newsics.com
ಭೀಕರ ತಿರುವು ಪಡೆಯುತ್ತಿರುವ ಇರಾನ್ ಹಾಗೂ ಇಸ್ರೇಲ್-ಅಮೆರಿಕ ಯುದ್ಧವನ್ನ ನಿಲ್ಲಿಸಲು ಹಲವು ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸಲು ಮುಂದಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಎರಡು ರಾಷ್ಟ್ರಗಳ ನಡುವೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿತ್ತು. ಪಾಕಿಸ್ತಾನ ಪ್ರಮುಖ ರಾಜತಾಂತ್ರಿಕ ಯಶಸ್ಸನ್ನು ಸಾಧಿಸಿದೆ. ಇದೀಗ ಪಾಕಿಸ್ತಾನಕ್ಕೆ ಇರಾನ್ ಬಹುಮಾನ ನೀಡಿದೆ.
ಹಾರ್ಮುಜ್ ಜಲಸಂಧಿಯ ಮೂಲಕ 20 ಹಡಗುಗಳು ಹಾದುಹೋಗಲು ಇರಾನ್ ಅನುಮತಿ ನೀಡುವ ಒಪ್ಪಂದಕ್ಕೆ ಪಾಕಿಸ್ತಾನ ತಲುಪಿದೆ. ಇದು ಜಾಗತಿಕ ಇಂಧನ ಬಿಕ್ಕಟ್ಟಿನಲ್ಲಿ ಸ್ವಲ್ಪ ನಿರಾಳತೆ ತರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ಈ ಒಪ್ಪಂದವನ್ನು ಘೋಷಿಸಿದ್ದಾರೆ. ‘ಈ ವ್ಯವಸ್ಥೆಯು ಪ್ರತಿದಿನ ಎರಡು ಹಡಗುಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಇದು ಶಾಂತಿಯ ಸಂಕೇತ ಮತ್ತು ಪ್ರದೇಶಕ್ಕೆ ಸ್ಥಿರತೆ ತರಬಹುದಾದ ರಚನಾತ್ಮಕ ಹೆಜ್ಜೆಯಾಗಿದೆ’ ಎಂದಿದ್ದಾರೆ.
ಈಗ ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಇರಾನ್ 20 ಹಡಗುಗಳಿಗೆ ಅನುಮತಿ ನೀಡಿದೆ. ಇದರಲ್ಲಿ ಪ್ರತಿದಿನ ಎರಡು ಹಡಗುಗಳು ಹಾದುಹೋಗಬಹುದು. ಹಡಗುಗಳು ಹಾದುಹೋಗುವ ಮೊದಲು ತಮ್ಮ ಸರಕು, ಸಿಬ್ಬಂದಿ ಮತ್ತು ಗಮ್ಯಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಹಡಗುಗಳನ್ನು ಚೆಕ್‌ಪಾಯಿಂಟ್‌ನಲ್ಲಿ ಪರಿಶೀಲಿಸುತ್ತದೆ. ಕೆಲವು ಹಡಗುಗಳಿಗೆ ಈ ಸವಲತ್ತಿಗಾಗಿ $2 ಮಿಲಿಯನ್ ವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ.
https://www.newsics.com/2026/03/29/10-crores-deposited-into-the-account-of-a-poor-farmers-wife/