newsics.com
ಮೈಸೂರು: ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಮುಖ್ಯ ರಸ್ತೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಮುಂದಾದ ವೇಳೆ, ಕಾಡಾನೆಗಳು ಜೀಪ್ ಮೇಲೆಯೇ ದಾಳಿ ನಡೆಸಿದ್ದು, ವಾಹನ ಜಖಂಗೊಂಡಿದೆ. ಅದೃಷ್ಟವಶಾತ್ ಜೀಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಹಿಂತಿರುಗಿಸಿದ್ದಾರೆ.
ಏರ್‌ಪೋರ್ಟ್ ರನ್‌ವೇ ಮೇಲೆ ಸಿಗರೇಟ್ ಸೇದಿದ ಗೂಗಲ್ ಟೆಕ್ಕಿ; ಮುಂದೆನಾಯ್ತು?