Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಹಲ್ಲುಗಳು ಹಳದಿಯಾಗಲು ಕಾರಣವೇನು?ದಂತ ತಜ್ಞರು ಹೇಳಿದ್ದೇನು?
ಲೈಫ್‌ಸ್ಟೈಲ್ಆರೋಗ್ಯ

ಹಲ್ಲುಗಳು ಹಳದಿಯಾಗಲು ಕಾರಣವೇನು?ದಂತ ತಜ್ಞರು ಹೇಳಿದ್ದೇನು?

Share
3 Min Read
SHARE

 

ಬಾಯಿಯನ್ನು ದೇಹದ ಆರೋಗ್ಯದ ಕೈಗನ್ನಡಿ ಎಂದು ಕರೆಯಲಾಗುತ್ತದೆ. ಅದೇ ರೀತಿಯಲ್ಲಿ ಹಲ್ಲುಗಳು ಕೂಡ. ಹಲ್ಲುಗಳ ಬಣ್ಣ (Teeth Color) ಬದಲಾಗುವುದರ ಹಿಂದೆ ಕೇವಲ ಸ್ವಚ್ಛತೆಯ ಕೊರತೆ ಮಾತ್ರವಲ್ಲ, ಇನ್ನೂ ಹಲವು ಆಂತರಿಕ ಹಾಗೂ ಬಾಹ್ಯ ಕಾರಣಗಳಿರಬಹುದು ಎಂದು ದಂತ ತಜ್ಞರು ಎನ್ನುತ್ತಾರೆ.

ಹಲ್ಲುಗಳ ನೈಸರ್ಗಿಕ ಬಣ್ಣ ಮಾಸಲು ವಯಸ್ಸು, ಅನುವಂಶೀಯತೆ, ನಾವು ಸೇವಿಸುವ ಆಹಾರ ಹಾಗೂ ಜೀವನಶೈಲಿ (Lifestyle) ನೇರ ಕಾರಣವಾಗುತ್ತದೆ. ಎಷ್ಟೇ ಹಲ್ಲು ಉಜ್ಜಿದರೂ ಅವು ಬಣ್ಣ ಬದಲಾಗಲು ಸಾಧ್ಯವಿಲ್ಲ. ಬಿಳಿ ಹಾಲಿನ ಹಲ್ಲುಗಳ ಬದಲಾಗಿ ಅವರು ಹಳದಿಯಾಗಿಯೇ ಇರುತ್ತವೆ. ಇದಕ್ಕೆ ಕಾರಣಗಳು ಹಲವು.

ಆರೋಗ್ಯವಂತ ಬಾಯಿ, ಆರೋಗ್ಯವಂತ ದೇಹದ ಅಡಿಪಾಯವಿದ್ದಂತೆ. ಹಲ್ಲುಗಳ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಕಾಳಜಿ ಮತ್ತು ಸಕಾಲದಲ್ಲಿ ತಜ್ಞರ ಮಾರ್ಗದರ್ಶನ ಪಡೆಯುವುದು ಬಹಳ ಮುಖ್ಯ ಎನ್ನುತ್ತಾರೆ ಹ್ಯಾಪಿಯೆಸ್ಟ್ ಪರ್ಲ್ಸ್‌ನ ದಂತ ವೈದ್ಯೆ ಡಾ. ಶ್ರದ್ಧಾ ಬಹಿರ್ವಾನಿ. ಹಳದಿ ಬಣ್ಣಕ್ಕೆ ಹಲ್ಲುಗಳು ಕಾಣಿಸಲು ಪ್ರಮುಖ ಕಾರಣಗಳು ಇಲ್ಲಿವೆ. ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಹೋಗಲಾಡಿಸುವ ಸರಳ ವಿಧಾನವನ್ನು ವೈದ್ಯರು ತಿಳಿಸಿದ್ದಾರೆ.

ಅನುವಂಶೀಯತೆ ಮತ್ತು ವಯಸ್ಸು

ಕೆಲವರಿಗೆ ಜನ್ಮತಃ ಹಲ್ಲಿನ ಹೊರಪದರ (ಎನಾಮಲ್‌) ತೆಳುವಾಗಿರುತ್ತದೆ. ವಯಸ್ಸಾದಂತೆಯೂ ಈ ಪದರ ಸವೆಯುತ್ತದೆ. ಆಗ ಹಲ್ಲಿನ ಒಳಭಾಗದಲ್ಲಿರುವ ‘ಡೆಂಟಿನ್’ ಎಂಬ ಹಳದಿ ಪದರ ಎದ್ದು ಕಾಣುತ್ತದೆ. ಇದರಿಂದ ಹಲ್ಲುಗಳು ಸಹಜವಾಗಿಯೇ ಹಳದಿಯಾಗಿ ಕಾಣುತ್ತವೆ.

ಆಹಾರ ಪದ್ಧತಿ

ಅತಿಯಾಗಿ ಟೀ, ಕಾಫಿ, ವೈನ್ ಕುಡಿಯುವ ಅಭ್ಯಾಸ, ತಂಪು ಪಾನೀಯಗಳು ಹಾಗೂ ಕೃತಕ ಬಣ್ಣವಿರುವ ಆಹಾರಗಳ ಸೇವನೆಯಿಂದ ಹಲ್ಲುಗಳ ಮೇಲೆ ಕಲೆಗಳು ಉಂಟಾಗುತ್ತವೆ. ದೀರ್ಘಕಾಲದವರೆಗೆ ಇದು ಮುಂದುವರಿದರೆ ಕಲೆಗಳು ಹಲ್ಲಿನ ಆಳಕ್ಕೆ ಇಳಿದುಬಿಡುತ್ತವೆ.

ಜೀವನಶೈಲಿ ಮತ್ತು ದುಶ್ಚಟಗಳು

ಧೂಮಪಾನ, ಇ-ಸಿಗರೇಟ್ ಹಾಗೂ ತಂಬಾಕು ಸೇವನೆಯಿಂದ ಅದರಲ್ಲಿರುವ ನಿಕೋಟಿನ್ ಅಂಶ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ. ಇದು ಎಷ್ಟೇ ಬ್ರಷ್ ಮಾಡಿದರೂ ಹೋಗದಂತಹ ಕಲೆಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಹಲ್ಲಿನ ಮೇಲೆ ‘ಟಾರ್ಟರ್’ ಎಂಬ ಗಟ್ಟಿ ಪದರ ಕೂಡ ಹಲ್ಲುಗಳ ಅಂದ ಕೆಡಿಸುತ್ತದೆ.

ನೀರಿನಲ್ಲಿರುವ ಫ್ಲೋರೈಡ್ (ಫ್ಲೋರೋಸಿಸ್)

ಬಾಲ್ಯದಲ್ಲಿ ಕುಡಿಯುವ ನೀರಿನಲ್ಲಿ, ಅದರಲ್ಲೂ ವಿಶೇಷವಾಗಿ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದರೆ ಹಲ್ಲಿನ ಬಣ್ಣ ಬದಲಾಗುತ್ತದೆ. ಇದನ್ನು ‘ಫ್ಲೋರೋಸಿಸ್’ ಎನ್ನಲಾಗುತ್ತದೆ.

ಔಷಧಿಗಳು ಮತ್ತು ಹಲ್ಲಿನ ಮೇಲೆ ಬಿದ್ದ ಏಟು

ಟೆಟ್ರಾಸೈಕ್ಲಿನ್‌ನಂತಹ ಕೆಲವು ಔಷಧಿಗಳು ಹಾಗೂ ಐರನ್ ಮಾತ್ರೆಗಳ ಸೇವನೆಯೂ ಹಲ್ಲುಗಳ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಅಪಘಾತ ಅಥವಾ ಇತರೆ ಕಾರಣಗಳಿಂದ ಹಲ್ಲಿಗೆ ಪೆಟ್ಟಾದರೂ ಹಲ್ಲು ಕಪ್ಪಾಗುವ ಅಥವಾ ಹಳದಿಯಾಗುವ ಸಾಧ್ಯತೆ ಇರುತ್ತದೆ.

ಇದಕ್ಕಿರುವ ವೈದ್ಯಕೀಯ ಪರಿಹಾರಗಳೇನು?

ಹಲ್ಲು ಹಳದಿಯಾಗಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ದಂತ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಮೇಲ್ಮೈ ಕಲೆಗಳನ್ನು ಹೋಗಲಾಡಿಸಲು ಮತ್ತು ಟಾರ್ಟರ್ ನಿವಾರಿಸಲು ‘ಪ್ರೊಫೆಷನಲ್ ಕ್ಲೀನಿಂಗ್’ ಮತ್ತು ಹಲ್ಲುಗಳನ್ನು ಬೆಳ್ಳಗಾಗಿಸಲು ‘ಬ್ಲೀಚಿಂಗ್’ ಮಾಡಲಾಗುತ್ತದೆ.

ಫ್ಲೋರೋಸಿಸ್ ಅಥವಾ ಅತಿಯಾದ ಕಲೆಗಳಿಂದ ಹಲ್ಲುಗಳು ಆಂತರಿಕವಾಗಿ ಹಾಳಾಗಿದ್ದರೆ, ಅಂತವರಿಗೆ ಕಾಸ್ಮೆಟಿಕ್ ಚಿಕಿತ್ಸೆಗಳಾದ ‘ವೆನೀರ್ಸ್’, ‘ಲ್ಯಾಮಿನೇಟ್ಸ್’ ಅಥವಾ ʼ’ಸೆರಾಮಿಕ್ ಕ್ರೌನ್‌ʼಗಳನ್ನು ಶಿಫಾರಸು ಮಾಡಲಾಗುತ್ತದೆ. ಹಲ್ಲಿಗೆ ಪೆಟ್ಟಾಗಿ ನರಗಳಿಗೆ ಹಾನಿಯಾಗಿದ್ದರೆ, ರೂಟ್ ಕೆನಾಲ್ ಚಿಕಿತ್ಸೆಯ ಅಗತ್ಯವಿರುತ್ತದೆ.

ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಏನು?

1. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಒಂದಾಗಿದೆ.

2. ದಿನಕ್ಕೆ ಕಡ್ಡಾಯವಾಗಿ ಎರಡು ಬಾರಿ ಬ್ರಷ್ ಮಾಡಿ

3. ಏನಾದರೂ ತಿಂದ ನಂತರ ಅಥವಾ ಊಟವಾದ ತಕ್ಷಣ ಕಡ್ಡಾಯವಾಗಿ ಬಾಯಿ ಮುಕ್ಕಳಿಸುವ ಅಭ್ಯಾಸ ರೂಢಿಸಿಕೊಳ್ಳಿ

4. ಹಲ್ಲಿಗೆ ಕಲೆಗಳನ್ನು ಉಂಟುಮಾಡುವ ಪಾನೀಯಗಳು ಹಾಗೂ ಆಹಾರವನ್ನು ಮಿತವಾಗಿ ಸೇವಿಸಿ

5. ಸಾಕಷ್ಟು ನೀರು ಕುಡಿಯುವುದು ಬಾಯಿಯ ಆರೋಗ್ಯಕ್ಕೆ ಬಹಳ ಒಳ್ಳೆಯದು.

6. ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ದಂತ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಿ. ಅಗತ್ಯವಿದ್ದರೆ ತಜ್ಞರ ಸಲಹೆಯಂತೆ ಪ್ರೊಫೆಷನಲ್ ವೈಟನಿಂಗ್ ಚಿಕಿತ್ಸೆ ಪಡೆಯಬಹುದು.

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?ಹೊಸ ಚರ್ಚೆ

TAGGED:What causes teeth to turn yellow? Here is an important advice from a dentist for milk-colored teeth
Share This Article
Facebook Twitter Copy Link Print
Previous Article ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?ಹೊಸ ಚರ್ಚೆ
Next Article ‘ನಟಿ ರನ್ಯಾ ರಾವ್​​’ಗೆ ಜಾಮೀನು ಮಂಜೂರು, ಇಂದೇ ಜೈಲಿನಿಂದ ಬಿಡುಗಡೆ ಸಾಧ್ಯತೆ

Popular Posts

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read

You Might Also Like

ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?