newsics.com
ಬೆಂಗಳೂರು: ಶೇರು ಮಾರುಕಟ್ಟೆಯ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿ ಬರೋಬ್ಬರಿ 93 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿ ಜಕ್ಕೂರು ನಿವಾಸಿ ಶಬರೀಶ್ ಕುಮಾರ್ ಗೆ ಸ್ಟಾಕ್ ಟ್ರೇಡಿಂಗ್‌ನಲ್ಲಿ ವಿಪರೀತ ಹವ್ಯಾಸವಿತ್ತು. ಪತ್ನಿಯ ಮೊಬೈಲ್ ಅನ್ನು ಅವರಿಗೇ ತಿಳಿಯದಂತೆ ಬಳಸಿ, ವಿವಿಧ ಲೋನ್ ಆ್ಯಪ್‌ಗಳ ಮೂಲಕ ಭಾರಿ ಮೊತ್ತದ ಸಾಲ ಪಡೆದಿದ್ದಾನೆ.
ಬ್ಯಾಂಕ್‌ಗಳು, ಖಾಸಗಿ ಸಾಲಗಾರರು ಹಾಗೂ ಲೋನ್ ಆ್ಯಪ್‌ಗಳಿಂದ ಒಟ್ಟು 93 ಲಕ್ಷ ರೂಪಾಯಿ ಸಾಲ ಮಾಡಿ, ಆ ಹೊರೆಯನ್ನು ಪತ್ನಿಯ ಮೇಲೆ ಹಾಕಿದ್ದಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಪತ್ನಿ (37), ತನ್ನ ಪತಿ ಹಣಕ್ಕಾಗಿಯೇ ತನ್ನನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಪತ್ನಿಯ ಸ್ನೇಹಿತರು ಮತ್ತು ಸಂಬಂಧಿಕರ ಮೇಲೂ ಒತ್ತಡ ಹೇರಿ ಹಣ ಪಡೆದಿದ್ದಾನೆ ಎಂದು ತಿಳಿದುಬಂದಿದೆ.
ಪತ್ನಿಯ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಬರೀಶ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸರು ದಂಪತಿಯ ಹಣಕಾಸು ವಹಿವಾಟಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.