Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಮಹಿಳಾ ಪ್ರಯಾಣಿಕರ ಮುಂದೆ ಕೊಲೆ ರಹಸ್ಯ ಬಿಚ್ಚಿಟ್ಟ ಉಬರ್ ಚಾಲಕ; ವೈರಲ್ ವಿಡಿಯೋ ನೋಡಿ
ವೈರಲ್

ಮಹಿಳಾ ಪ್ರಯಾಣಿಕರ ಮುಂದೆ ಕೊಲೆ ರಹಸ್ಯ ಬಿಚ್ಚಿಟ್ಟ ಉಬರ್ ಚಾಲಕ; ವೈರಲ್ ವಿಡಿಯೋ ನೋಡಿ

Share
2 Min Read
SHARE

newsics.com

ಊಬರ್ ಚಾಲಕನೋರ್ವ ಕೊಲೆ ರಹಸ್ಯವನ್ನು ಮಹಿಳಾ ಪ್ರಯಾಣಿಕರ ಮುಂದೆ ಬಿಚ್ಚಿಟ್ಟಿರುವ ಘಟನೆ ಆತಂಕ ಮೂಡಿಸಿದೆ. “ಮತ್ತೆ ಜೈಲಿಗೆ ಹೋಗುವ ಮುನ್ನ ಸ್ವಲ್ಪ ತಿರುಗಾಡಲು ಬಂದಿದ್ದೇನೆ” ಎಂದು ಚಾಲಕ ಕ್ಯಾಬ್‌ನಲ್ಲೇ ಹರಟೆ ಹೊಡೆದಿದ್ದಾನೆ. ಪ್ರಾಣಾಪಾಯದಿಂದ ಪಾರಾಗಲು ಮಹಿಳೆ ಆತನೊಂದಿಗೆ ಅಷ್ಟೇ ಸಹಜವಾಗಿ ಮಾತನಾಡುತ್ತಾ ಇಡೀ ಘಟನೆಯನ್ನು ವೀಡಿಯೋ ಚಿತ್ರೀಕರಿಸಿದ್ದಾರೆ.
ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಉಬರ್ ಚಾಲಕನೋರ್ವ ತಾನು ತನ್ನ ಸ್ವಂತ ಚಿಕ್ಕಪ್ಪನನ್ನೇ ಕೊಲೆ ಮಾಡಿದ ಬಗ್ಗೆ ಅತ್ಯಂತ ಸಾಂದರ್ಭಿಕವಾಗಿ ಹೇಳಿಕೊಂಡಿರುವ ಘಟನೆ ನಡೆದಿದೆ. ಈ ಆಘಾತಕಾರಿ ಸಂಭಾಷಣೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ಉಬರ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಂದಿಗೆ ಮಾತನಾಡುತ್ತಾ, ತಾನು ತನ್ನ ಚಿಕ್ಕಪ್ಪನನ್ನು ‘ಪಾವಡಾ’ (ಸಲಿಕೆ/ಗುದ್ದಲಿ ಮಾದರಿಯ ಉಪಕರಣ) ದಿಂದ ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಈ ಕೊಲೆಗಾಗಿ ತಾನು ಜೈಲು ಶಿಕ್ಷೆ ಅನುಭವಿಸಿ ಬಂದಿರುವುದಾಗಿಯೂ ತಿಳಿಸಿದ್ದಾನೆ.
ವೈರಲ್ ವೀಡಿಯೋದಲ್ಲಿನ ಸಂಭಾಷಣೆ: ವೀಡಿಯೋದಲ್ಲಿ ಮಹಿಳೆ ಕೇಳುತ್ತಾರೆ, “ಅಂದರೆ ನೀವು ನಿಮ್ಮ ಚಿಕ್ಕಪ್ಪನನ್ನು ಕೊಲೆ ಮಾಡಿ ಈಗ ಇಲ್ಲಿ ತಿರುಗಾಡಲು ಬಂದಿದ್ದೀರಾ?” ಅದಕ್ಕೆ ಚಾಲಕ ಹೌದು ಎನ್ನುತ್ತಾನೆ. “ನಿಮ್ಮ ಚಿಕ್ಕಪ್ಪ ನಿಮ್ಮ ತಂದೆಯ ತಲೆಗೆ ಹೊಡೆದಿದ್ದರಾ?” ಎಂದು ಮಹಿಳೆ ಆಶ್ಚರ್ಯದಿಂದ ಕೇಳಿದಾಗ, ಚಾಲಕ “ಹೌದು, ಅದಕ್ಕೆ ನಾನು ಅವನನ್ನು ಪಾವಡಾದಿಂದ ಹೊಡೆದು ಮುಗಿಸಿಬಿಟ್ಟೆ (ಖತಂ ಕರ್ ದಿಯಾ)” ಎಂದು ವಿಕೃತವಾಗಿ ನಗುತ್ತಾ ಉತ್ತರಿಸಿದ್ದಾನೆ.
ಮತ್ತೆ ಜೈಲಿಗೆ ಹೋಗಬೇಕು! ಚಾಲಕ ಮುಂದುವರಿದು, “ನಾನು ಈಗಾಗಲೇ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಈಗ ಮತ್ತೆ ಜೈಲಿಗೆ ಹೋಗಬೇಕಿದೆ, ಅದಕ್ಕಾಗಿಯೇ ಹೋಗುವ ಮುನ್ನ ಸ್ವಲ್ಪ ತಿರುಗಾಡೋಣ ಎಂದು ಇಲ್ಲಿಗೆ ಬಂದೆ” ಎಂದು ಹೇಳಿದ್ದಾನೆ. ಚಾಲಕನ ಈ ಮಾತನ್ನು ಕೇಳಿ ಮಹಿಳೆ ಒಳಗೊಳಗೆ ದಿಗಿಲುಗೊಂಡಿದ್ದರೂ, ಆತ ತನ್ನ ಮೇಲೆ ಹಲ್ಲೆ ಮಾಡಬಾರದು ಎಂಬ ಕಾರಣಕ್ಕೆ ಅತ್ಯಂತ ಶಾಂತವಾಗಿ ಮಾತನಾಡುತ್ತಾ ಸಂಭಾಷಣೆ ಮುಂದುವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರ ಪ್ರತಿಕ್ರಿಯೆ
ಈ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ:ಆಕೆಯ ಸಂವಹನ ಕೌಶಲವೇ ಆಕೆಯನ್ನು ಬದುಕಿಸಿದೆ. ಇಂತಹ ಸಮಯದಲ್ಲಿ ಕಿರುಚಾಡದೆ ಶಾಂತವಾಗಿರುವುದು ಮುಖ್ಯ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.”ಇದು ನೋಡಲು ಭಯಾನಕವಾಗಿದೆ, ಆಕೆಯ ಜಾಗದಲ್ಲಿ ನಾನಿದ್ದಿದ್ದರೆ ಅತ್ತು ಬಿಡುತ್ತಿದ್ದೆ” ಎಂದು ಇನ್ನೊಬ್ಬರು ಬರೆದಿದ್ದಾರೆ.”ಬದುಕುಳಿಯಲು ಇಂತಹ ಸಂವಹನ ಕೌಶಲಗಳು ಅತ್ಯಗತ್ಯ” ಎಂದು ಹಲವರು ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ.

https://www.instagram.com/reel/DV_dhrlCe8z/?igsh=cmh4aWtia2J3Zjdn

ಗಂಡ-ಹೆಂಡತಿ ನಡುವಿನ ಓರಲ್ ಮತ್ತು ಆನಲ್ ಸೆಕ್ಸ್ ಅಪರಾಧವಲ್ಲ: ತೀರ್ಪು ನೀಡಿದ ಹೈಕೋರ್ಟ್

TAGGED:Uber driver reveals murder mystery in front of female passenger; watch viral video
Share This Article
Facebook Twitter Copy Link Print
Previous Article ಗಂಡ-ಹೆಂಡತಿ ನಡುವಿನ ಯಾವುದೇ ಬಗೆಯ ಲೈಂಗಿಕ ಕ್ರಿಯೆ ಅಪರಾಧವಲ್ಲ: ತೀರ್ಪು ನೀಡಿದ ಹೈಕೋರ್ಟ್
Next Article ಪ್ರೀ-ವೆಡ್ಡಿಂಗ್ ಶೂಟ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಪುಂಡರು ಹಲ್ಲೆ!

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?