newsics.com
ಲತಾ ಮಂಗೇಶ್ಕರ್ ಅವರ ತಂಗಿಯಾದ ಆಶಾ ಭೋಸ್ಲೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಎಂಟು ದಶಕಗಳಷ್ಟು ಸುದೀರ್ಘ ಕಾಲ ಗಾಯಕಿಯಾಗಿದ್ದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ದಶಕಗಳಿಂದ ಉದ್ಯಮದ ಮೂಲಕ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಯನ್ನು ಸಹ ಬಿಟ್ಟು ಹೋಗಿದ್ದಾರೆ.
ಆಶಾ ಭೋಸ್ಲೆ ಅವರು ಗಾಯನದ ಜೊತೆಗೆ ಬ್ಯುಸಿನೆಸ್, ಹೂಡಿಕೆ ವ್ಯವಹಾರಗಳನ್ನೂ ಮಾಡಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಆಶಾ ಭೋಸ್ಲೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಎಂಟು ದಶಕಗಳ ಕಾಲ ಗಾಯಕಿಯಾಗಿದ್ದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದು 12,000ಕ್ಕೂ ಹೆಚ್ಚು ಹಾಡುಗಳು. ಶಾಸ್ತ್ರೀಯ ಸಂಗೀತ, ಘಜಲ್, ಕ್ಯಾಬರೆ, ಪಾಪ್ ಹೀಗೆ ವಿವಿಧ ಪ್ರಾಕಾರಗಳ ಹಾಡುಗಳು ಅವರ ಕಂಠದಿಂದ ಬಂದಿವೆ. 2011ರಲ್ಲಿ ಅವರಿಗೆ ಗಿನ್ನೆಸ್ ದಾಖಲೆಯ ಗೌರವವೂ ಸಿಕ್ಕಿತು.
ಗಾಯಕಿ ಆಶಾ ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಅವರ ನಿಧನರಾದ ಸಮಯದಲ್ಲಿ ಅಂದಾಜು ನಿವ್ವಳ ಮೌಲ್ಯವು 200-250 ಕೋಟಿ ರೂ. ದಾಟಿದೆ ಎಂದು ವರದಿಯಾಗಿದೆ. ಅವರು ತಮ್ಮ ಕಾಲದ ಅತ್ಯಂತ ಶ್ರೀಮಂತ ಗಾಯಕಿಯರಲ್ಲಿ ಒಬ್ಬರು ಎಂದು ಪ್ರಸಿದ್ಧಿರಾಗಿದ್ದಾರೆ.
ಆಶಾ ಭೋಸ್ಲೆ ಅವರು ಮುಂಬೈ, ಪುಣೆ ನಗರಗಳಲ್ಲಿ ಮನೆ ಇತ್ಯಾದಿ ಆಸ್ತಿಗಳನ್ನು ಹೊಂದಿದ್ದಾರೆ. ಅವರುಗಳ ಮೌಲ್ಯ ಸುಮಾರು 80-100 ಕೋಟಿ ರೂ ಎಂದು ಹೇಳಲಾಗುತ್ತಿದೆ.
ವರದಿಗಳಲ್ಲಿ ನಿಖರವಾದ ಅಂಕಿಅಂಶಗಳು ಬದಲಾಗುತ್ತಿದ್ದರೂ, ಅವರ ಸಂಪತ್ತು ಬಹು ಆದಾಯ ಮೂಲಗಳಲ್ಲಿ ಸಂಗ್ರಹವಾಗಿದ್ದು, ಹಿನ್ನಲೆ ಗಾಯನವನ್ನು ಮೀರಿದೆ ಎಂದು ಹೇಳಲಾಗುತ್ತಿದೆ. ಆಶಾ ಭೋಂಸ್ಲೆ ಅವರ ಸಂಪತ್ತಿನ ಬಹುಪಾಲು ಭಾಗವು ಭಾರತೀಯ ಚಲನಚಿತ್ರೋದ್ಯಮದಲ್ಲಿನ ಅವರ ಕೆಲಸದಿಂದ ಬಂದಿದೆ. 1950ರಿಂದ 2000ರ ದಶಕದ ಆರಂಭದವರೆಗೆ ಬಾಲಿವುಡ್‌ನ ಪ್ರತಿಯೊಬ್ಬ ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕರ ಮೊದಲ ಆಯ್ಕೆ ಆಶಾ ಅವರೇ ಆಗಿದ್ದರು. ಈ ಸುದೀರ್ಘ ವೃತ್ತಿಜೀವನವು ಅವರಿಗೆ ಅಪಾರ ಗೌರವದ ಜೊತೆಗೆ ಗಣನೀಯ ಸಂಪತ್ತನ್ನು ತಂದುಕೊಟ್ಟಿದೆ.
https://www.newsics.com/2026/04/14/nazir-ahmed-resigns-from-the-post-of-cms-political-secretary/