https://youtube.com/shorts/b7DblvgZf1A?si=BCR0sxsn8Xzh1cnn
newsics.com
ತುಮಕೂರು : ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜನ್ಮದಿನಾಚರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಭಕ್ತಿಭಾವದ ಕಾರ್ಯಕ್ರಮಗಳು ಜರುಗುತ್ತಿವೆ.
ಈ ಹಿನ್ನೆಲೆಯಲ್ಲಿ ಪೂಜ್ಯ ಗುರುದೇವರ ಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಹೂವಿನ ಸಿಂಗಾರ ಮತ್ತು ದೀಪಾಲಂಕಾರದಿಂದ ಮನಮೋಹಕವಾಗಿ ಸಜ್ಜುಗೊಂಡಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುದೇವರಿಗೆ ನಮನ ಸಲ್ಲಿಸುತ್ತಿದ್ದಾರೆ. ಮಠದ ವಾತಾವರಣವು ಭಕ್ತಿಭಾವದಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಪೂಜ್ಯರ ಸ್ಮರಣೆ ಮತ್ತು ಕೀರ್ತನೆಗಳು ಮೊಳಗುತ್ತಿವೆ.
https://www.newsics.com/2026/04/01/water-charges-to-increase-by-3-in-bengaluru-from-today/