Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾಪಿರೈಟ್ ಉಲ್ಲಂಘನೆ ಆರೋಪ: ನಟ ರಕ್ಷಿತ್ ಶೆಟ್ಟಿಗೆ 25‌ ಲಕ್ಷ ರೂ. ದಂಡ
ಕರ್ನಾಟಕದೇಶಪ್ರಮುಖಮನರಂಜನೆ

ಕಾಪಿರೈಟ್ ಉಲ್ಲಂಘನೆ ಆರೋಪ: ನಟ ರಕ್ಷಿತ್ ಶೆಟ್ಟಿಗೆ 25‌ ಲಕ್ಷ ರೂ. ದಂಡ

Share
1 Min Read
SHARE

https://youtube.com/shorts/b7DblvgZf1A?si=BCR0sxsn8Xzh1cnn

newsics.com

ಬೆಂಗಳೂರು: ಕಾಪಿ ರೈಟ್ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರಿಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ.

‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಅನುಮತಿ ಇಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಗೆ 25 ಲಕ್ಷ ರೂ. ದಂಡ ವಿಧಿಸಿ ದೆಹಲಿ ಹೈಕೋರ್ಟ್ ಆದೇಶಿಸಿದೆ.

ಕಾಪಿರೈಟ್ ಉಲ್ಲಂಘನೆ ಆರೋಪದಡಿ ಎಂ.ಆರ್.ಟಿ. ಮ್ಯೂಸಿಕ್ ದೂರು ದಾಖಲಿಸಿದ್ದು, 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡುಗಳ ಮಾಲೀಕತ್ವ ತಮ್ಮದಾಗಿದೆ ಎಂದು ಸಂಸ್ಥೆ ವಾದಿಸಿತ್ತು. ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಈ ಹಾಡುಗಳನ್ನು ಅನುಮತಿ ಪಡೆಯದೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿತ್ತು.

ವಿಚಾರಣೆಯ ವೇಳೆ ರಕ್ಷಿತ್ ಶೆಟ್ಟಿ ಮತ್ತು ತಂಡ ಸಮರ್ಥನೆಯಾಗಿ ಅನೇಕ ವಾದಗಳನ್ನು ಮಂಡಿಸಿದೆ. ನ್ಯಾಯ ಎಲ್ಲಿದೆ ಹಾಡನ್ನು ಕೇವಲ 7 ಸೆಕೆಂಡ್, ಒಮ್ಮೆ ನಿನ್ನನ್ನು ಹಾಡನ್ನು 31 ಸೆಕೆಂಡ್ ಮಾತ್ರ ಬಳಕೆ ಮಾಡಲಾಗಿದ್ದು, ಇದು ಅತಿ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆ ಆಗುವುದಿಲ್ಲ ಎಂದು ವಾದಿಸಿತ್ತು.

ಈ ವಾದ ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಹಾಡುಗಳ ಬಳಕೆ ಕೇವಲ ಕಾಕತಾಳೀಯವಲ್ಲ. ಸಿನಿಮಾ ಕಥೆಯ ನಿರೂಪಣೆಗೆ ಪೂರಕವಾಗಿ ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮತ್ತು ಹಾಡು ಬಳಕೆ ಹಕ್ಕುಸ್ವಾಮ್ಯ ಅಡಿ ಬರುತ್ತದೆ ಎಂದು ಹೈಕೋರ್ಟ್ ಹೇಳಿದ್ದು, ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆ. ಹಣಕಾಸಿನ ವಿಚಾರದಲ್ಲಿ ಕಾಪಿರೈಟ್ ಉಲ್ಲಂಘಿಸಿದ್ದಕ್ಕಾಗಿ 20 ಲಕ್ಷ ರೂ., ಕೋರ್ಟ್ ಆದೇಶ ಪಾಲನೆ ವಿಳಂಬಕ್ಕೆ 5 ಲಕ್ಷ ರೂ. ಸೇರಿ ಒಟ್ಟು 25 ಲಕ್ಷ ರೂ. ದಂಡ ವಿಧಿಸಲಾಗಿದೆ.

ವೈರಲ್ ಆಗ್ತಿದೆ ಗ್ರೀನ್‌ ಸೆಕ್ಸ್‌! ಏನಿದು ಹೊಸ ಬಗೆ?

ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ ನಲ್ಲಿ ಗ್ಲಾಮರಸ್‌ ಆಗಿ, ಕಾಣಿಸಿಕೊಂಡ ವಾಣಿ ಕಪೂರ್​

TAGGED:Copyright infringement charges: Actor Rakshit Shetty fined Rs. 25 lakh
Share This Article
Facebook Twitter Copy Link Print
Previous Article Gold Rates: ಗ್ರಾಮ್ಗೆ 200 ರೂ ಏರಿದ ಚಿನ್ನದ ಬೆಲೆ; ಇಂದಿನ ದರಪಟ್ಟಿ ಇಲ್ಲಿದೆ
Next Article ಎಲ್ಲೇ ವಾರ್ ಶುರುವಾದ್ರೂ ಕಾಂಡೋಮ್  ಗೆ  ಬೇಡಿಕೆ  ಹೆಚ್ಚಾಗೋದ್ಯಾಕೆ?

Popular Posts

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read

Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು

2 Min Read

CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ

2 Min Read

Election Commission SIR Updates ಕರ್ನಾಟಕದಲ್ಲಿ 52.97 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ

3 Min Read

You Might Also Like

ಕರ್ನಾಟಕ

Mangalore Students News Invention ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ AI ಚಾಲಿತ ಸ್ವಯಂಚಾಲಿತ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ; ಶ್ರೀನಿವಾಸ್ ವಿಶ್ವವಿದ್ಯಾಲಯದ ‘ಶ್ರೀ ವಾಹನ’ ಗಮನ ಸೆಳೆದ ಸಾಧನೆ

2 Min Read
ದೇಶಅನಾವರಣ

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read
ಕರ್ನಾಟಕಪ್ರಮುಖ

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read
ಮನರಂಜನೆ

Ramayana Trailer Launch ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ; ಕಾರಣವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?