https://youtube.com/shorts/1G3iDuCfqaQ?si=Tja2ncvA4iaSoDUf
newsics.com
ಬೆಂಗಳೂರು: ಕರ್ನಾಟಕದ ರೈಲು ಪ್ರಯಾಣಿಕರಿಗೆ ರೈಲ್ವೆ ಮಂಡಳಿಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ ಇದುವರೆಗೆ ‘ವಿಶೇಷ ರೈಲು’ಗಳಾಗಿ ಸಂಚರಿಸುತ್ತಿದ್ದ 19 ರೈಲುಗಳನ್ನು ಅಧಿಕೃತವಾಗಿ ಖಾಯಂ ಸೇವೆಗೆ ಪರಿವರ್ತಿಸಿ ಆದೇಶ ಹೊರಡಿಸಲಾಗಿದೆ. ಈ ನಿರ್ಧಾರದಿಂದ ಕೇವಲ ಪ್ರಯಾಣಿಕರ ಅನಿಶ್ಚಿತತೆ ದೂರವಾಗುವುದು ಮಾತ್ರವಲ್ಲದೆ, ಟಿಕೆಟ್ ದರದಲ್ಲಿಯೂ ಗಣನೀಯ ಇಳಿಕೆಯಾಗಲಿದೆ.
ರಾಜ್ಯದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಲಾಗಿದೆ. 6 ಎಕ್ಸ್‌ಪ್ರೆಸ್ ರೈಲುಗಳು, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿದಂತೆ ಒಟ್ಟು 19 ರೈಲುಗಳು ಖಾಂ ಸೇವೆ ಒದಗಿಸಲಿವೆ. ಇದರಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರ ಪ್ರಯಾಣಕ್ಕೆ ಅನುಕೂಲವಾಗಲಿದೆ.
ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು.
ಈಗ ಖಾಯಂ ಸೇವೆಗೆ ಪರಿವರ್ತನೆಯಾಗುವುದರಿಂದ ಟಿಕೆಟ್ ದರದಲ್ಲಿ ಇಳಿಕೆಯಾಅಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಸ್ಲೀಪರ್ ಕೋಚ್ಗಳಲ್ಲಿ ಶೇ.30 ರವರೆಗೆ ಮತ್ತು ಸಾಮಾನ್ಯ ಟಿಕೆಟ್‌ಗಳಲ್ಲಿ ಶೇ. 10-15ರವರೆಗೆ ದರ ಕಡಿಮೆಯಾಗಲಿದೆ ಎನ್ನಲಾಗಿದೆ.
https://www.newsics.com/2026/03/24/west-asia-crisis-center-calls-all-party-meeting-tomorrow/