Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಟ್ರಂಪ್ ಕೊಲೆಗೆ ಮುಂದಾದ ಆರೋಪಿ ಅರೆಸ್ಟ್; ಪೆನ್ ಹಿಡಿದಿದ್ದ ಶಿಕ್ಷಕ ಗನ್​ ಹಿಡಿದಿದ್ಯಾಕೆ?
Uncategorized

ಟ್ರಂಪ್ ಕೊಲೆಗೆ ಮುಂದಾದ ಆರೋಪಿ ಅರೆಸ್ಟ್; ಪೆನ್ ಹಿಡಿದಿದ್ದ ಶಿಕ್ಷಕ ಗನ್​ ಹಿಡಿದಿದ್ಯಾಕೆ?

Share
2 Min Read
SHARE

newsics.com/ನ್ಯೂಸಿಕ್ಸ್

ಅಮೆರಿಕದ ರಾಜಧಾನಿ ವಾಷಿಂಗ್​ಟನ್​ ಡಿ.ಸಿಯಲ್ಲಿನ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ವರದಿಗಾರರೊಂದಿಗಿನ ಹೈಪ್ರೊಫೈಲ್​ ಔತಣಕೂಟದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ನಡೆದಿರುವ ಹತ್ಯೆ ಯತ್ನ ಆರೋಪದಲ್ಲಿ ಕೋಲ್ ಥಾಮಸ್​​ ಅಲೆನ್​​ ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಯಾರು ಈ ಕೋಲ್​ ಥಾಮಸ್​ ಅಲೆನ್​?

ಸದ್ಯ ದೊರೆತಿರುವ ಮಾಹಿತಿ ಪ್ರಕಾರ, ಬಂಧಿತ ಕೋಲ್​ ಅಲೆನ್​ ಕಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೆಕಾನಿಕಲ್​ ಎಂಜಿನಿಯರಿಂಗ್​ನಲ್ಲಿ 2017 ರಲ್ಲಿ ಪದವಿ ಪಡೆದಿದ್ದು, ​ಕಾಲಿಫೋರ್ನಿಯಾ ರಾಜ್ಯ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಸಿ 2 (C2) ಎಂಬ ಶೈಕ್ಷಣಿಕ ಸಂಸ್ಥೆಯಲ್ಲಿ ಪಾರ್ಟ್​ ಟೈಮ್​ಗೆ ಬೋಧಕ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದು, 2024 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೆಯೇ ಈ ಅಲೆನ್​​, 2014 ರಲ್ಲಿ ನಾಸಾ ದ ಪ್ರೊಪಲ್ಷನ್ ಪ್ರಯೋಗಾಲಯದ ಬೇಸಿಗೆ ಸಂಶೋಧನಾ ಶಿಬಿರದ ಫೆಲ್ಲೊಶಿಫ್​ನಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ, ಅಲೆನ್​​ ವಿಡಿಯೋ ಗೇಮ್​ಗಳನ್ನು ಡೆವಲಪರ್​ ಆಗಿ ಸಹ ಕೆಲಸ ಮಾಡಿದ್ದು, ಯುದ್ಧ ಹಾಗೂ ಹೊಡೆದಾಟದ ಗೇಮ್​ಗಳನ್ನು ಸೃಷ್ಟಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾನೆ ಎಂದು ತಿಳಿದಿದೆ. ಹಾಗೆಯೇ ಈ ಕೋಲ್ ಅಲೆನ್​​ 2024 ರಲ್ಲಿ ಡೆಮೊಕ್ರಾಟಿಕ್​ ಪಕ್ಷದ ಕಮಾಲಾ ಹ್ಯಾರಿಸ್​ಗೆ ಬೆಂಬಲ ಸೂಚಿಸಿ 25 ಡಾಲರ್​ನ್ನು ದೇಣಿಗೆ ರೂಪದಲ್ಲಿ ನೀಡಿದ್ದ ಎಂದು ಮಾಹಿತಿ ದೊರೆತಿದೆ.

ಈ ಔತಣಕೂಟದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಪತ್ನಿ ಮೆಲೆನಿಯಾ ಟ್ರಂಪ್​, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಸೇರಿದಂತೆ ಸುಮಾರು 2,500 ಹೈ ಪ್ರೊಫೈಲ್​ ಜನರು ಹಾಜರಿದ್ದರೆಂದು ತಿಳಿದು ಬಂದಿದೆ.

ಬಂಧಿತ ಆರೋಪಿ ಸೆಕ್ಯರಿಟಿ ಚೆಕ್​ಪಾಯಿಂಟ್​ನ್ನು ದಾಟಿ ಬಂದೂಕನ್ನು ಹಿಡಿದು ಬಾಲ್​ರೂಮ್​ನತ್ತ ಓಡುತ್ತಿದ್ದಾಗ ಭದ್ರತಾ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿರುವುದಾಗಿ ವಾಷಿಂಗ್​ಟನ್​ ಡಿ.ಸಿ ಪೊಲೀಸ್​ ಮುಖ್ಯಸ್ಥ ಜೇಫ್ರಿ ಕ್ಯಾರೋಲ್​ ತಿಳಿಸಿದ್ದಾರೆ. ಆತನನ್ನು ವಶಕ್ಕೆ ಪಡೆದ ಕೂಡಲೇ ಅರೆ ಬೆತ್ತಲೆ ಮಾಡಿ ನೆಲದ ಮೇಲೆ ಮಲಗಿಸಿ, ಸ್ಪೋಟಕ ವಸ್ತುಗಳೇನಾದರೂ ಇದ್ದವೆ ಎಂದು ಪರೀಕ್ಷಿಸಲಾಗಿದೆ. ಆದರೆ ಅವನ ಬಳಿ ಯಾವುದೇ ಸ್ಪೋಟಕಗಳು ಕಂಡು ಬಂದಿಲ್ಲ. ಅಲೇನ್​ ಬಳಿ ಇದ್ದ ಶಾಟ್​ಗನ್​, ಹ್ಯಾಂಡ್​ಗನ್​ ಹಾಗೂ ಹಲವಾರು ಚಾಕುಗಳನ್ನು ವಶಕ್ಕೆ ತೆಗೆದು ಕೊಂಡಿರುವುದಾಗಿ ಕ್ಯಾರೋಲ್​ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು; ಸೋಮವಾರ ಹಾಜರು

ಭದ್ರತಾ ಸಿಬ್ಬಂದಿ ಅಲೆನ್​​ನ್ನು ತಡೆಯಲು ಯತ್ನಿಸಿದಾಗ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿಗಳು ಬುಲೆಟ್​ಪ್ರೂಫ್​ ಜಾಕೆಟ್​ ಧರಿಸಿದ್ದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಯುಎಸ್ ಅಟಾರ್ನಿ ಜೀನೈನ್ ಪಿರೊ ಹೇಳಿದ್ದಾರೆ.

ಬಂಧಿತ ಆರೋಪಿ ಕೋಲ್ ಥಾಮಸ್​​ ಅಲೆನ್​​ನನ್ನು ಸೋಮವಾರ (ಏ.27) ಫೆಡರಲ್​ ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ತನಿಖೆ ನಡೆಯುತ್ತಿದ್ದು, ಇವನ ಮೇಲೆ ಕಾರ್ಯುಕ್ರಮಕ್ಕೆ ಬಂದೂಕಿದಾರಿಯಾಗಿ ಬಂದಿರುವ ಹಾಗೂ ಕೊಲೆ ಯತ್ನ ಮಾಡಿರುವ ಹಿನ್ನಲೆ ಪ್ರಕರಣವನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ಪಿರೊ ತಿಳಿಸಿದ್ದಾರೆ,

ಮುಂದಿನ ಎರಡು ತಿಂಗಳು ರಾಜ್ಯಕ್ಕೆ ಜಲ ಗಂಡಾಂತರ: ಪ್ರಿಯಾಂಕ್ ಖರ್ಗೆ

TAGGED:Trump murder suspect arrested; Why did the teacher who was holding a pen hold a gun?
Share This Article
Facebook Twitter Copy Link Print
Previous Article ಮುಂದಿನ ಎರಡು ತಿಂಗಳು ರಾಜ್ಯಕ್ಕೆ ಜಲ ಗಂಡಾಂತರ: ಪ್ರಿಯಾಂಕ್ ಖರ್ಗೆ
Next Article ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೋಕ್ ಎಐ

Popular Posts

Vastu Tips ನಿಮ್ಮ ಮನೆಯಲ್ಲಿ ಪ್ರಾಣಿಗಳ ಮೂರ್ತಿ ಈ ದಿಕ್ಕಿನಲ್ಲಿದ್ರೆ ಶುಭ!

2 Min Read

Daily Horoscope ಇಂದಿನ ದಿನಭವಿಷ್ಯ ಯಾರಿಗೆಲ್ಲಾ‌ ಲಾಭ ? ಯಾರಿಗೆಲ್ಲಾ ನಷ್ಟ

2 Min Read

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

You Might Also Like

Uncategorized

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read
Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?