https://youtube.com/shorts/7P5j592ICRU?si=brWLJ4hEetaflYiu
newsics.com
ಬೆಂಗಳೂರು : ಪ್ರೀತಿಸಿ ಮದುವೆಯಾದವನ ಕಿರುಕುಳ ತಾಳಲಾರೆದೇ ಮನನೊಂದು ಟೆಕ್ಕಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ತಲಘಟ್ಟಪುರದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
29 ವರ್ಷದ ಭುವನೇಶ್ವರಿ ಮೃತ ದುರ್ದೈವಿಯಾಗಿದ್ದಾರೆ. ಯುವತಿಗೆ ಗಂಡ ನಿತ್ಯ ಮಾನಸಿಕ-ದೈಹಿಕ ಕಿರುಕುಳ ನೀಡ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಹರೀಶ್ ಕುಮಾರ್ ಮತ್ತು ಭುವನೇಶ್ವರಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡ್ತಿದ್ರು. ಪರಸ್ಪರ ಪ್ರೀತಿ ಮಾಡ್ತಿದ್ದ ಈ ಜೋಡಿ ಎರಡೂ ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಿದ್ರು. ಕೆಲ ತಿಂಗಳು ಚೆನ್ನಾಗಿಯೇ ಇದ್ದ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತಿ ಹರೀಶ್ ಕುಮಾರ್ ಪತ್ನಿ ಭುವನೇಶ್ವರಿ ಅವರಿಗೆ ವರದಕ್ಷಿಣೆ ಕಿರುಕುಳ ಕೂಡ ಕೊಟ್ಟಿದ್ದಾನೆ ಎನ್ನಲಾಗ್ತಿದೆ. ಮಗುವನ್ನ ಅನಾಥ ಮಾಡಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ.
ಇದೇ ತಿಂಗಳ 20 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2025ರಲ್ಲಿ ಪತ್ನಿ ಭುವನೇಶ್ವರಿ ಅವರನ್ನು ತಾಯಿಗೆ ಮನೆ ಬಿಟ್ಟು ಹೋಗಿದ್ದನಂತೆ. ಪತ್ನಿಯಿಂದ ದೂರವಾಗಿದ್ದ ಪತಿ ಹರೀಶ್ ನನ್ನು ಸಂಪರ್ಕಿಸಲು ಹಲವು ಭುವನೇಶ್ವರಿ ಹಲವು ಬಾರಿ ಪ್ರಯತ್ನ ಮಾಡಿದ್ರಂತೆ. ಆದ್ರೆ ಹರೀಶ್ ಒಟ್ಟಿಗೆ ಬಾಳಲು ಇಷ್ಟವಿಲ್ಲದೆ ಡಿವೋರ್ಸ್ ಕೇಳಿದಂತೆ.
ಪತಿ ಹರೀಶ್ ಕುಮಾರ್ ಸೇರಿದಂತೆ ಕುಟುಂಬಸ್ಥರ ಮೇಲೆ ಎಫ್ಐಆರ್ ದಾಖಲಾಗಿದೆ.