https://youtube.com/shorts/b7DblvgZf1A?si=BCR0sxsn8Xzh1cnn
newsics.com
ದೇಶಾದ್ಯಂತ ಮಹತ್ವದ ಜನಗಣತಿ ಇಂದಿನಿಂದ ಆರಂಭವಾಗಲಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ ನಾಗರಿಕರು ಹೊಸದಾಗಿ ಪರಿಚಯಿಸಲಾದ ‘ಸ್ವಯಂ ಗಣತಿ ಪೋರ್ಟಲ್’ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ವಿವರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ವಯಂ ಗಣತಿಯಲ್ಲಿ ಭಾಗವಹಿಸುವುದು ಹೇಗೆ?
ಸಾರ್ವಜನಿಕರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಬಹುದು:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು https://test.census.gov.in/se/ ಜಾಲತಾಣಕ್ಕೆ ಲಾಗಿನ್ ಆಗಿ.
ನೋಂದಣಿ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP ಬಳಸಿ ಲಾಗಿನ್ ಆಗಿ.
ಐಕಾನ್ ಆಯ್ಕೆ: ಅಲ್ಲಿ ಕಾಣಿಸುವ ‘ಸ್ವಯಂ ಗಣತಿ’ ಐಕಾನ್ ಮೇಲೆ ಕ್ಲಿಕ್ ಮಾಡಿ.
ವಿವರ ಭರ್ತಿ: ಮೊದಲು ಮನೆಯ ಪೂರ್ಣ ವಿಳಾಸ ದಾಖಲಿಸಿ. ನಂತರ ‘Add Member’ ಒತ್ತುವ ಮೂಲಕ ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರು ಮತ್ತು ವಿವರಗಳನ್ನು ಸೇರಿಸಿ.
ಸಲ್ಲಿಕೆ: ಎಲ್ಲ ಮಾಹಿತಿಯನ್ನು ಪರೀಕ್ಷಿಸಿ ಅರ್ಜಿಯನ್ನು ಸಲ್ಲಿಸಿ.
ರೆಫರೆನ್ಸ್ ನಂಬರ್: ಸಲ್ಲಿಕೆಯಾದ ನಂತರ ಸಿಗುವ ‘ರೆಫರೆನ್ಸ್ ನಂಬರ್’ ಅನ್ನು ಬರೆದಿಟ್ಟುಕೊಳ್ಳಿ.
ಯಾವೆಲ್ಲಾ ಮಾಹಿತಿ ಅಗತ್ಯ?
ಮನೆಯ ಸಂಪೂರ್ಣ ವಿಳಾಸ.
ಮನೆಯ ಪ್ರಕಾರ (ವಿಸ್ತೀರ್ಣ, ಅಪಾರ್ಟ್‌ಮೆಂಟ್ ಅಥವಾ ಒಂಟಿ ಮನೆ).
ಕುಟುಂಬದ ಸದಸ್ಯರ ಹೆಸರು, ವಯಸ್ಸು.
ಪ್ರತಿಯೊಬ್ಬರ ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ಇತರೆ ಮಾಹಿತಿ.
ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಜಾರಿಗೆ ತರಲಾದ ಈ ವ್ಯವಸ್ಥೆಯು ಸಮಯ ಉಳಿತಾಯ ಮಾಡುವುದಲ್ಲದೆ, ನಿಖರವಾದ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗಲಿದೆ.