Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಫ್ಲಶ್ ಮಾಡಲು ಯತ್ನಿಸಿದ 19 ವರ್ಷದ ಯುವತಿ ಅರೆಸ್ಟ್
ಕರ್ನಾಟಕ

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಫ್ಲಶ್ ಮಾಡಲು ಯತ್ನಿಸಿದ 19 ವರ್ಷದ ಯುವತಿ ಅರೆಸ್ಟ್

Share
2 Min Read
SHARE

newsics.com/ನ್ಯೂಸಿಕ್ಸ್

ಸಿಲಿಕಾನ್ ಸಿಟಿಯ ಹೊಸೂರು ರಸ್ತೆಯಲ್ಲಿರುವ ಪ್ರಸಿದ್ಧ ಆಪಲ್ ಫೋನ್ ಉತ್ಪಾದನಾ ಘಟಕದ (ಫಾಕ್ಸ್‌ಕಾನ್) ಆವರಣದಲ್ಲಿ ಭ್ರೂಣವೊಂದು ಪತ್ತೆಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಘಟಕದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಖಾನೆಯ ಶೌಚಾಲಯದ ಬ್ಲಾಕ್‌ನಲ್ಲಿ ಶುಚಿಗೊಳಿಸುವ ಸಿಬ್ಬಂದಿಗೆ ಭ್ರೂಣವೊಂದು ಪತ್ತೆಯಾಗಿತ್ತು. ಕೂಡಲೇ ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರಿಗೆ ದೂರು ನೀಡಲಾಯಿತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳನ್ನು ಬಂಧನ ಮಾಡಲಾಗಿದೆ. ಘಟನೆ ನಡೆದ ಸಮಯದಲ್ಲಿ ಶೌಚಾಲಯದ ಕಡೆಗೆ ಹೋದವರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಅಲ್ಲಿನ ಸಿಬ್ಬಂದಿಯೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ಅಚ್ಚರಿಯ ವಿಚಾರವೊಂದು ತಿಳಿಯಿತು. 19 ವರ್ಷದ ಯುವತಿಯು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಆಕೆಯನ್ನು ಬಂಧನ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭ್ರೂಣವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯು ಗರ್ಭಪಾತ ಮಾಡಿಕೊಂಡಿದ್ದಾಳೆಯೇ ಅಥವಾ ಅಕ್ರಮ ಗರ್ಭಧಾರಣೆಯನ್ನು ಮುಚ್ಚಿಡಲು ಈ ಕೃತ್ಯ ಎಸಗಿದ್ದಾಳೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅಷ್ಟಕ್ಕೂ ಶೌಚಾಲಯದ ನಡೆದದ್ದೇನು?

ಸಿಲಿಕಾನ್ ಸಿಟಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 19 ವರ್ಷದ ಯುವತಿಯೊಬ್ಬಳು ಶೌಚಾಲಯದಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿ, ಅತ್ಯಂತ ಕ್ರೂರವಾಗಿ ಮಗುವಿನ ಕತ್ತು ಸೀಳಿ, ದೇಹವನ್ನು ಶೌಚಾಲಯದ ಗುಂಡಿಯಲ್ಲಿ ಫ್ಲಶ್ (Flush) ಮಾಡಲು ಯತ್ನಿಸಿದ್ದಳು. ಶೌಚಾಲಯಕ್ಕೆ ಹೋದ ಯುವತಿ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮಗುವನ್ನು ಕೊಂದು ಸಾಕ್ಷ್ಯ ನಾಶಪಡಿಸಲು ಮಗುವಿನ ದೇಹವನ್ನು ಶೌಚಾಲಯದ ಪೈಪ್‌ ಒಳಗೆ ತಳ್ಳಲು ಪ್ರಯತ್ನಿಸಿದ್ದಾಳೆ.

ಈ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಶೌಚಾಲಯದ ಪೈಪ್ ಬ್ಲಾಕ್ ಆಗಿದ್ದರಿಂದ ಶುಚಿಗೊಳಿಸುವ ಸಿಬ್ಬಂದಿ ಪರೀಕ್ಷಿಸಿದಾಗ ಮಗುವಿನ ದೇಹ ಪತ್ತೆಯಾಗಿದೆ. ಇದನ್ನು ಕಂಡು ಬೆಚ್ಚಿಬಿದ್ದ ಸಿಬ್ಬಂದಿ ಕೂಡಲೇ ಆಡಳಿತ ಮಂಡಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ 19 ವರ್ಷದ ಯುವತಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಪ್ಯಾರಾಸಿಟಮಾಲ್ ಬಳಸಬೇಡಿ : ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ

TAGGED:19-year-old woman arrested for giving birth to baby in toiletslitting throat and trying to flush
Share This Article
Facebook Twitter Copy Link Print
Previous Article ಪ್ಯಾರಾಸಿಟಮಾಲ್ ಬಳಸಬೇಡಿ : ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ
Next Article ಹೆಣ್ಣು ಮಕ್ಕಳಲ್ಲಿ ಎಂಟು ವರ್ಷಕ್ಕೇ ಋತುಚಕ್ರ : ಆತಂಕಕಾರಿ ವರದಿ ಬಹಿರಂಗ

Popular Posts

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read

Ramayana Trailer Launch ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ; ಕಾರಣವೇನು?

1 Min Read

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

You Might Also Like

ಕರ್ನಾಟಕಪ್ರಮುಖ

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read
ಕರ್ನಾಟಕದೇಶಪ್ರಮುಖ

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?