Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮೊದಲ ಪತಿಯಿಂದ ಅನುಭವಿಸಿದ ಯಾತನೆ; ಆಶಾ ಭೋಸ್ಲೆ ಅವರ ಕರುಳು ಹಿಂಡುವ ಕಥೆ!
ಪ್ರಮುಖಮನರಂಜನೆ

ಮೊದಲ ಪತಿಯಿಂದ ಅನುಭವಿಸಿದ ಯಾತನೆ; ಆಶಾ ಭೋಸ್ಲೆ ಅವರ ಕರುಳು ಹಿಂಡುವ ಕಥೆ!

Share
2 Min Read
SHARE

ಆಶಾ ಭೋಸ್ಲೆ ಇದೀಗ ನಮ್ಮನ್ನಗಲಿದ್ದಾರೆ. 92 ವರ್ಷ ವಯಸ್ಸಾಗಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆಶಾ ಅವರ ಹಾಡುಗಳೆಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ, ಆದರೆ ಅವರ ಖಾಸಗಿ ಬದುಕು  ಮತ್ತು ಕುಟುಂಬದ ಕಥೆ ಕೇಳಿದರೆ ಯಾರ ಕಣ್ಣಲ್ಲಾದರೂ ನೀರು ಬರುವುದು ಗ್ಯಾರಂಟಿ.

ಬಹಳ ಚಿಕ್ಕ ವಯಸ್ಸಿನಲ್ಲೇ ಆಶಾ ಅವರು ತಮ್ಮ ಕುಟುಂಬದ ವಿರೋಧದ ನಡುವೆಯೂ ಗಣಪತ್‌ರಾವ್ ಭೋಸ್ಲೆ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಆ ಮದುವೆ ಆಶಾ ಅವರಿಗೆ ಸುಖ ಕೊಡಲಿಲ್ಲ. ಮೂರು ಮಕ್ಕಳಾದ ಬಳಿಕ, ಪತಿಯಿಂದ ತೀವ್ರ ಕಿರುಕುಳ ಅನುಭವಿಸಿದ ಆಶಾ, ಗರ್ಭಿಣಿಯಾಗಿದ್ದಾಗಲೇ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ವಾಪಸ್ಸಾಗಬೇಕಾಯಿತು. ಇಷ್ಟೆಲ್ಲಾ ಕಷ್ಟಗಳಿದ್ದರೂ ಅವರು ಸಂಗೀತವನ್ನು ಮಾತ್ರ ಯಾವತ್ತೂ ಬಿಡಲಿಲ್ಲ.

ಆರ್.ಡಿ. ಬರ್ಮನ್ ಜೊತೆಗಿನ ಪ್ರೇಮ ಮತ್ತು ವಿರಹ

ಮೊದಲ ಪತಿಯಿಂದ ದೂರವಾದ ಬಹಳ ವರ್ಷಗಳ ನಂತರ, ಖ್ಯಾತ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ (ಪಂಚಮ್ ದಾ) ಅವರ ಪ್ರೀತಿಗೆ ಆಶಾ ಒಲಿಯುತ್ತಾರೆ. 1980ರಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ. ಸಂಗೀತ ಲೋಕದ ಈ ಜೋಡಿ ಅಪಾರ ಹಿಟ್ ಹಾಡುಗಳನ್ನು ನೀಡಿತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. 1994ರಲ್ಲಿ ಆರ್.ಡಿ. ಬರ್ಮನ್ ಅವರು ಹೃದಯಾಘಾತದಿಂದ ನಿಧನರಾದಾಗ, ಆಶಾ ಭೋಸ್ಲೆ ಸಂಪೂರ್ಣವಾಗಿ ಒಂಟಿಯಾಗಿ ಬಿಟ್ಟರು.

ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಆಶಾಗೆ ಮತ್ತೊಂದು ಭೀಕರ ಆಘಾತ ಕಾದಿತ್ತು. ಅವರಿಗೆ ಹೇಮಂತ್, ವರ್ಷಾ ಮತ್ತು ಆನಂದ್ ಎಂಬ ಮೂವರು ಮಕ್ಕಳಿದ್ದರು. ಆದರೆ, 2012ರಲ್ಲಿ ಮಗಳು ವರ್ಷಾ ಭೋಸ್ಲೆ ತಮ್ಮದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದರು. ಮಗಳ ಸಾವಿನ ಭೀಕರ ನೋವಿನಿಂದ ಆಶಾ ಹೊರಬರುವ ಮುನ್ನವೇ, 2015ರಲ್ಲಿ ಕ್ಯಾನ್ಸರ್‌ನಿಂದಾಗಿ ಅವರ ಹಿರಿಯ ಮಗ ಹೇಮಂತ್ ಭೋಸ್ಲೆ ಕೂಡ ಸಾವನ್ನಪ್ಪಿದರು.

ತಮ್ಮ ಕಣ್ಣೆದುರೇ ಮಗಳು ಮತ್ತು ಮಗನನ್ನು ಕಳೆದುಕೊಂಡ ಆ ತಾಯಿಯ ಕರುಳು ಎಷ್ಟು ಬೆಂದು ಹೋಗಿರಬೇಡ ಯೋಚಿಸಿ. ಕೇವಲ ಮಗ ಆನಂದ್ ಭೋಸ್ಲೆ ಮಾತ್ರ ಅವರ ಜೊತೆಗಿದ್ದರು. ಇಡೀ ಜಗತ್ತಿಗೆ ತನ್ನ ಹಾಡುಗಳ ಮೂಲಕ ಖುಷಿ ಹಂಚಿದ ಆಶಾ, ತಮ್ಮ ನಿಜ ಜೀವನದಲ್ಲಿ ಮಾತ್ರ ನೋವು, ಸಾವು ಮತ್ತು ಒಂಟಿತನವನ್ನೇ ಅಪ್ಪಿಕೊಂಡು ಬದುಕು ದೂಡುತ್ತಿದ್ದರು.

ಎಷ್ಟೇ ನೋವಿದ್ದರೂ ಕೊನೆಗಾಲದವರೆಗೂ ಸಂಗೀತದ ಮೇಲಿನ ಪ್ರೀತಿಯನ್ನು ಮಾತ್ರ ಅವರು ಎಂದಿಗೂ ಕಳೆದುಕೊಳ್ಳಲಿಲ್ಲ. ಇತ್ತೀಚೆಗೆ ಆಸ್ಪತ್ರೆ ಸೇರಿದಾಗ ಅವರ ಮೊಮ್ಮಗಳು ಝನಾಯ್ ಭೋಸ್ಲೆ ಹಾಗೂ ಮಗ ಆನಂದ್ ಭೋಸ್ಲೆ ಜೊತೆಗಿದ್ದರು. ಇಂದು 92ನೇ ವಯಸ್ಸಿನಲ್ಲಿ ಆಶಾ ಭೋಸ್ಲೆ ಕೊನೆಯುಸಿರೆಳೆದಿದ್ದು, ತಮ್ಮ ಪ್ರೀತಿಯ ಪಂಚಮ್ ದಾ ಹಾಗೂ ಮಕ್ಕಳ ಬಳಿ ಶಾಶ್ವತವಾಗಿ ತೆರಳಿದ್ದಾರೆ.

ಆಶಾ ಅವರ ನಿಧನ ಸುದ್ದಿ ಕೇಳಿ ಇಡೀ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.

 

ಲೆಬನಾನ್ ಮೇಲೆ ಮತ್ತೆ ಭೀಕರ ದಾಳಿ ನಡೆಸಿದ ಇಸ್ರೇಲ್

TAGGED:Asha Bhosle's gut-wrenching story!
Share This Article
Facebook Twitter Copy Link Print
Previous Article ಲೆಬನಾನ್ ಮೇಲೆ ಮತ್ತೆ ಭೀಕರ ದಾಳಿ ನಡೆಸಿದ ಇಸ್ರೇಲ್
Next Article ಲವರ್ ಗಾಗಿ 7 ಗಂಟೆಗಳ ಕಾಲ ಟವರ್ ಹತ್ತಿದ ಭೂಪ; ಕೆಳಗಿಳಿಸಲು ಎಂಎಲ್‌ಎ ಎಂಟ್ರಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?