newsics.com
ಬ್ಲಿಕಿಂಟ್ ಡೆಲಿವರಿ ಹುಡುಗ ಬಾಯಲ್ಲಿ ಬೀಡಿಯನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ಸುಮಾರು ಎರಡರಿಂದ ಮೂರು ಗಂಟೆ ಒಂದೇ ಸ್ಥಳದಲ್ಲಿ ನಿಂತಿರುವುದು ಕಂಡುಬಂದಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಟ್ವೀಟರ್’ನಲ್ಲಿ ಹಂಚಿಕೊಂಡ ಪೋಸ್ಟ್’ನಲ್ಲಿ, ಖಲಿಸ್ತಾನಿಗಳ ಸಹಾಯದಿಂದ ಪಾಕಿಸ್ತಾನವು ಭಾರತದಲ್ಲಿಯೂ ಫೆಂಟನಿಲ್ ಹರಡುತ್ತಿದೆ. ಅಂದ್ಹಾಗೆ, ಇದು ಅಮೆರಿಕದ ಬೀದಿಗಳನ್ನ ನಾಶಪಡಿಸಿದ ಅತ್ಯಂತ ಅಪಾಯಕಾರಿ ಮಾದಕ ವಸ್ತುವಾಗಿದೆ” ಎಂದು ಬರೆಯಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬೆರಳುಗಳಿಗೆ ಕೆಲಸ ಕೊಟ್ಟಿದ್ದಾರೆ. ಕೆಲವರು ಇದೊಂದು ಜೋಂಬಿ ವೈರಸ್, ಇದು ಅಮೆರಿಕ ಮತ್ತು ಇತರೆ ಯುರೋಪಿಯನ್ ದೇಶಗಳಲ್ಲಿ ಇದನ್ನು ನೋಡಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಮಾದಕ ವಸ್ತುಗಳ ಅತಿಯಾದ ಬಳಕೆಯಿಂದ ಉಂಟಾಗುವ ಸ್ಥಿತಿ, ಪಂಜಾಬ್ ಮತ್ತು ಚಂಡೀಗಢದ ಯುವಕರು ಈ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ದುಃಖದ ಸಂಗತಿ ಎಂದು ಹೇಳಿದ್ದಾರೆ.
https://www.newsics.com/2026/03/27/zero-duty-on-diesel-important-decision-by-the-central-government/