newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಜೈಲು ಸೇರಿದ್ದಾರೆ. ಆದರೆ ದರ್ಶನ್ ಜೈಲು ಸೇರಲು ಕಾರಣ ಪವಿತ್ರಾ ಗೌಡ ಅಲ್ಲ, ರೇಣುಕಾಸ್ವಾಮಿನೂ ಅಲ್ಲ. ಈ ಒಬ್ಬ ವ್ಯಕ್ತಿಯಿಂದ ನಟ ದರ್ಶನ್ ಜೈಲು ಪಾಲಗಿದ್ದಾರೆ.
https://youtube.com/shorts/7P5j592ICRU?si=brWLJ4hEetaflYiu
ಕಳೆದ ಕೆಲವು ದಿನಗಳ ಹಿಂದೆ ಬಹುಕಾಲದಿಂದ ಮರೆಯಾಗಿದ್ದ ಒಂದು ಹಳೆಯ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿತ್ತು . ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಹಲವು ವರ್ಷಗಳ ನಂತರ ಹಠಾತ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ದರ್ಶನ್ ಆಪ್ತರು ಹೇಳೋ ಪ್ರಕಾರ ದಾಸನ ಸದ್ಯದ ಸ್ಥಿತಿಗೆ ಈ ಮಲ್ಲಿಕಾರ್ಜುನೇ ಕಾರಣ. ಈತ ಮಾಡಿದ ಕೆಲಸಗಳಿಂದಲೇ ಇವತ್ತು ದರ್ಶನ್ ಜೈಲು ಸೇರಿರೋದು.
ಕೋಟಿ ಕೋಟಿ ಅಭಿಮಾನಿಗಳ ಒಡೆಯ, ಸ್ಯಾಂಡಲ್ವುಡ್ನ ಗಜ ದರ್ಶನ್ ಇವತ್ತು ಪರಪ್ಪನ ಅಗ್ರಹಾರ ಸೇರಿ ಕಂಬಿ ಹಿಂದೆ ಜೀವನ ಮಾಡ್ತಾ ಇರೋದು ದುರಂತವೇ ಸರಿ. ದರ್ಶನ್ ಹೀಗೆ ಜೈಲು ಸೇರಿರೋದು ಬರೀ ಅವರಿಗೆ, ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ಚಿತ್ರರಂಗಕ್ಕೆ ನಷ್ಟ ಅಂತಾರೆ ಸಿನಿಮಾ ಮಂದಿ.
ಆದ್ರೆ ದರ್ಶನ್ ಇವತ್ತಿನ ಸ್ಥಿತಿಗೆ ಯಾರು ಕಾರಣ ಅಂತ ನೋಡಹೋದ್ರೆ.. ಕೆಲವರು ಪವಿತ್ರಾ ಗೌಡ ಸಹವಾಸ ಕಾರಣ ಅಂತಾರೆ. ರೇಣುಕಾಸ್ವಾಮಿ ಮಾಡಿದ ತಪ್ಪು, ಅದನ್ನ ಶಿಕ್ಷಿಸೋಕೆ ಹೋಗಿ ದರ್ಶನ್ ಮಾಡಿದ ಎಡವಟ್ಟು ಕಾರಣ ಅಂತಾರೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ದಾಸನ ಇವತ್ತಿನ ಸ್ಥಿತಿಗೆ ಪರೋಕ್ಷ ಕಾರಣವೇ ಈ ಮ್ಯಾನೇಜರ್ ಮಲ್ಲಿ..!
ಸಾರಥಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಹೀಗೆ ದರ್ಶನ್ ನಟನೆಯ ಸಿನಿಮಾಗಳು ಕೋಟಿ ಕೋಟಿ ಲೂಟಿ ಮಾಡ್ತಾ ಇದ್ದ ಸಮಯ ಅದು. ಆ ಸಮಯದಲ್ಲಿ ದರ್ಶನ್ ಬಳಿ ಸೇರಿಕೊಂಡ ಸಮಯ ಸಾಧಕನೇ ಈ ಮಲ್ಲಿಕಾರ್ಜುನ್ ಸಂಕನಗೌಡರ್.
ಮೊದಲ ಸಲ ಅನ್ನೋ ಸಿನಿಮಾ ನಿರ್ಮಿಸಿದ್ದ ಮಲ್ಲಿಕಾರ್ಜುನ್, ದರ್ಶನ್ ಜೊತೆ ಆಪ್ತನಾಗಿ ಅವರ ಮ್ಯಾನೇಜರ್ ಆಗಿ ಸೇರಿದ್ದ. ಈತನನ್ನ ನಂಬಿ ತಮ್ಮ ನಿರ್ಮಾಣ ಸಂಸ್ಥೆ ಮತ್ತು ವಿತರಣಾ ಸಂಸ್ಥೆಯ ಜವಾಬ್ದಾರಿಗಳನ್ನ ಬಿಟ್ಟುಕೊಟ್ಟಿದ್ರು ದರ್ಶನ್.
ದರ್ಶನ್ ಜೊತೆಗೆ ಆವತ್ತು ಆಪ್ತರಾಗಿದ್ದ ಅನೇಕರು ಅವರ ನಿರ್ಮಾಣ ಸಂಸ್ಥೆ ಮತ್ತು ವಿತರಣಾ ಸಂಸ್ಥೆ ಜೊತೆಗೆ ಹಣಕಾಸಿವ ವ್ಯವಹಾರ ಹೊಂದಿದ್ರು. ಆದ್ರೆ ಈ ವಂಚಕ ಮಲ್ಲಿ ಆ ಹಣವನ್ನ ಲಪಟಾಯಿಸಿ ಓಡಿಹೋಗಿಬಿಟ್ಟ.
ಈತ ಮಾಡಿದ ಎಡವಟ್ಟಿನಿಂದ ದರ್ಶನ್ ಜೊತೆಗಿದ್ದ ಅನೇಕ ಸ್ನೇಹಿತರು ದೂರವಾಗಿಬಿಟ್ರು. ಮ್ಯಾನೇಜರ್ ಮಾಡಿದ ಮೋಸದಿಂದ ದರ್ಶನ್ ಜೊತೆಗಿದ್ದ ಅನೇಕ ಅಸಲಿ ಮಿತ್ರರು ದೂರವಾಗುವಂತೆ ಮಾಡಿತು. ಅಲ್ಲಿಂದ ಮುಂದೆ ದರ್ಶನ್ ಗೆಳೆಯರ ಬಳಗ ಬದಲಾಯ್ತು.
ಈ ಸ್ನೇಹಿತರ ಬಳಗ ಬದಲಾದ ಮೇಲೆಯೇ ದರ್ಶನ್ ಒಂದರ ಹಿಂದೆ ಒಂದು ಎಡವಟ್ಟು ಮಾಡಿಕೊಳ್ಳೋದಕ್ಕೆ ಶುರುವಾಗಿದ್ದು. ದರ್ಶನ್ ಜೊತೆಗೆ ಸೇರಿಕೊಂಡ ದುಷ್ಟ ಸ್ನೇಹಿತರ ಪಡೆ ಅವರನ್ನ ಎಚ್ಚರಿಸದೇ ಮತ್ತಷ್ಟು ಕುಕೃತ್ಯ ಮಾಡೋದಕ್ಕೆ ಪ್ರೇರಿಪಿಸ್ತಾನೆ ಹೋಯ್ತು.
ಒಟ್ನಲ್ಲಿ ಮ್ಯಾನೇಜರ್ ಮಲ್ಲಿ ಮಾಡಿದ ಎಡವಟ್ಟಿನಿಂದ ದರ್ಶನ್ ಬದುಕೇ ಬದಲಾಗಿಬಿಟ್ತು. ಅಂತೆಯೇ ಖುದ್ದು ದಿನಕರ್, ಈತನಿಂದ ನಮ್ಮ ಕುಟುಂಬದಲ್ಲಿ ಎಷ್ಟೆಲ್ಲಾ ಎಡವಟ್ಟು ಆಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ ಅಂತ ಹೇಳಿದ್ದಾರೆ. ಇವತ್ತು ದರ್ಶನ್ ಜೈಲಿನಲ್ಲಿ ಕೊಳೀತಾ ಇರೋದಕ್ಕೆ ಈ ಮ್ಯಾನೇಜರ್ ಮಲ್ಲಿ ಕೂಡ ಕಾರಣ..!