newsics.com/ನ್ಯೂಸಿಕ್ಸ್
ಕಲಬುರಗಿ: ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಮದುವೆಯಾದ ಎರಡೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.
https://youtube.com/shorts/yrC3ODyMmjo?si=ybubL3Ee_pXg1sLS
19 ವರ್ಷದ ಭಾಗ್ಯಶ್ರೀ ಆತ್ಮಹತ್ಯೆಗೆ ಶರಣಾದವರು. ಎರಡು ತಿಂಗಳ ಹಿಂದೆ ಭಾಗ್ಯಶ್ರೀ ಸಚಿನ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಮದುವೆಯಾದ ತಿಂಗಳಲ್ಲೇ ಪತಿ ಸಚಿನ್ ಹಾಗೂ ಮನೆಯವರು ಕಿರುಕುಳ ನೀಡುವುದು, ಹಿಂಸಿಸುವುದು ಮಾಡುತ್ತಿದ್ದರಂತೆ.
ಇದರಿಂದ ತೀವ್ರವಾಗಿ ಮನನೊಂದ ಭಾಗ್ಯಶ್ರೀ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಡೆತ್ ನೋಟ್ ನಲ್ಲಿ ಪತಿ ಹಾಗೂ ಮನೆಯವರ ಹಿಂಸೆ ಬಗ್ಗೆ ಉಲ್ಲೇಖಿಸಿದ್ದು, ತನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾಳೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.