newsics.com
ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದಗೆ ಸೋಲಾಗಿದ್ದು, ಆಡಳಿತಾರೂಢ ಎನ್‌ಡಿಎ ಸರ್ಕಾರ ಅಗತ್ಯ ಮತ ಕ್ರೋಢೀಕರಿಸುವಲ್ಲಿ ವಿಫಲವಾಗಿದೆ.
ಶುಕ್ರವಾರ) ಲೋಕಸಭೆಯಲ್ಲಿ ಪ್ರಮುಖ ಮೂರು ಮಸೂದೆಗಳನ್ನು ಮತದಾನಕ್ಕೆ ಹಾಕಿದಾಗ, ಮಸೂದೆ ಪರ 298 ಮತಗಳು ಮತ್ತು ಮಸೂದೆ ವಿರುದ್ಧ 230 ಮತಗಳು ಲಭಿಸಿದವು. ಒಟ್ಟು 528 ಮತಗಳು ಚಲಾವಣೆಯಾಗಿದ್ದು, ಕೇಂದ್ರ ಸರ್ಕಾರ ಮಸೂದೆ ಅಂಗೀಕಾರಕ್ಕೆ ಅಗತ್ಯವಾಗಿದ್ದ ಮೂರನೇ ಎರಡು ಭಾಗದಷ್ಟು ಮತಗಳನ್ನು ಪಡೆಯಲು ವಿಫಲವಾಗಿದೆ.
ಲೋಕಸಭೆ ಇಂದು ಹಾಜರಿದ್ದ ಸದಸ್ಯರ ಪೈಕಿ ಈ ಮಹತ್ವದ ಮಸೂದೆಗಳು ಪಾಸ್ ಆಗಲು 326 ಮತಗಳ ಅವಶ್ಯಕತೆ ಇತ್ತು. ಆದರೆ ಕೇಂದ್ರ ಸರ್ಕಾರ ಈ ಪ್ರಮಾಣದ ಬೆಂಬಲ ಪಡೆಯುವಲ್ಲಿ ವಿಫಲವಾಗಿವೆ.
15 ಬ್ಯಾಂಕುಗಳಿಂದ ಮಾರ್ಚ್ 31ರವರೆಗೆ ಚಿನ್ನ, ಬೆಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರದ ಅನುಮತಿ ಸರ್ಕಾರದಿಂದ ಅನುಮತಿ