https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿಯು ತಮ್ಮ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದಾರೆ. ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಬಾಲಕಿಯನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ.
ತೆರೆಯ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಔದಾರ್ಯ ಮೆರೆದಿದ್ದಾರೆ. ತಮ್ಮ ಮದುವೆಗೆ ಆಮಂತ್ರಣ ನೀಡಲಿಲ್ಲವೆಂದು ಬೇಸರಗೊಂಡಿದ್ದ ಪುಟಾಣಿ ಅಭಿಮಾನಿಯೊಬ್ಬನ ಮುಗ್ಧ ಮುನಿಸನ್ನು ಗಮನಿಸಿದ ಈ ಜೋಡಿ, ಆತನನ್ನು ವಿಶೇಷವಾಗಿ ತಮ್ಮ ಮನೆಗೆ ಆಹ್ವಾನಿಸಿ ‘ಸ್ಪೆಷಲ್ ಟ್ರೀಟ್’ ನೀಡುವ ಮೂಲಕ ಅಭಿಮಾನಿಯ ಮನ ಗೆದ್ದಿದ್ದಾರೆ. ಪುಟಾಣಿ ಅಭಿಮಾನಿಗಾಗಿ ಸಮಯ ಮೀಸಲಿಟ್ಟ ಈ ತಾರಾ ಜೋಡಿಯ ನಡೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಇದನ್ನು ನೋಡಿದ ಒಬ್ಬ ಪುಟ್ಟ ಅಭಿಮಾನಿ, ನನ್ನನ್ನು ಯಾಕೆ ಮದುವೆಗೆ ಕರೆಯಲಿಲ್ಲ? ಎಂದು ವಿಡಿಯೋ ಮಾಡಿ ತನ್ನ ಮುಗ್ಧ ಬೇಸರವನ್ನು ವ್ಯಕ್ತಪಡಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಅಭಿಮಾನಿಯ ಈ ವಿಡಿಯೋವನ್ನು ಗಮನಿಸಿದ ವಿಜಯ್ ಮತ್ತು ರಶ್ಮಿಕಾ, ಆ ಪುಟ್ಟ ಬಾಲಕಿಯನ್ನು ಮತ್ತು ಆತನ ಕುಟುಂಬವನ್ನು ತಮ್ಮ ಮನೆಗೆ ಆತ್ಮೀಯವಾಗಿ ಆಹ್ವಾನಿಸಿದರು. ಸಾಕಷ್ಟು ಸಮಯ ಕಳೆದ ಈ ಜೋಡಿ, ಆಕೆಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ನೀಡಿ ‘ಸ್ಪೆಷಲ್ ಟ್ರೀಟ್’ ನೀಡಿದರು. ಈ ಜೋಡಿ ಅಭಿಮಾನಿಗಾಗಿ ಸಮಯ ಮೀಸಲಿಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
https://www.instagram.com/reel/DWGkd9MEupR/?igsh=OG84Y2IwbmV2eHQx
https://www.newsics.com/2026/03/21/from-now-on-gas-bookings-will-not-be-possible-24-hours-a-day/