https://youtube.com/shorts/w77Qj39UtDA?si=G-t7V0TrkmzYuWQ5
newsics.com
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಯುದ್ಧ ಕೊನೆಗೂಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಇರಾನ್ ಜೊತೆ ನಡೆಯುತ್ತಿರುವ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವವನ್ನ ಉದ್ದೇಶಿಸಿ ಮಾತನಾಡಿದ್ದು, ಮಿಲಿಟರಿ ಆಕ್ರಮಣವು ಇನ್ನೂ ಎರಡು ಮೂರು ವಾರಗಳಲ್ಲೇ ಕೊನೆಗೊಳ್ಳುತ್ತದೆ ಎಂದಿದ್ದಾರೆ. ಇರಾನ್ ವಿರುದ್ಧ ಪ್ರಬಲ ಶಕ್ತಿಯಾಗಿ ಹೋರಾಡಿದ ಯುಎಸ್ ಮಿಲಿಟರಿಯನ್ನ ಟ್ರಂಪ್ ಕೊಂಡಾಡಿದ್ದಾರೆ.
ಇರಾನ್ ಯುದ್ಧವು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಘೋಷಣೆ ಮಾಡಿದ್ದಾರೆ. ಒಪ್ಪಂದದ ಮಾತುಕತೆಗಳು ನಡೆಯುತ್ತಿವೆ ಮತ್ತು ಅವು ಕಾರ್ಯರೂಪಕ್ಕೆ ಬರದಿದ್ದರೆ, 2-3 ವಾರಗಳಲ್ಲಿ ದೊಡ್ಡ ದಾಳಿ ನಡೆಸುವುದಾಗಿ ಟ್ರಂಪ್ ಹೇಳಿದ್ದಾರೆ.
ಯುದ್ಧ ಮುಂದುವರಿಯುತ್ತದೆ ಎಂದ ಟ್ರಂಪ್, ಇರಾನಿನ ನೌಕಾಪಡೆ ಮತ್ತು ವಾಯುಪಡೆ ಸಂಪೂರ್ಣವಾಗಿ ನಾಶವಾಗಿದೆ ಮತ್ತು ಅಮೆರಿಕದ ಭದ್ರತೆಗಾಗಿ ‘ಆಪರೇಷನ್ ಎಪಿಕ್ ಫ್ಯೂರಿ’ ಯಶಸ್ವಿಯಾಗಿದೆ ಎಂದಿದ್ದಾರೆ. ಟ್ರಂಪ್ ಭಾಷಣ ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ.