ನಟ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಮಗಳ ಹೇರ್‌ಕ್ಲಿಪ್ ಹಾಕಿಕೊಂಡು ‘ಗರ್ಲ್ ಡ್ಯಾಡ್’ ಸೆಲ್ಫಿ ಶೇರ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಳೆದ ವರ್ಷ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ದಂಪತಿಗೆ ಸಾರಾಯಾ ಎಂಬ ಹೆಣ್ಣು ಮಗು ಜನಿಸಿತ್ತು. ಇತ್ತೀಚೆಗೆ ಈ ಜೋಡಿ NMACC ವಾರ್ಷಿಕೋತ್ಸವದಲ್ಲಿ ಮಿಂಚಿದ್ದರು. ನಟ ಸಿದ್ಧಾರ್ಥ್ ಮಲ್ಹೋತ್ರಾ ಹೊಸ ಅಪ್ಪನಾಗಿರುವ ಖುಷಿಯ ಕ್ಷಣಗಳನ್ನು ಹಂಚಿಕೊಂಡು, ಅಭಿಮಾನಿಗಳ ಮನಗೆದ್ದಿದ್ದಾರೆ.
ಸಿದ್ಧಾರ್ಥ್ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದ್ದು, ಅದರಲ್ಲಿ ಅವರು ‘ಗರ್ಲ್ ಡ್ಯಾಡ್’ ಎನರ್ಜಿಯನ್ನು ತೋರಿಸಿದ್ದಾರೆ. ಸಿದ್ಧಾರ್ಥ್ ತಮ್ಮ ತಲೆಗೆ ಮಗಳ ಮುದ್ದಾದ ಹೇರ್‌ಕ್ಲಿಪ್ ಒಂದನ್ನು ಹಾಕಿಕೊಂಡು ಸೆಲ್ಫಿ ಶೇರ್ ಮಾಡಿದ್ದಾರೆ. “ನಾನೊಬ್ಬ ಹೆಣ್ಣು ಮಗಳ ಅಪ್ಪ ಅಂತಾ ಹೇಳದೆ ಹೇಳುವುದು ಹೇಗೆ?” ಎಂದು ಈ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಿದ್ಧಾರ್ಥ್ ಅವರ ಈ ಸಿಂಪಲ್ ನಡೆಗೆ ಮನಸೋತಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ತಮ್ಮ ಮುದ್ದಾದ ಮಗಳಿಗೆ ‘ಸಾರಾಯಾ’ ಎಂದು ಹೆಸರಿಟ್ಟಿದ್ದಾರೆ.
https://www.instagram.com/p/DXJVW5tDdA2/?igsh=MTloZGFkM3Q5dDYwaQ==
ಯೋಗೇಶ್ ಗೌಡ ಕೊಲೆ ಕೇಸ್: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ತೀರ್ಪು ಕೊಟ್ಟ ಕೋರ್ಟ್