ಮೇ 2026 ರಲ್ಲಿ ಭಾರತದಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಒಟ್ಟು 12 ಬ್ಯಾಂಕ್ ರಜೆಗಳನ್ನು ಘೋಷಿಸಲಾಗಿದೆ.
ಮೇ 1 — ಮಹಾರಾಷ್ಟ್ರ ದಿನ / ಬುದ್ಧ ಪೌರ್ಣಿಮಾ / ಮೇ ದಿನ (ಕಾರ್ಮಿಕ ದಿನ) — ಕರ್ನಾಟಕ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಕೊಚ್ಚಿ, ಕೋಲ್ಕತಾ, ಲಖನೌ, ಮುಂಬೈ, ನಾಗ್ಪುರ, ದೆಹಲಿ, ಪಣಜಿ, ಪಟ್ನಾ, ರಾಯ್ಪುರ, ರಾಂಚಿ, ಶಿಮ್ಲಾ, ಶ್ರೀನಗರ
ಮೇ 9 — ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ — ಕೋಲ್ಕತ್ತಾದ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ
ಮೇ 16 — ರಾಜ್ಯ ದಿನ (ಸಿಕ್ಕಿಂ ರಾಜ್ಯ ಸ್ಥಾಪನಾ ದಿನ) — ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ.
ಮೇ 26 — ಕಾಜಿ ನಜ್ರುಲ್ ಇಸ್ಲಾಂ ಅವರ ಜನ್ಮದಿನ — ಅಹಮದಾಬಾದ್, ಚಂಡೀಗಢ, ಜೈಪುರ, ಕೊಹಿಮಾ, ಕೋಲ್ಕತಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ
ಮೇ 27 — ಈದ್-ಉಲ್-ಅಧಾ / ಬಕ್ರಿ ಈದ್ — ಕರ್ನಾಟಕ, ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ, ಭೋಪಾಲ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ, ರಾಂಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ
ಮೇ 28 — ಬಕ್ರೀದ್ — ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
ಕರ್ನಾಟಕದಲ್ಲಿ ಎಷ್ಟು ದಿನ ರಜೆ?
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಮೇ 1 ಕಾರ್ಮಿಕರ ದಿನ ಹಾಗೂ ಮೇ 27 ಬಕ್ರೀದ್ ನಿಮಿತ್ತ ರಜೆ ಇದೆ.
ಇದನ್ನು ಹೊರತುಪಡಿಸಿದರೆ, ಮೇ 9 ಮತ್ತು 23 2ನೇ ಹಾಗೂ 4ನೇ ಶನಿವಾರ ಹಾಗೂ 10,17,24 ಮತ್ತು 31 ಭಾನುವಾರ ರಜೆ ಇವೆ.