Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಇದೊಂದು ಎಲೆ ಚೂರು ಹಾಕಿದ್ರೆ ಮೊಸರು ಗಟ್ಟಿಯಾಗುತ್ತೆ!
ಲೈಫ್‌ಸ್ಟೈಲ್ಆರೋಗ್ಯ

ಇದೊಂದು ಎಲೆ ಚೂರು ಹಾಕಿದ್ರೆ ಮೊಸರು ಗಟ್ಟಿಯಾಗುತ್ತೆ!

Share
1 Min Read
SHARE

ಶಿರಸಿ ಮೂಲದ ರವಿಚಂದ್ರ ಹೆಗಡೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಜನ್ನೆ ಮೊಸರಿನ ಬಗ್ಗೆ ವಿಶೇಷವಾದ ಪೋಸ್ಟ್‌ ಹಂಚಿಕೊಂಡಿದ್ದಾರೆ.

ರವಿಚಂದ್ರ ಹೆಗಡೆ ಏನು ಹೇಳಿದ್ರು?

“ಜನ್ನೆ ಮೊಸರು”!!.. ಬಾಳೆಎಲೆಯ ಚಿಕ್ಕ ಚೂರು ಒಂದನ್ನು ಹಾಲು ಹೆಪ್ಪು ಹಾಕುವ ಸಮಯದಲ್ಲಿ ಹೆಚ್ಚುವರಿಯಾಗಿ ಉಪಯೋಗಿಸಿದರೆ ಮಾರನೆಯ ದಿನ ಅತ್ಯುತ್ತಮ ರುಚಿಯ ಗಟ್ಟಿ ಮೊಸರು ದೊರಕುತ್ತದೆ.!

ಹಾಗೆ ಮನೆಯಲ್ಲೇ ಆಕಳು ಇದ್ದು ಹಾಲನ್ನು ಕರೆಯುವವರು ವಾರದಲ್ಲಿ ಒಂದು ದಿನ ಅಷ್ಟೂ ಮೊಸರನ್ನು ದೇವರಿಗೆ ನೈವೇದ್ಯ ಮಾಡಿ ಹಾಗೆ ಉಪಯೋಗಿಸುತ್ತಾರೆ. ಅದೊಂದು ದಿನ ಮೊಸರನ್ನು ಕಡೆದು ಮಜ್ಜಿಗೆ ಮಾಡುವುದಿಲ್ಲ. ಇದಕ್ಕೆ ನಾವು “ಜನ್ನೇ ಬಿಡುವುದು” ಎಂದು ಕರೆಯುತ್ತೇವೆ. ಈ ರೀತಿಯ ಸಂಪೂರ್ಣ ಮೊಸರು ಉಪಯೋಗಿಸುವ ದಿನದಲ್ಲಂತೂ ಈ ಬಾಳೆ ಎಲೆಯ ಚಿಕ್ಕ ಚೂರನ್ನ ಬಳಸಿ ಅತ್ಯುತ್ತಮ ರುಚಿಯ ಗಟ್ಟಿಯ ಮೊಸರನ್ನು ಮಾಡಿಕೊಂಡಿರುತ್ತೇವೆ ಎಂದು ರವಿಚಂದ್ರ ಹೆಗಡೆ ಹೇಳುತ್ತಾರೆ.
ಈ ಸಂಪ್ರದಾಯ ಇರುವ ಮನೆಯವರು ಪ್ರತಿ ಶನಿವಾರ ಅಥವಾ ಸೋಮವಾರ ದಿನದಂದು ಈ ಜನ್ನೇಮೊಸರು ಮಾಡುತ್ತಾರೆ.! ಈ ಸಂಪ್ರದಾಯ ಎಲ್ಲೆಲ್ಲಿ ಚಾಲ್ತಿ ಇದೆಯೋ ಗೊತ್ತಿಲ್ಲ, ಮಲೆನಾಡಿನಲ್ಲಿ ಬಹಳ ಮುಂಚಿನಿಂದಲೂ ಇದೊಂದು ಪದ್ಧತಿ ನಡೆದುಕೊಂಡು ಬರುತ್ತಿದೆ ಎಂದು ರವಿಚಂದ್ರ ಹೆಗಡೆ ಹೇಳಿದ್ದಾರೆ.

ಹಾಲು ಹೆಪ್ಪು ಹಾಕುವಾಗ ಬಾಳೆ ಎಲೆಯ ಸಣ್ಣ ಚೂರನ್ನು ಅದಕ್ಕೆ ಹಾಕುವುದರಿಂದ ಗಟ್ಟಿ ಮತ್ತು ರುಚಿಕರವಾದ ಮೊಸರು ಸಿಗುವುದು. ಇದು ಹಾಲನ್ನು ಚೆನ್ನಾಗಿ ಹೆಪ್ಪುಗಟ್ಟಿಸಲು ಮತ್ತು ಮೊಸರಿಗೆ ವಿಶಿಷ್ಟ ಸುವಾಸನೆ ನೀಡುವುದು, ಬಾಳೆ ಎಲೆಯಲ್ಲಿನ ಅಂಶಗಳು ಹಾಲನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತವೆ.

ಬಿಸಿಲಿನಿಂದ ಬೇಗನೆ ಸುಸ್ತಾಗುತ್ತಿದ್ದೀರಾ ? ಈ ಸರಳ ಟಿಪ್ಸ್ ಫಾಲೋ ಮಾಡಿ

 

TAGGED:If you add a leaf slice to thisthe yogurt will thicken!
Share This Article
Facebook Twitter Copy Link Print
Previous Article ಬಿಸಿಲಿನಿಂದ ಬೇಗನೆ ಸುಸ್ತಾಗುತ್ತಿದ್ದೀರಾ ? ಈ ಸರಳ ಟಿಪ್ಸ್ ಫಾಲೋ ಮಾಡಿ
Next Article ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?ಹೊಸ ಚರ್ಚೆ

Popular Posts

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

You Might Also Like

ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?