https://youtube.com/shorts/qIu1k1AjcVg?si=asT_CsSQI4v14g8C
newsics.com
ಈ ಡಿಜಿಟಲ್ ಯುಗದಲ್ಲಿ ಜನರು ಸದಾ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಸ್ಕ್ರೀನ್ ಮುಂದೆ ಸಮಯ ಕಳೆಯುತ್ತಿರುವುದು ಸಾಮಾನ್ಯ ಸಂಗತಿ. ಹಾಗಾಗಿ, ಇತ್ತೀಚಿನ ವರ್ಷಗಳಲ್ಲಿ, ಸ್ಕ್ರೀನ್ ಅವಧಿ , ಮನಸ್ಸು ಮತ್ತು ದೇಹದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಶೋಧನೆಗಳು ಮಾಹಿತಿ ಬಹಿರಂಗ ಪಡಿಸಿದೆ.
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಅತಿಯಾದ ‘ಸ್ಕ್ರೀನ್ ಟೈಮ್’ (ಪರದೆಯ ಸಮಯ) ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ. ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ (ACC.26) ಸಮ್ಮೇಳನದಲ್ಲಿ ಮಂಡಿಸಲಾದ ಈ ವರದಿಯು ಡಿಜಿಟಲ್ ವ್ಯಸನದ ಭೀಕರತೆಯನ್ನು ಎತ್ತಿ ತೋರಿಸಿದೆ.
ಕೆಲಸ ಅಥವಾ ವ್ಯಾಸಂಗದ ಹೊರತಾಗಿ ದಿನಕ್ಕೆ 6 ಗಂಟೆಗಿಂತ ಹೆಚ್ಚು ಸಮಯವನ್ನು ಮೊಬೈಲ್, ಟಿವಿ ಅಥವಾ ಗೇಮಿಂಗ್‌ಗಾಗಿ ವ್ಯಯಿಸುವ ಯುವಕರಲ್ಲಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಅತಿಯಾದ ಸ್ಕ್ರೀನ್ ಟೈಮ್ ಹೊಂದಿರುವವರಲ್ಲಿ ಸಿಸ್ಟೊಲಿಕ್ ರಕ್ತದೊತ್ತಡವು ಸರಾಸರಿ 18 mmHg ನಷ್ಟು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ಪತ್ತೆಹಚ್ಚಿದೆ.
ಇಂತಹವರಲ್ಲಿ ‘ಕೆಟ್ಟ’ ಕೊಲೆಸ್ಟ್ರಾಲ್ (LDL) ಮಟ್ಟವು 28 mg/dL ನಷ್ಟು ಹೆಚ್ಚಾಗಿದ್ದು, ಬಾಡಿ ಮಾಸ್ ಇಂಡೆಕ್ಸ್ (BMI) ಕೂಡ ಏರಿಕೆಯಾಗಿರುವುದು ಕಂಡುಬಂದಿದೆ.
ವಿಶೇಷವೆಂದರೆ, ನೀವು ಪ್ರತಿದಿನ ವ್ಯಾಯಾಮ ಮಾಡಿದರೂ ಸಹ, ದೀರ್ಘಕಾಲ ಒಂದೇ ಕಡೆ ಕುಳಿತು ಸ್ಕ್ರೀನ್ ನೋಡುವುದರಿಂದ ಆಗುವ ಹಾನಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
https://www.newsics.com/2026/03/30/you-should-never-keep-a-broom-in-this-direction-of-the-house/