Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಚಿಕಿತ್ಸಾ ವೆಚ್ಚ ಏರಿಕೆಯಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕುಸಿತ: ವರದಿಯಿಂದ ಮಾಹಿತಿ ಬಹಿರಂಗ
ಪ್ರಮುಖ

ಚಿಕಿತ್ಸಾ ವೆಚ್ಚ ಏರಿಕೆಯಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕುಸಿತ: ವರದಿಯಿಂದ ಮಾಹಿತಿ ಬಹಿರಂಗ

Share
2 Min Read
SHARE

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಈ ತಿಂಗಳು ಬಿಡುಗಡೆಗೊಳಿಸಿರುವ ‘ಮನೆಯ ಸಾಮಾಜಿಕ ಬಳಕೆ:ಆರೋಗ್ಯ’ ವರದಿಯ ಪ್ರಕಾರ ‘ ಹೆಚ್ಚೆಚ್ಚು ಭಾರತೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಅದಕ್ಕೆ ಅನುಗುಣವಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿಲ್ಲ, ಚಿಕಿತ್ಸಾ ವೆಚ್ಚಗಳಲ್ಲಿ ತೀವ್ರ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ವರದಿಯು ಜನವರಿಯಿಂದ ಡಿಸೆಂಬರ್ 2025ರವರೆಗೆ ಸಂಗ್ರಹಿಸಲಾದ ದತ್ತಾಂಶಗಳನ್ನು ಆಧರಿಸಿದೆ. ವರದಿಯ ಪ್ರಕಾರ, ಶೇ.13.1ರಷ್ಟು ಭಾರತೀಯರು 15 ದಿನಗಳ ಅವಧಿಯಲ್ಲಿ ಅನಾರೋಗ್ಯವನ್ನು ವರದಿ ಮಾಡಿದ್ದು, 2017-18ರ ಶೇ.7.5ಕ್ಕೆ ಹೋಲಿಸಿದರೆ ಇದು ತೀವ್ರ ಏರಿಕೆಯಾಗಿದೆ. ಆದರೆ ಆಸ್ಪತ್ರೆ ದಾಖಲಾತಿ ಪ್ರಮಾಣವು ಶೇ.2.9ರಲ್ಲೇ ಸ್ಥಿರವಾಗಿದೆ.

ಇದು ರೋಗಗಳ ಸ್ವರೂಪದಲ್ಲಿ ಬದಲಾವಣೆಯನ್ನು ಸೂಚಿಸುತ್ತಿದೆ. ತುರ್ತು ಸಾಂಕ್ರಾಮಿಕ ರೋಗಗಳಿಂದ ಆಸ್ಪತ್ರೆಗೆ ದಾಖಲಾಗುವ ಬದಲು ದೀರ್ಘಕಾಲೀನ ಆರೈಕೆಯು ಅಗತ್ಯವಾಗಿರುವ ರೋಗಗಳಾಗಿ ಬದಲಾವಣೆಯಾಗುತ್ತಿದೆ. ಈಗ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಪ್ರಮಖ ಸಮಸ್ಯೆಗಳಾಗಿವೆ.

ಹಿಂದಿನ ಎರಡು ಸಮೀಕ್ಷೆಗಳಂತೆ ಆಸ್ಪತ್ರೆಗೆ ದಾಖಲಾತಿ ಪ್ರಮಾಣ ಶೇ.2.9ರಲ್ಲಿ ಸ್ಥಿರವಾಗಿ ಉಳಿದುಕೊಂಡಿದೆ. ರೋಗಿಗಳ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರೂ ಒಳರೋಗಿಗಳಾಗಿ ದಾಖಲಾಗುವವರ ಸಂಖ್ಯೆ ಸ್ಥಿರವಾಗಿರುವಂತೆ ಕಂಡು ಬರುತ್ತಿದೆ. ಇದು ಎರಡು ಸಾಧ್ಯತೆಗಳನ್ನು ಸೂಚಿಸುತ್ತದೆ: ದೀರ್ಘಕಾಲಿಕ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಹೆಚ್ಚಾಗಿರುವುದು ಅಥವಾ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಆಸ್ಪತ್ರೆಗೆ ದಾಖಲಾಗಲು ಹಿಂಜರಿಕೆ.

ಗ್ರಾಮೀಣ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರತಿ ವ್ಯಕ್ತಿ (ಹೆರಿಗೆ ಪ್ರಕರಣಗಳನ್ನು ಹೊರತುಪಡಿಸಿ) ಮಾಡುವ ಸರಾಸರಿ ಸ್ವಂತ ವೆಚ್ಚವು 2014ರಲ್ಲಿ 5,636 ರೂ.ಗಳಾಗಿದ್ದರೆ 2017-18ರಲ್ಲಿ 16,676 ರೂ.ಗೆ ಮತ್ತು 2025ರಲ್ಲಿ 31,488 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಒಂದು ದಶಕದಲ್ಲಿ ಐದು ಪಟ್ಟು ಹೆಚ್ಚಾಗಿದೆ.

ನಗರ ಪ್ರದೇಶಗಳಲ್ಲಿಯೂ ಇಂತಹುದೇ ಪ್ರವೃತ್ತಿಯಿದೆ. ಸರಾಸರಿ ಸ್ವಂತ ವೆಚ್ಚ 2014ರಲ್ಲಿ 7,670 ರೂ.ಗಳಿಂದ 2017-18ರಲ್ಲಿ 26,475 ರೂ.ಗಳಿಗೆ ಮತ್ತು 2025ರಲ್ಲಿ 38,688 ರೂ.ಗಳಿಗೆ ಏರಿಕೆಯಾಗಿದ್ದು,ಇದು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆ ಮತ್ತು ವೈದ್ಯಕೀಯ ಸೇವೆಗಳ ದುಬಾರಿ ದರಗಳನ್ನು ಪ್ರತಿಬಿಂಬಿಸುತ್ತದೆ.

ಆರೋಗ್ಯ ವಿಮೆಯ ವ್ಯಾಪ್ತಿ ವಿಸ್ತರಣೆಗೊಂಡಿದ್ದು ಶೇ.47ರಷ್ಟು ಗ್ರಾಮೀಣ ಮತ್ತು ಶೇ.44ರಷ್ಟು ನಗರ ನಿವಾಸಿಗಳು ವಿಮೆ ರಕ್ಷಣೆಯನ್ನು ಹೊಂದಿದ್ದಾರೆ. ಆದರೂ ಸ್ವಂತ ಜೇಬಿನಿಂದ ಮಾಡುವ ವೆಚ್ಚವು ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ವಿಮೆಯು ಕುಟುಂಬಗಳಿಗೆ ಹೆಚ್ಚುತ್ತಿರುವ ವೆಚ್ಚಗಳಿಂದ ಸಂಪೂರ್ಣವಾಗಿ ರಕ್ಷಣೆ ನೀಡುತ್ತಿಲ್ಲ. ಭಾಗಶಃ ವಿಮೆ ರಕ್ಷಣೆ, ವಿಮೆ ಯೋಜನೆಯಿಂದ ಹೊರಗಿಡಲಾದ ಕೆಲವು ಚಿಕಿತ್ಸೆಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರಾಬಲ್ಯದಿಂದಾಗಿ ಜನರು ವೆಚ್ಚವನ್ನು ತಾವೇ ಭರಿಸುವುದು ಮುಂದುವರಿದಿದೆ.

ಸರಕಾರಿ ಆಸ್ಪತ್ರೆಗಳು ರೋಗಿಗಳಿಗೆ ನೆರವಾಗುತ್ತವೆಯಾದರೂ ಅವುಗಳ ಸೇವಾ ವ್ಯಾಪ್ತಿ ಅಸಮವಾಗಿದೆ.

ಸರಕಾರವು ಆರೋಗ್ಯಕ್ಕಾಗಿ ಮಾಡುವ ವೆಚ್ಚಕ್ಕಿಂತ ಜನರು ಆರೋಗ್ಯ ವಿಮೆಗಾಗಿ ಪಾವತಿಸುತ್ತಿರುವ ಪ್ರೀಮಿಯಂಗಳ ಮೊತ್ತವೇ ಹೆಚ್ಚಾಗುತ್ತಿದೆ ಎನ್ನುವುದನ್ನು ಇತ್ತೀಚಿನ ಹಣಕಾಸು ದತ್ತಾಂಶವು ಸೂಚಿಸಿದೆ.

ಸರಕಾರವು ಪ್ರಾಥಮಿಕ ಜವಾಬ್ದಾರಿಯನ್ನು ಹೊರುವ ಬದಲು ಕುಟುಂಬಗಳು ಹೆಚ್ಚಾಗಿ ವಿಮೆ ರಕ್ಷಣೆಯನ್ನೇ ಅವಲಂಬಿಸಿವೆ.

ಶೂಟಿಂಗ್ ಮುಗಿದ ಮೇಲೆ ನಟ-ನಟಿಯರು ಬಟ್ಟೆಗಳನ್ನು ಏನ್ ಮಾಡ್ತಾರೆ?

TAGGED:Number of hospital admissions declines due to rising medical costs: Report
Share This Article
Facebook Twitter Copy Link Print
Previous Article ಶೂಟಿಂಗ್ ಮುಗಿದ ಮೇಲೆ ನಟ-ನಟಿಯರು ಬಟ್ಟೆಗಳನ್ನು ಏನ್ ಮಾಡ್ತಾರೆ?
Next Article ರಷ್ಯಾ ಅಧ್ಯಕ್ಷ ಪುಟಿನ್ ಜೀವಿತಾವಧಿ 150 ವರ್ಷಕ್ಕೆ ವಿಸ್ತರಿಸಲು ಸಂಜೀವಿನಿ ಕಂಡು ಹಿಡಿದ ವಿಜ್ಞಾನಿಗಳು.!

Popular Posts

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

You Might Also Like

ದೇಶಪ್ರಮುಖ

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read
ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?