newsics.com/ನ್ಯೂಸಿಕ್ಸ್
ಮುಂಬೈ : ಮಕ್ಕಳಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಬೆದರಿಕೆಯನ್ನು ಎತ್ತಿ ತೋರಿಸುವ ಸಲುವಾಗಿ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ 13 ರ್ಷದ ಪುತ್ರಿ ಆನ್‌ಲೈನ್ ವಿಡಿಯೋ ಗೇಮ್ ಆಡುತ್ತಿದ್ದಾಗ ಆಗಿರುವ ಅನುಭವವನ್ನು ಅಕ್ಷಯ್ ಕುಮಾರ್ ಶುಕ್ರವಾರ ಹಂಚಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಅವರ ಪುತ್ರಿ ಆನ್‌ಲೈನ್ ವಿಡಿಯೋ ಗೇಮ್ ಆಡುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್‌ಗೆ ಬಂದು ಆಕೆಯ ಚಿತ್ರವನ್ನು ಕಳಿಸುವಂತೆ ಹೇಳಿದ್ದ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
https://youtube.com/shorts/yrC3ODyMmjo?si=ybubL3Ee_pXg1sLS
ನಿತಾರಾ ಕುಮಾರ್ ಅವರು ಆನ್‌ಲೈನ್ ಅಲ್ಲಿ ಗೇಮ್ ಆಡುತ್ತಿದ್ದರು. ಈ ವೇಳೆ ನಿತಾರಾ ಬಳಿ ಬೆತ್ತಲೆ ಫೋಟೋ ಕಳಿಸುವಂತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದ. ಈ ವಿಷಯವನ್ನು ನಿತಾರಾ ಕುಟುಂಬದ ಗಮನಕ್ಕೆ ತಂದಿದ್ದರು. ಅವರು ಸೈಬರ್ ಠಾಣೆಗೆ ದೂರು ದಾಖಲು ಮಾಡಿದ್ದರು. ದೂರಿನ ಅನ್ವಯ ಓರ್ವನ ಬಂಧನ ಆಗಿದೆ.
ಮಹಾರಾಷ್ಟ್ರ ಸೈಬರ್ ವಿಭಾಗ ಮುಂಬೈನ ಆರ್.ಡಿ. ನ್ಯಾಷನಲ್ ಕಾಲೇಜಿನಲ್ಲಿ ಸೈಬರ್ ಜಾಗೃತಿಗಾಗಿ ವಿಶೇಷ ಅಧಿವೇಶನವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲ್ಲಿ ಆಗಿದೆ. ಈ ಈವೆಂಟ್ನಲ್ಲಿ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಆನ್‌ಲೈನ್ ಅಲ್ಲಿ ಕಿರುಕುಳ ನೀಡುವವರು ಅಕ್ಷಯ್ ಕುಮಾರ್ ಮಗಳನ್ನು ಬಿಟ್ಟಿರಲಿಲ್ಲ.
‘ಅಕ್ಷಯ್ ಕುಮಾರ್ ನಮ್ಮ ಜೊತೆ ಒಂದು ಶಾಕಿಂಗ್ ಸುದ್ದಿ ಹೇಳಿದ್ದರು. ಮಗಳಿಗೆ ಆದ ಸೈಬರ್ ಕಿರುಕುಳದ ಬಗ್ಗೆ ಅವರು ವಿವರಿಸಿದ್ದರು. ಆ ಹುಡುಗಿ ತುಂಬಾ ಧೈರ್ಯಶಾಲಿಯಾಗಿದ್ದಳು. ಹೀಗಾಗಿ ಈ ವಿಷಯವನ್ನು ಹೆತ್ತವರಿಗೆ ತಿಳಿಸಿದಳು. ಅವರು ನಮಗೆ ದೂರು ನೀಡಿದರು’ ಎಂದು ಮಹಾರಾಷ್ಟ್ರ ಸೈಬರ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಹೇಳಿದ್ದಾರೆ. ಈ ವೇಳೆ ಅಕ್ಷಯ್ ವಿವರಿಸಿದ ಘಟನಯನ್ನು ಯಶಸ್ವಿ ಯಾದವ್ ತೋರಿಸಿದ್ದಾರೆ.
ಈ ಪ್ರಕರಣ ಸೈಬರ್ ಠಾಣೆಗೆ ಬಂದಿತ್ತು. ಈ ಸಂಬಂಧ ಓರ್ವನ ಬಂಧಿಸಲಾಗಿದೆ.