newsics.com
ಮುಂಬೈ ಇಂಡಿಯನ್ಸ್ (MI) ನಾಯಕ ಮತ್ತು ಸ್ಟಾರ್ ಆಲ್‌ರೌಂಡರ್ (All-rounder) ಹಾರ್ದಿಕ್ ಪಾಂಡ್ಯ (Hardik Pandya) ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಪಾಂಡ್ಯ ಮೈದಾನದಲ್ಲಿ ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜೊತೆಗೆ ತಮ್ಮ ಐಷಾರಾಮಿ (Luxury) ಜೀವನಶೈಲಿಯ ಮೂಲಕವೂ ಎಲ್ಲರ ಚಿತ್ತ ಕದ್ದಿದ್ದಾರೆ. ಇತ್ತೀಚೆಗೆ, ಹಾರ್ದಿಕ್ ತಮ್ಮ ಗೆಳತಿ ಮಹಿಕಾ ಶರ್ಮಾ (Mahieka Sharma)ಗೆ ದುಬಾರಿ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ (Mercedes-Benz V-Class) ಕಾರ (Car) ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಭಾರತ (India) ದ ಮೊದಲ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರು ಎಂದು ವರದಿಯಾಗಿದೆ.
ಭಾರತದ ಮೊದಲ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರಿನ ಮೌಲ್ಯ ಸುಮಾರು 1.7 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಕಾರನ್ನು ಆಕಾಶದಲ್ಲಿ ಹಾರುವ ವಿಮಾನಕ್ಕೆ ಹೋಲಿಸಲಾಗುತ್ತಿದೆ. ಈ ಕಾರು ವಿಮಾನದ ವೇಗದಲ್ಲಿ ರಸ್ತೆಯಲ್ಲಿ ಚಲಿಸುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಚರ್ಚೆ ನಡೆಸುತ್ತಿದ್ದಾರೆ.
ಅಕ್ಟೋಬರ್ 2025 ರಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದಾಗಿನಿಂದ, ಮಹಿಕಾ ಪ್ರತಿ ಪಂದ್ಯದಲ್ಲೂ ಕ್ರೀಡಾಂಗಣದಲ್ಲಿ ಹಾರ್ದಿಕ್‌ಗೆ ಬೆಂಬಲ ನೀಡುತ್ತಿರುವುದು ಕಂಡುಬಂದಿದೆ. ಭಾರತ ಇತ್ತೀಚೆಗೆ ಗೆದ್ದ ಟಿ20 ವಿಶ್ವಕಪ್ 2026 ರ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರು ಅಹಮದಾಬಾದ್ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು.
ಟಿ20 ವಿಶ್ವಕಪ್ ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಅವರನ್ನು ಹೊಗಳಿದರು. ನಂತರ ಅವರು ಮಹಿಕಾ ತಮ್ಮ ಜೀವನದಲ್ಲಿ ಬಂದಾಗಿನಿಂದ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು. ಇದಾದ ಬಳಿಕ ಮಹಿಕಾ ಮತ್ತು ಹಾರ್ದಿಕ್ ಅವರ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಾರ್ದಿಕ್ ಪಾಂಡ್ಯ ಪ್ರಸ್ತುತ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.