https://youtube.com/shorts/1G3iDuCfqaQ?si=Tja2ncvA4iaSoDUf
newsics.com
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೊತ್ತಿ ಉರಿಯುತ್ತಿರುವಾಗಲೇ, ಇರಾನ್‌ನ ಪರಮಾಣು ಚಟುವಟಿಕೆಗಳು ಇಡೀ ವಿಶ್ವದ ನಿದ್ದೆಗೆಡಿಸಿವೆ. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ಇರಾನ್ ಈಗ 440.9 ಕೆಜಿ ಯಷ್ಟು 60ರಷ್ಟು ಶುದ್ಧೀಕರಿಸಿದ ಯುರೇನಿಯಂ ಅನ್ನು ಹೊಂದಿದೆ.ತಾಂತ್ರಿಕವಾಗಿ ಇರಾನ್ ಯಾವುದೇ ಕ್ಷಣದಲ್ಲಿ ಅಣ್ವಸ್ತ್ರ ತಯಾರಿಸುವ ಹಂತಕ್ಕೆ ತಲುಪಿದೆ ಎಂಬುದು ತಜ್ಞರ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಅಣುಬಾಂಬ್ ಮತ್ತು ಡರ್ಟಿ ಬಾಂಬ್ ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವುಗಳ ನಡುವೆ ಆಕಾಶ ಭೂಮಿಯ ವ್ಯತ್ಯಾಸವಿದೆ.
ಇದು ಸಾಂಪ್ರದಾಯಿಕ ಸ್ಫೋಟಕಗಳು ಮತ್ತು ವಿಕಿರಣಶೀಲ ವಸ್ತುಗಳ ಮಿಶ್ರಣವಾಗಿದ್ದು. ಇದರ ಉದ್ದೇಶ ಅಣುಬಾಂಬ್‌ನಂತೆ ಲಕ್ಷಾಂತರ ಜನರನ್ನು ಕೊಲ್ಲುವುದಲ್ಲ, ಬದಲಾಗಿ ಸ್ಫೋಟದ ಮೂಲಕ ವಿಕಿರಣವನ್ನು ಹರಡಿ ಒಂದು ಪ್ರದೇಶವನ್ನು ದೀರ್ಘಕಾಲದವರೆಗೆ ವಾಸಕ್ಕೆ ಯೋಗ್ಯವಲ್ಲದಂತೆ ಮಾಡುವುದು.
ಡರ್ಟಿ ಬಾಂಬ್ ಅನ್ನು ಸಾಮೂಹಿಕ ಅಸ್ತವ್ಯಸ್ತಗೊಳಿಸುವ ಆಯುಧ ಎಂದು ಕರೆಯಲಾಗುತ್ತದೆ. ಇದರ ಸ್ಫೋಟದಿಂದ ತಕ್ಷಣದ ಸಾವುನೋವುಗಳು ಕಡಿಮೆ ಇದ್ದರೂ, ಇದು ಸೃಷ್ಟಿಸುವ ಮಾನಸಿಕ ಭೀತಿ ಮತ್ತು ಆರ್ಥಿಕ ನಷ್ಟ ಅಪಾರವಾಗಿದೆ. ಒಂದು ನಗರದ ಮಧ್ಯಭಾಗದಲ್ಲಿ ಇದು ಸ್ಫೋಟಗೊಂಡರೆ, ಆ ಪ್ರದೇಶವನ್ನು ವಿಕಿರಣ ಮುಕ್ತಗೊಳಿಸಲು ಬಿಲಿಯನ್ ಗಟ್ಟಲೆ ಡಾಲರ್ ಖರ್ಚಾಗುತ್ತದೆ ಮತ್ತು ವರ್ಷಗಟ್ಟಲೆ ಆ ಪ್ರದೇಶವನ್ನು ಸೀಲ್ ಮಾಡಬೇಕಾಗುತ್ತದೆ. ಡ್ರೋನ್‌ಗಳು ಅಥವಾ ಕ್ಷಿಪಣಿಗಳ ಮೂಲಕ ಇವುಗಳನ್ನು ಸುಲಭವಾಗಿ ಸಾಗಿಸಬಹುದು ಎಂಬುದು ಮತ್ತೊಂದು ಆತಂಕಕಾರಿ ವಿಷಯವಾಗಿದೆ.
ಇರಾನ್ ಅಣ್ವಸ್ತ್ರ ಸಜ್ಜಿತ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಡರ್ಟಿ ಬಾಂಬ್ ಬಳಸುವ ಸಾಧ್ಯತೆ ತೀರಾ ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಇಂತಹ ದಾಳಿಗೆ ಅಮೆರಿಕ ಭೀಕರವಾದ ಪ್ರತಿ-ದಾಳಿಯನ್ನು ನಡೆಸುತ್ತದೆ ಎಂಬುದು ಇರಾನ್‌ಗೆ ತಿಳಿದಿದೆ. ಆದರೆ, ಇರಾನ್ ಬಳಿ ಇರುವ ಯುರೇನಿಯಂ ದಾಸ್ತಾನು ಇಸ್ರೇಲ್ ಮೇಲೆ ಒತ್ತಡ ಹೇರಲು ಪ್ರಬಲ ಅಸ್ತ್ರವಾಗಿದೆ.