newsics.com
ಕಾಲೇಜು ಓದುವುದಕ್ಕೆಂದ ಬಂದು, ಅದೇ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿದ್ದ 37.229 ಗ್ರಾಂ MDMA ಡ್ರಗ್ಸ್ ಸಮೇತ ಕೇರಳದ ಕೋತಮಂಗಲಂನಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ.
ಕೇರಳದ ಕೋತಮಂಗಲಂನಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಯುವತಿ ಪೀರುಮೇಡು ಎಲಪ್ಪಾರ ಹೆಲಿಬೆರಿಯಾದ ಒಟ್ಟಪ್ಲಾಕಲ್ ಮನೆಯ ರಿಸಾನಾ ಫಾತಿಮಾ (18) ಮತ್ತು ಕೋತಮಂಗಲಂ ಇರಮಲ್ಲೂರಿನ ಪೂತೋಳಿಲ್ ಮನೆಯ ಅನಂತು ಪ್ರಸಾದ್ (24) ಎಂದು ಗುರುತಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸ್ಪೆಷಲ್ ಡ್ರೈವ್ ನಡೆಸುತ್ತಿತ್ತು. ಈ ವೇಳೆ ಕೋತಮಂಗಲಂ ಟೌನ್‌ನಲ್ಲಿ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಪ್ರಮೋದ್ ಎಂ.ಪಿ ಮತ್ತು ಅವರ ತಂಡ ತಪಾಸಣೆ ನಡೆಸಿದಾಗ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಡ್ರಗ್ಸ್ ವ್ಯವಹಾರಕ್ಕೆ ಬಳಸುತ್ತಿದ್ದ ಮೂರು ಮೊಬೈಲ್ ಫೋನ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಡುಕ್ಕಿ ಮೂಲದ ರಿಸಾನಾ, ಕೋತಮಂಗಲಂನ ಖಾಸಗಿ ಪ್ರೊಫೆಷನಲ್ ಕಾಲೇಜೊಂದರಲ್ಲಿ ಓದಲು ಬಂದಿದ್ದಳು.
ಆರೋಪಿಗಳು ದಿನಕ್ಕೆ ಸುಮಾರು 3,000 ರೂಪಾಯಿ ಬಾಡಿಗೆ ಇರುವ ಐಷಾರಾಮಿ ಹೋಟೆಲ್ ರೂಮ್‌ಗಳಲ್ಲಿ ಉಳಿದುಕೊಂಡು ಡ್ರಗ್ಸ್ ಡೀಲ್ ಮಾಡುತ್ತಿದ್ದರು. ಸದ್ಯ ಇಬ್ಬರನ್ನೂ ಕೋತಮಂಗಲಂ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.