https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧವು ಬರೀ ಆ ದೇಶಗಳಿಗೆ ಮಾತ್ರವಲ್ಲ, ನಮ್ಮ ಭಾರತದ ಮೇಲೂ ದೊಡ್ಡ ಹೊಡೆತ ಕೊಟ್ಟಿದೆ. ಮುಖ್ಯವಾಗಿ ಜಾಗತಿಕ ಇಂಧನ ಪೂರೈಕೆ ಮೇಲೆ ಭಾರಿ ಪರಿಣಾಮ ಬೀರಿದ್ದು, ನಮ್ಮ ದೇಶಕ್ಕೆ ಬರಬೇಕಿದ್ದ ಅಡುಗೆ ಅನಿಲದ ಪೂರೈಕೆಯಲ್ಲಿ ಬರೋಬ್ಬರಿ ಶೇ. 60 ರಷ್ಟು ಕಡಿತಗೊಂಡಿದೆ.
ಇದರಿಂದಾಗಿ ದಿಢೀರ್ ಅಂತ ದೇಶಾದ್ಯಂತ ಗ್ಯಾಸ್ ಸಿಲಿಂಡರ್‌ಗಳ ಭಾರಿ ಕೊರತೆಸೃಷ್ಟಿಯಾಗಿದ್ದು, ಮನೆಗಳಲ್ಲಿ ಅಡುಗೆ ಮಾಡೋಕೆ ಜನಸಾಮಾನ್ಯರು ಸಿಕ್ಕಾಪಟ್ಟೆ ಟೆನ್ಷನ್ ಮಾಡಿಕೊಳ್ಳುವಂತಾಗಿದೆ. ಇದರ ನಡುವೆ ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಇಲ್ಲಿಯವರೆಗೆ ಗ್ರಾಹಕರು ದಿನದ 24 ಗಂಟೆಯೂ ಐವಿಆರ್ ಅಥವಾ ಆನ್‌ಲೈನ್ ಮೂಲಕ ಗ್ಯಾಸ್ ಬುಕ್ ಮಾಡುವ ಸೌಲಭ್ಯವಿತ್ತು. ಆದರೆ ಹೊಸ ನಿಯಮಗಳ ಪ್ರಕಾರ ಬುಕಿಂಗ್ ವಿಂಡೋ ಇನ್ನು ಮುಂದೆ ದಿನದ 24 ಗಂಟೆಗಳೂ ತೆರೆದಿರುವುದಿಲ್ಲ. ನೀವು ಸಿಲಿಂಡರ್ ಬುಕ್ ಮಾಡಲು ಬಯಸಿದರೆ ಮುಂಜಾನೆ ಅಥವಾ ರಾತ್ರಿಯ ಸಮಯವನ್ನೇ ಆಯ್ಕೆ ಮಾಡಿಕೊಳ್ಳಬೇಕು.
ಗ್ರಾಹಕರು ಬೆಳಿಗ್ಗೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ನಡುವೆ ಅಥವಾ ರಾತ್ರಿ 8 ಗಂಟೆಯಿಂದ ರಾತ್ರಿ 12 ಗಂಟೆಯ ನಡುವೆ ಕರೆ ಮಾಡುವ ಮೂಲಕ ಅಥವಾ ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಂದರೆ ಸರಿಸುಮಾರು 13 ಗಂಟೆಗಳ ಕಾಲ ಬುಕಿಂಗ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.
ಕೇವಲ ಸಮಯ ಬದಲಾವಣೆ ಮಾತ್ರವಲ್ಲದೆ ಬುಕ್ಕಿಂಗ್ ಅಂತರದಲ್ಲಿಯೂ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಹಿಂದೆಲ್ಲಾ ತಿಂಗಳಿಗೆ ಎರಡು ಅಥವಾ ಮೂರು ಸಿಲಿಂಡರ್ ಬೇಕಾದಾಗ ತಕ್ಷಣ ಬುಕ್ ಮಾಡಲಾಗುತ್ತಿತ್ತು. ಆದರೆ ಈಗ ನಿಮ್ಮ ಕೊನೆಯ ಸಿಲಿಂಡರ್ ವಿತರಣೆಯಾಗಿ ಕನಿಷ್ಠ 25 ದಿನಗಳು ಕಳೆದಿದ್ದರೆ ಮಾತ್ರ ಹೊಸ ಬುಕಿಂಗ್ ಅನ್ನು ಸಿಸ್ಟಮ್ ಸ್ವೀಕರಿಸುತ್ತದೆ. 25 ದಿನಗಳು ಪೂರ್ಣಗೊಳ್ಳುವ ಮೊದಲೇ ನೀವು ಬುಕ್ ಮಾಡಲು ಪ್ರಯತ್ನಿಸಿದರೆ ನಿಮ್ಮ ಮನವಿಯನ್ನು ಸ್ವಯಂಚಾಲಿತವಾಗಿ ತಿರಸ್ಕರಿಸಲಾಗುತ್ತದೆ. ಅಕ್ರಮ ದಾಸ್ತಾನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಕಂಪನಿಗಳು ಡಿಜಿಟಲ್ ಬುಕಿಂಗ್‌ಗಳನ್ನು ಸರಳೀಕರಿಸಿವೆ.
ಭಾರತ್ ಗ್ಯಾಸ್ ಗ್ರಾಹಕರು 1800224344 ಸಂಖ್ಯೆಗೆ ವಾಟ್ಸಾಪ್ ಮೂಲಕ ಹಾಯ್ ಎಂದು ಕಳುಹಿಸುವ ಮೂಲಕ ಸಿಲಿಂಡರ್ ಆರ್ಡರ್ ಮಾಡಬಹುದು.
ಇಂಡೇನ್ ಗ್ಯಾಸ್ ಗ್ರಾಹಕರು 7588888824 ಸಂಖ್ಯೆಗೆ REFILL ಎಂದು ಸಂದೇಶವನ್ನು ಕಳುಹಿಸಬಹುದು.
ಎಚ್‌ಪಿ ಗ್ಯಾಸ್ ಗ್ರಾಹಕರು 9222201122 ಸಂಖ್ಯೆಗೆ ಬುಕ್ ಎಂದು ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು.
ಒಂದು ವೇಳೆ ನೀವು ಸಾಮಾನ್ಯ ಎಸ್‌ಎಂಎಸ್ ಬಳಸಲು ಬಯಸಿದರೆ ಭಾರತ್ ಗ್ಯಾಸ್‌ಗಾಗಿ 7715012345 ಮತ್ತು ಇಂಡೇನ್‌ಗಾಗಿ 7718955555 ಸಂಖ್ಯೆಗೆ ನಿಮ್ಮ ಸಂದೇಶವನ್ನು ಕಳುಹಿಸುವ ಮೂಲಕ ದೃಢೀಕರಣವನ್ನು ಪಡೆಯಬಹುದು.
ಸ್ಮಾರ್ಟ್ ಫೋನ್ ಇಲ್ಲದವರಿಗೆ ಅಥವಾ ಇಂಟರ್ನೆಟ್ ಬಳಸಲು ಬಾರದವರಿಗೆ ಮಿಸ್ಡ್ ಕಾಲ್ ಸೌಲಭ್ಯ ವರದಾನವಾಗಿದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಕೆಳಗಿನ ನಂಬರ್‌ಗಳಿಗೆ ಕೇವಲ ಒಂದು ಮಿಸ್ಡ್ ಕಾಲ್ ಕೊಡುವ ಮೂಲಕ ಗ್ಯಾಸ್ ಬುಕ್ ಮಾಡಬಹುದು.
ಭಾರತ್ ಗ್ಯಾಸ್ ಗ್ರಾಹಕರು 7718012345 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು.
ಇಂಡೇನ್ ಗ್ಯಾಸ್ ಗ್ರಾಹಕರು 8454955555 ಸಂಖ್ಯೆಗೆ ಕರೆ ಮಾಡಬಹುದು.
ಎಚ್‌ಪಿ ಗ್ಯಾಸ್ ಗ್ರಾಹಕರು 94936022222 ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಬಹುದು.