newsics.com/ನ್ಯೂಸಿಕ್ಸ್
Central Board of Secondary Education (ಸಿಬಿಎಸ್ಇ) 10ನೇ ತರಗತಿ ಎರಡನೇ ಹಂತದ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 15ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಮೊದಲ ದಿನ ಗಣಿತ (ಸ್ಟ್ಯಾಂಡರ್ಡ್) ಮತ್ತು ಗಣಿತ (ಬೇಸಿಕ್) ವಿಷಯಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗಳು ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದ್ದು, ಕೆಲ ವಿಷಯಗಳ ಪರೀಕ್ಷೆಗಳು 12:30ಕ್ಕೆ ಮುಕ್ತಾಯವಾಗಲಿವೆ.

ಎರಡು ಹಂತದ ಬೋರ್ಡ್ ಪರೀಕ್ಷಾ ವ್ಯವಸ್ಥೆಯನ್ನು 2026ರಿಂದ ಜಾರಿಗೆ ತರುತ್ತಿರುವ ಸಿಬಿಎಸ್ಇ, ವಿದ್ಯಾರ್ಥಿಗಳಿಗೆ ಗರಿಷ್ಠ ಮೂರು ವಿಷಯಗಳಲ್ಲಿ ಅಂಕ ಸುಧಾರಣೆಗೆ ಅವಕಾಶ ಕಲ್ಪಿಸಿದೆ.
ಅರ್ಹರು: ಮೊದಲ ಹಂತದಲ್ಲಿ ಕನಿಷ್ಠ ಮೂರು ವಿಷಯಗಳಿಗೆ ಹಾಜರಾದವರು, ಉತ್ತೀರ್ಣರಾಗಿ ಅಂಕ ಸುಧಾರಣೆ ಬಯಸುವವರು, ಕಂಪಾರ್ಟ್‌ಮೆಂಟ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಅರ್ಹರಲ್ಲದವರು: ಮೂರು ಅಥವಾ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದವರು ಅಥವಾ ಪರೀಕ್ಷೆಗೆ ಹಾಜರಾಗದವರು ಹಾಗೂ ER ವರ್ಗದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿರುವುದಿಲ್ಲ.
Karnataka SSLC results 2026 ಇಂದು ಮಧ್ಯಾಹ್ನ SSLC ರಿಸಲ್ಟ್: ತೃತೀಯ ಭಾಷೆಗೂ ಸಿಗಲಿದೆ ಮಾರ್ಕ್ಸ್