಿರುವ ಎಐಎಡಿಎಂಕೆ ಹಾಗೂ ಮಿತ್ರ ಪಕ್ಷಗಳ ಬೆಂಬಲ ಪಡೆದುಕೊಂಡು 160 ಶಾಸಕರ ಬಲದೊಂದಿಗೆ ಸರ್ಕಾರ ರಚಿಸಬಹುದು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 33 ರಿಂದ 37ಕ್ಕೆ ಹೆಚ್ಚಿಸಲು ಪ್ರಧಾನಿ ಮೋದಿ ಸಂಪುಟ ಅನುಮೋದನೆ

TAGGED:TVK has 3 optionsVijay is ready to govern despite falling 10 seats short of a majority
Share This Article
Facebook Twitter Copy Link Print
Previous Article ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 33 ರಿಂದ 37ಕ್ಕೆ ಹೆಚ್ಚಿಸಲು ಪ್ರಧಾನಿ ಮೋದಿ ಸಂಪುಟ ಅನುಮೋದನೆ
Next Article ಸಿಎಂ ಸ್ಥಾನಕ್ಕೆ ಮಮತಾ ರಾಜೀನಾಮೆ ನೀಡದಿದ್ದರೆ ಏನಾಗುತ್ತದೆ?

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read
ಪ್ರಮುಖ

ಎಬೋಲಾ ವೈರಸ್‌ ಅಪಾಯಕಾರಿ, ಆದ್ರೆ ಈ ಸಲಹೆ ಪಾಲಿಸಿದ್ರೆ ಹತ್ತಿರವೂ ಸುಳಿಯಲ್ಲ!

2 Min Read
ಪ್ರಮುಖಕರ್ನಾಟಕದೇಶ

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read
ವಿದೇಶಪ್ರಮುಖ

ಜೂನ್ 6ರಂದು ಭಾರತಕ್ಕೆ CJP ಸಂಸ್ಥಾಪಕ ದೀಪ್ಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?