Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 7 ಮಕ್ಳಳಿದ್ರೂ ಅಕ್ರಮ ಸಂಬಂಧ: ಪತ್ನಿ ಜತೆ ಸ್ನೇಹಿತನನ್ನು ಗುಂಡಿಕ್ಕಿ ಕೊಂದ ಗಂಡ
ದೇಶಪ್ರಮುಖ

7 ಮಕ್ಳಳಿದ್ರೂ ಅಕ್ರಮ ಸಂಬಂಧ: ಪತ್ನಿ ಜತೆ ಸ್ನೇಹಿತನನ್ನು ಗುಂಡಿಕ್ಕಿ ಕೊಂದ ಗಂಡ

Share
2 Min Read
SHARE

newsics.com

ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ತಿಳಿದ 38 ವರ್ಷದ ವ್ಯಕ್ತಿಯೊಬ್ಬ, ಇಬ್ಬರನ್ನೂ ತನ್ನ ಮನೆಯಲ್ಲೇ ಗುಂಡಿಕ್ಕಿ ಕೊಂದಿರುವ ಘಟನೆ ಘಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ನಡೆದಿದೆ.

ಆರೋಪಿ ರಶೀದ್, ತನ್ನ ಪತ್ನಿ ಶಬನಂ ಹಾಗೂ ತನ್ನ ಆಪ್ತ ಸ್ನೇಹಿತ ಫಹೀಮ್ ನಡುವೆ ಎರಡು ವರ್ಷಗಳಿಂದ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದ. ಅಲ್ಲದೇ, ಶಬನಂ ತನ್ನನ್ನು ಬಿಟ್ಟು ಹೋಗಲು ಪ್ಲ್ಯಾನ್ ಮಾಡಿದ್ದಳು ಅನ್ನೋದು ಕೂಡ ರಶೀದ್‌ಗೆ ಗೊತ್ತಾಗಿತ್ತು.
ಸೋಮವಾರ ಸಂಜೆ ರಶೀದ್, ಫಹೀಮ್‌ನನ್ನು ಊಟಕ್ಕೆ ಮನೆಗೆ ಕರೆದಿದ್ದ. ಮೂವರೂ ಒಟ್ಟಿಗೆ ಊಟ ಮಾಡಿ, ಸಿಗರೇಟ್ ಕೂಡ ಸೇದಿದ್ದಾರೆ. ಇದಾದ ಬಳಿಕವೇ ಈ ಅಪರಾಧ ನಡೆದಿದೆ. ಈ ದಂಪತಿಯ 7 ವರ್ಷದ ಮಗ ಈ ಕೊಲೆಯನ್ನು ಕಣ್ಣಾರೆ ಕಂಡಿದ್ದಾನೆ. ರಶೀದ್ ಬೆಡ್‌ರೂಮ್‌ನಲ್ಲಿದ್ದ ಕಪಾಟಿನಿಂದ ಗನ್ ತೆಗೆದು, ಮೊದಲು ಫಹೀಮ್‌ಗೆ, ನಂತರ ತನ್ನ ಹೆಂಡತಿಗೆ ಹತ್ತಿರದಿಂದ ತಲೆಗೆ ಶೂಟ್ ಮಾಡಿದ ಅಂತ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಕೊಲೆ ಮಾಡಿದ ನಂತರ ರಶೀದ್ ತನ್ನ ಮಗನನ್ನು ನೋಡಿ, ‘ಅಬ್ ಸಬ್ ಠೀಕ್ ಹೋ ಜಾಯೇಗಾ’ (ಈಗ ಎಲ್ಲವೂ ಸರಿ ಹೋಗುತ್ತೆ) ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಕ್ಕಪಕ್ಕದವರು ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಫಹೀಮ್ ತಂದೆ ನೀಡಿದ ದೂರಿನ ಅನ್ವಯ, ಪೊಲೀಸರು ರಶೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಲಾಗಿದೆ. ರಶೀದ್‌ಗೆ ಗನ್ ಎಲ್ಲಿಂದ ಸಿಕ್ಕಿತು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖೆ ವೇಳೆ, ರಶೀದ್ ಮತ್ತು ಫಹೀಮ್ ಇಬ್ಬರಿಗೂ ಕ್ರಿಮಿನಲ್ ಹಿನ್ನೆಲೆ ಇರುವುದು ಗೊತ್ತಾಗಿದೆ. ಫಹೀಮ್ ವಿರುದ್ಧ ಕೊಲೆ ಯತ್ನ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆಯ ಹಲವು ಪ್ರಕರಣಗಳಿದ್ದವು. ಇತ್ತ ರಶೀದ್ ಕೂಡ 2023ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ.
ಇಬ್ಬರ ತಲೆಗೂ ಗುಂಡು ತಗುಲಿ ಸಾವು ಸಂಭವಿಸಿದೆ ಎಂದು ಡಿಸಿಪಿ (ಗ್ರಾಮೀಣ) ಸುರೇಂದ್ರ ನಾಥ್ ತಿವಾರಿ ಖಚಿತಪಡಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ 1.5 ವರ್ಷದಿಂದ 20 ವರ್ಷದೊಳಗಿನ ಏಳು ಮಕ್ಕಳಿದ್ದಾರೆ. ಹಿರಿಯ ಮಗನ ಮದುವೆ ನಡೆದ ಆರು ತಿಂಗಳ ಹಿಂದೆಯೇ ರಶೀದ್‌ಗೆ ಈ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿತ್ತು. ಅಂದಿನಿಂದಲೇ ಮನೆಯಲ್ಲಿ ಕಲಹ ಶುರುವಾಗಿತ್ತು ಎಂದು ಕುಟುಂಬಸ್ಥರು ಮತ್ತು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬಂಧ ಮುಂದುವರಿದಿತ್ತು, ಇದರಿಂದಾಗಿ ಆಗಾಗ ಜಗಳ ನಡೆಯುತ್ತಿತ್ತು.
ಶಬನಂ ವಿಚ್ಛೇದನ ಪಡೆಯಲು ಬಯಸಿದ್ದಳು ಮತ್ತು ತನ್ನ ಹೆಸರಿನಲ್ಲಿದ್ದ ಮನೆಯನ್ನು ಮಾರಾಟ ಮಾಡಲು ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆಯುವ ಒಂದು ವಾರಕ್ಕೂ ಮುನ್ನ ಇದೇ ವಿಚಾರವಾಗಿ ರಶೀದ್ ಮತ್ತು ಫಹೀಮ್ ನಡುವೆ ಜಗಳವಾಗಿತ್ತು. ಘಟನೆ ನಡೆದ ರಾತ್ರಿ, ಮಕ್ಕಳು ಮಲಗಿದ್ದಾರೆಂದು ಭಾವಿಸಿ ರಶೀದ್, ಮನೆಯಲ್ಲಿ ಬಚ್ಚಿಟ್ಟಿದ್ದ ಪಿಸ್ತೂಲ್‌ನೊಂದಿಗೆ ಇಬ್ಬರನ್ನೂ ಮತ್ತೊಮ್ಮೆ ಎದುರಿಸಿದ್ದಾನೆ.
ವಾಗ್ವಾದ ತಾರಕಕ್ಕೇರಿದಾಗ, ಟಿವಿ ನೋಡುತ್ತಿದ್ದ ದಂಪತಿಯ ಚಿಕ್ಕ ಮಗ ರೂಮಿಗೆ ಬಂದಿದ್ದು, ಈ ಭಯಾನಕ ಕೃತ್ಯಕ್ಕೆ ಸಾಕ್ಷಿಯಾಗಿದ್ದಾನೆ.

ಇನ್ಮುಂದೆ ನೇರವಾಗಿ ಟಿವಿಯಲ್ಲೇ ಉಚಿತ ಚಾನೆಲ್ ನೋಡಬಹುದು; ಏನಿದು ಹೊಸ ಯೋಜನೆ?

TAGGED:Husband shoots wife to death for having illegal relationship despite having 7 children
Share This Article
Facebook Twitter Copy Link Print
Previous Article ಇನ್ಮುಂದೆ ನೇರವಾಗಿ ಟಿವಿಯಲ್ಲೇ ಉಚಿತ ಚಾನೆಲ್ ನೋಡಬಹುದು; ಏನಿದು ಹೊಸ ಯೋಜನೆ?
Next Article ಒಂದೇ ದಿನ 3,760 ರೂ. ಏರಿಕೆ ಕಂಡ ಚಿನ್ನ; ಇಂದಿನ ಬೆಲೆ ಎಷ್ಟು?

Popular Posts

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

You Might Also Like

ಪ್ರಮುಖ

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖಮನರಂಜನೆ

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read
ಕರ್ನಾಟಕಪ್ರಮುಖ

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read
ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?