Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ನೆನಪು > Reminiscences of Asha Bhosle ಹಾಡು ಹಳೆಯದಾದರೇನು… ‘ಆಶಾ’ಭಾವ ನವನವೀನ…
ಅನಾವರಣದೇಶನೆನಪುಪ್ರಮುಖಮನರಂಜನೆ

Reminiscences of Asha Bhosle ಹಾಡು ಹಳೆಯದಾದರೇನು… ‘ಆಶಾ’ಭಾವ ನವನವೀನ…

Share
4 Min Read
SHARE

newsics.com

ಆಕೆ ಬದುಕಿನ ಕಾಲದಲ್ಲಿ ಎದುರಿಸಿದ ನೋವಿಗೆ ಬೇರಾರೇ ಆಗಿದ್ದರೂ ಹಾಡು ಸಾಯಲಿ ಆರಾಮಾಗಿ ಬದುಕಿದ್ದರೆ ಸಾಕೆಂದು ದನಿ ನಿಲ್ಲಿಸಿ ಬಿಡುತ್ತಿದ್ದರು.
ಮನೆಯಲ್ಲೇ ಮೊದಲ ಶತ್ರು ಎಂಬಂತೆ ಆಕೆ ಬೆಳೆದದ್ದೇ ದೊಡ್ಡ ಸಂಗೀತದ ಆಲದ ಮರದ ಕೆಳಗೆ. ಆದರೆ ಕ್ರಮೇಣ ದನಿಯಲ್ಲಿ ಏರಿಳಿತ ಮತ್ತು ಆ ಮಾದಕತೆ ಅದ್ಯಾವ ಮಟ್ಟಕ್ಕೆ ಆಕೆಯನ್ನು ಕರೆದೊಯ್ಯಿತೆಂದರೆ ಒಂದು ಸಮಯಕ್ಕೆ ತಾನು ಬದುಕಬೇಕೆಂದರೆ ಹಾಡು ಮಾತ್ರ ತನ್ನನ್ನು ಬದುಕಿಸಬಲ್ಲದು ಎಂದು ನಿರ್ಧರಿಸಿಬಿಟ್ಟಳು.

ಮತ್ತೆ ಆಕೆ ತಿರುಗಿ ನೋಡಲಿಲ್ಲ…
ಹಳೆಯ ಹಾಡುಗಳು ಬಿಡಿ –
ಅವು ಶತಮಾನದ ಹಿಟ್ಸ್ ಎಂಬ ಲಿಸ್ಟ್ ಸೇರಿದ ನಂತರವೂ, “ಜರಾ ಸಾ ಜೂಮ್ ಲೂ ಮೈ” – ಎಂದು ಹಾಡದಿದ್ದರೆ ನೆನಪಿರಲಿ ಕಾಜೋಲ್‌ಗೊಂದು ಬ್ರೆಕ್ ಆ ಪರಿಯಲ್ಲಿ ಸಿಗುತ್ತಲೇ ಇರಲಿಲ್ಲ. ಅಷ್ಟ್ಯಾಕೆ
“ಯಾಹಿ ರೇ .. ಯಾಹಿ ರೇ .. ರಂಗಿಲಾರೇ “ ( ರಂಗಿಲಾ ) ಎನ್ನುತ್ತಾ, ಆಗಿನ ಕಾಲಕ್ಕೆ ಮೈಗಿಂತ ಹೆಚ್ಚು ಎದೆ ಕುಣಿಸಿ ಮತ್ತೇರಿಸಿ ಕುಣಿದ ಹಾಡನ್ನು ಉರ್ಮಿಳಾ ಮಾತೊಂಡ್ಕರ್ ಗಾಗಿ ಇನ್ಯಾರಾದರೂ ಹಾಡುವುದು ಸಾಧ್ಯವಿತ್ತೆ. ಅದರಲ್ಲೇ ಇನ್ನೊಂದು ಹಾಡು ಕೈಗೆತ್ತಿಕೊಂಡು ಬಿಟ್ಟ ಹಾಡು ಅದ್ಯಾವ ಪರಿ ಮಾದಕತೆ ಎಂದರೆ ಆ ಲಿರಿಕ್ಸ್ ಅನುಭವಿಸಿದವರಿಗೇ ಗೊತ್ತು.
ತನಹಾ ತನಹಾ.. ( ಜಾಕಿ ಶ್ರಾಫ್ ಜೊತೆಗಿನ ಆ ಸೆಕ್ಸಿ ಹಾಡು ಇನ್ಯಾರ ದನಿಯಲ್ಲಾದರೂ ಊಹಿಸಲು ಸಾಧ್ಯವಾದರೆ ಹೇಳಿ )
ಕಿಸಿಸೇ ಪ್ಯಾರ ಲೇಲೋ- ಕಿಸಿಕೋ ಪ್ಯಾರ ದೇದೋ – ಆಕೆಯ ಬದುಕಿನಲ್ಯಾವತ್ತೂ ಇದು ಮಾತ್ರ ಆಗಲೇ ಇಲ್ಲ. ಆಕೆ ಕೊಟ್ಟಿದ್ದಷ್ಟೆ ಬಂತು.
ಜವಾನಿ ಜಾನೆ ಮನ್.. ( ನಮಕ್ ಹಲಾಲ್) ಕೇಳುವವರ ಜವಾನಿ ಎದ್ದು ಬರುವಂತೆ ಹಾಡಿದ್ದರೆ,
ಯೆ ಮೆರಾ ದಿನ್ ಯಾರ ಕಾ ದಿವಾನಾ ( ಡಾನ್) ಅರ್ಧ ಚಿತ್ರವನ್ನೇ ಆರ್ಥಿಕವಾಗಿ ಗೆಲ್ಲಿಸಿದ ದನಿ ಅದು.
ಆದರೆ ಇವೆಲ್ಲದ ಜತೆ ಜತೆಗೆ ಆಕೆಯ ಜೀವನ ಪೂರ್ತಿ ಸಾಲು ಸಾಲಾಗಿ ದುರಂತಗಳೇ ಘಟಿಸುತ್ತಲೇ ಇದ್ದುವಲ್ಲ. ಆ ನೋವು.. ಹತಾಶೆ.. ಇನ್ನೇನಾಗುವುದೇ ಇಲ್ಲ ಈ ಬದುಕಿನಲ್ಲಿ ಎಂದೆಲ್ಲಾ ಅನ್ನಿಸಿದಾಗ, ಆದರ ಅಡಿಯಿಂದ ಇದ್ದ ಎಲ್ಲ ಕಸುವನ್ನು ಹಾಕಿ ಹಾಡಿ ಹಾಡಿ ಹನ್ನೆರಡು ಸಾವಿರ ಮೈಲಿಗಲ್ಲು ನೆಟ್ಟ ಹಾಡುಗಾರ್ತಿ ಬದುಕಿದ್ದಾಗಲೇ ಮನೆ ಮಕ್ಕಳು ಗಂಡ ಎಲ್ಲವನ್ನೂ ಎಲ್ಲ ಕಳೆದುಕೊಳ್ಳುತ್ತಲೇ, ಸಾವನ್ನೂ ನೋಡುತ್ತಲೇ ಹಾಡಿದ ಹಾಡುಗಾರ್ತಿ – ಬಹುಶ: ಇನ್ಯಾರೂ ಅಲ್ಲ ಮತ್ತೊಬ್ಬರು ಇಲ್ಲವೇ ಇಲ್ಲ. ಈ ಯರಾ ಮುಗಿಯಿತು. ಇನ್ನೊಬ್ಬಾಕೆ ಬರಲಾರರು.
ಕೆಸೆಟ್ ಕಾಲದಲ್ಲಿ ನನ್ನ ಹತ್ತಿರ ಇದ್ದ ಐನೂರಕ್ಕೂ ಹೆಚ್ಚಿನ ಕೆಸೆಟ್ಗಳಲ್ಲಿ ಅರ್ಧಕ್ಕೂ ಹೆಚ್ಚು ಹಾಡುಗಳ ಇದೇ ದನಿಯವಾಗಿದ್ದವು.
ತೀರ ಇತ್ತಿಚೆಗೆ ಕನ್ನಡ ಅದ್ಭುತ ರೋಮಾಂಟಿಕ್ ಸಿನೇಮಾ ಎಂದೇ ಹೆಸರು ಮಾಡಿದ್ದ “ ಮುಂಗಾರು ಮಳೆ ೨ “ ರಲ್ಲೂ “ಹೇಳದೆ ಕಾರಣ “ ಎನ್ನುವ ಹಾಡಿಗೂ ದನಿ ಆಗಿ ಬಿಟ್ಟರಲ್ಲ.. ಊಹಿಸಲಸಾಧ್ಯವದು.. ಎಷ್ಟು ನಿಧಾನ ಹಾಡಿಗೆ ಆಶಾ ಹಾಡುತ್ತಾರೆಂದರೆ ..? ಹಿಂದೊಮ್ಮೆ ಕನ್ನಡದ ರಾಜ್ ಅಣ್ಣಾವ್ರು ಜೊತೆಯಲ್ಲೂ ಹಾಡಿದ್ದರೆಂದು ಕೇಳಿದ್ದೇನೆ – ಹಾಡು ನೆನಪಿಲ್ಲ.
ಇನ್ನು ಹಿಂದಿ ರಂಗವನ್ನೇ ಅದುರಿಸಿದ್ದ “ದಮ್ಮ ಮಾರೋ ದಮ್” – ವಿದೇಶದಲ್ಲೂ ಹುಚ್ಚು ಹಿಡಿಸಿದ ಗಾಯನವಾದರೆ ಬದುಕಿನುದ್ದಕ್ಕೂ ಯಾವ ದಮ್ಮೂ ಅವರ ನೆಮ್ಮದಿಗೆ ಕಾರಣವಾಗದೇ ಇರುವುದೇ ದುರಂತ. ಸಿನೇಮಾ ಮಾತ್ರವಲ್ಲ ಭಕ್ತಿ ಗೀತೆ, ಅಭಂಗ, ಜನಪದ, ಕವ್ವಾಲಿ, ಲಾವಣಿ ಸೇರಿದಂತೆ ಪಾಪ್ ವರೆಗೂ ದನಿ ನೀಡಿ ಗೆದ್ದ ದೇವವಾಣಿ ಆಕೆಯದ್ದು.
ಪ್ರೀತಿಸಿದ ತಪ್ಪಿಗೆ ಮದುವೆಯಾದದ್ದು ಗಣಪತರಾವ್ ಭೋಸಲೆ ಯನ್ನು. ಆದರೆ ಅವನಿಂದ ಮೂರು ಮಕ್ಕಳು ಬಿಟ್ಟರೆ ಬೇರೇನೂ ದಕ್ಕದೆ ಹೋಯಿತು. ಮೂರನೆಯ ಮಗು ಹೊಟ್ಟೆಯಲ್ಲಿದ್ದಾಗಲೇ ಮನೆ ಬಿಟ್ಟವಳ ಬಳಿ ಇದ್ದಿದ್ದು ದೇವ ವಾಣಿ – ಅನಾಹುತಕಾರಿಯಾಗಿ ಹಾಡಬಲ್ಲ ಆದಮ್ಯ ಕಂಠ ಸಿರಿ ಮಾತ್ರ. ಹಾಡು ಹಾಡುತ್ತಲೇ ಮತ್ತೊಮ್ಮೆ ಸಂಸಾರಕ್ಕೆ ಕುದುರಿಕೊಂಡದ್ದು ಆರ್.ಡಿ.ಬರ್ಮನ್ ಜೊತೆ. ಆದರೆ ಅದೂ ಹದಿನಾಲ್ಕೇ ವರ್ಷಕ್ಕೆ ಆಕೆಯನ್ನು ವನವಾಸಕ್ಕೆ ತಳ್ಳಿದರೆ ಆಗಲೂ ಕಾಲೂರಿ ನಿಂತದ್ದ ಹಾಡುತ್ತಲೇ. ಅಲ್ಲಿಗೆ ಇನ್ನು ತನ್ನ ಬದುಕಿನಲ್ಲಿ ಪ್ರೀತಿ ಪ್ರೇಮ ಸಂಸಾರ ಎಲ್ಲ ಸತ್ತು ಹೋಯಿತು ಎಂದು ನಿರ್ಧರಿಸಿಬಿಟ್ಟವಳು ಕೇವಲ ಆತುಕೊಂಡದ್ದು ದನಿಗೆ.. ಅದರ ಶಾರೀರಕ್ಕೆ.. ಶರೀರ ಮಾತ್ರ ಆಗೀಗ ಕೈ ಕೊಡುತ್ತಲೇ ಇತ್ತು.
ಅದರಲ್ಲೂ ಅವರ ಕೊನೆಗಾಲದಲ್ಲಿ ಉಳಿದದ್ದು ಅವರ ಅದೇ ಕೊನೆಯ ಮಗ ಮಾತ್ರ.
ಮಗಳು ಆತ್ಮಹತ್ಯೆ ಮಾಡಿಕೊಂಡು ಇನ್ನಿಷ್ಟು ನೋವು ನೀಡಿದರೆ, ಮಗ ಕ್ಯಾನ್ಸರ್ ಗೆ ಬಲಿಯಾದ.
ಕೊನೆಗೂ ನಮಗೆ ಉಳಿಸಿದ್ದು ಮಾತ್ರ ಅದ ದನಿ … “ಪಿಯಾ ತು ಅಬ್ ತೋ ಆಜಾ.. “
ಆದರೆ ಯಾವತ್ತೂ ಯಾವ ಗಂಡಸೂ ಆ ಸ್ಥಾನವನ್ನು ತುಂಬಲೇ ಇಲ್ಲ. ಯಾವನೂ ಬರಲೇ ಇಲ್ಲ. ದನಿಯಲ್ಲಿ ಮಾತ್ರ ಆ ತೇವರೂ ಯಾವತ್ತೂ ಕಡಿಮೆಯಾಗಲೇ ಇಲ್ಲ.
ಈಗಲೂ ಆಗೀಗ ನೆನಪಾಗುತ್ತಲೇ ಇರುತ್ತದೆ..
“ ಆವೋ ನ ಗಲೆ ಲಗ ಜಾವೋ ನಾ “ ಉಹೂಂ – ಅದೊಂದು ಮಾತ್ರ ಯಾರೂ ಮಾಡಲೇ ಇಲ್ಲ.
ಎಲ್ಲರ ಮನ ನೆಮ್ಮದಿಗೆ ದನಿ ನೀಡಿದ ಕಠ ಸಿರಿಯ ಬದುಕಿಗೆ ಒಂದು ನೆಮ್ಮದಿ ದಕ್ಕಲೇ ಇಲ್ಲವಲ್ಲ. ಎಲ್ಲರಿಗೂ ಪ್ರೀತಿ ಹಂಚಿದರೂ ಆಕೆಗೆ ಅದು ಮರೀಚಿಕೆಯಾದದ್ದು ಮಾತ್ರ ವಿಪರ್ಯಾಸ.

ಕೃಪೆ: ಫೇಸ್‌ಬುಕ್

ಎಂಟು ದಶಕಗಳ ಸಾಧನೆ, ಸಾವಿರಾರು ಹಾಡುಗಳು : ಆಶಾ ಭೋಸ್ಲೆ ಗಳಿಸಿದ ಒಟ್ಟು ಆಸ್ತಿ ಎಷ್ಟು?

 

TAGGED:Reminiscences of Asha BhosleThe song is old... The 'Asha' feeling is new...
Share This Article
Facebook Twitter Copy Link Print
Previous Article ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಹರಿದ ಕಾರು; 7 ವರ್ಷದ ಬಾಲಕಿ ಸಾವು, 9 ಜನ ಗಂಭೀರ
Next Article 24 ತಾಸಲ್ಲಿ ಹಾರ್ಮುಜ್‌ನಿಂದ 20 ಹಡಗು ಎಸ್ಕೇಪ್: ಟ್ರಂಪ್‌ಗೆ ರಾಜತಾಂತ್ರಿಕ ಹಿನ್ನಡೆ

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?